ಸಕ್ಕರೆ ಜಿಲ್ಲೆ ಮಂಡ್ಯದಲ್ಲಿನ ಐತಿಹಾಸಿಕ ಶ್ರೀ ರಂಗಪಟ್ಟಣ ದಲ್ಲಿರುವ ಸ್ಮಾರಕ ಲೋಕದೊಳಗೆ ಒಂದು ಸುತ್ತು.ನಿಜದ ಇತಿಹಾಸ ಕಾವೇರಿ ಹಾಗೂ ಶ್ರೀ ರಂಗನಾಥನಿಗೆ ಮಾತ್ರ ಗೊತ್ತು!!
ಭಾನುವಾರ, ಆಗಸ್ಟ್ 12, 2012
ಅವಸಾನದ ಅಂಚಿನಲ್ಲಿ ಶ್ರೀ ರಂಗಪಟ್ಟಣದ ರಾಕೆಟ್ ಕೋರ್ಟು ....!!
ಶ್ರೀ ರಂಗ ಪಟ್ಟಣದ ರಾಕೇಟು ಗಳ ಚಿತ್ರಣ [ ಚಿತ್ರ ಕೃಪೆ ವಿಕಿಪಿಡಿಯಾ ]
ಶ್ರೀ ರಂಗ ಪಟ್ಟಣದ ರಾಕೆಟ್ ಕೋರ್ಟ್ ಶ್ರೀರಂಗಪಟ್ಟಣದ ಇತಿಹಾಸ ಗಮನಿಸಿದರೆ ವಿಜ್ಞಾನದ ಇತಿಹಾಸವೂ ಅನಾವರಣ
ಗೊಳ್ಳುತ್ತದೆ. ಅಂದಿನ ದಿನದ ಯುದ್ದಗಳಲ್ಲಿ ಶ್ರೀರಂಗಪಟ್ಟಣದ ಸೈನಿಕರು ವೈರಿಗಳ
ವಿರುದ್ಧ ರಾಕೆಟ್ ಬಳಸಿ ಯುದ್ಧ ಮಾಡಿ ಸೋಲಿಸಿ ಹೊಸ ಕ್ರಾಂತಿ ಮಾಡಿದ್ದರು.ಮೈಸೂರಿನ
ಇತಿಹಾಸದಲ್ಲಿ ಅಥವಾ ಭಾರತ ಇತಿಹಾಸದಲ್ಲಿ ಯುದ್ದಗಳಲ್ಲಿ ರಾಕೆಟ್ ತಂತ್ರಜ್ಞಾನ ಬಳಸಿ
ಕೊಂದ ಕೀರ್ತಿ ಹೈದರಾಲಿ ಗೆ ಸಲ್ಲುತ್ತದೆ. ಹೌದು ಅವನ ಕಾಲದಲ್ಲಿ ಸುಮಾರು 1200 ಜನರ
ಒಂದು ಸಮೂಹ ಯುದ್ದದಲ್ಲಿ ರಾಕೆಟ್ ಬಳಕೆ ಮಾಡುವ ತಂತ್ರಗಾರಿಕೆಯ
ಪರಿಣಿತಿ ಪಡೆದಿದ್ದು , ಟಿಪ್ಪು ಸುಲ್ತಾನ್ ಕಾಲದಲ್ಲಿ ಈ ಸಮೂಹ 5000 ದಾಟಿತ್ತು .
ಯುದ್ದದಲ್ಲಿ ರಾಕೆಟ್ ಉಪಯೋಗಿಸುವ ಬಗ್ಗೆ ಟಿಪ್ಪೂಕಾಲದಲ್ಲಿ ಒಂದು ತಾಂತ್ರಿಕ
ಪುಸ್ತಕ ಬರೆಯಲಾಗಿದ್ದು ಅದನ್ನು " ಫಾತುಲ್ ಮುಜಾಹಿದೀನ್ ." ಎಂದು
ಕರೆಯಲಾಗಿದೆ. ಇವುಗಳನ್ನು ತಯಾರಿಸುತ್ತಿದ್ದ ಪ್ರದೇಶವನ್ನು "ತಾರ ಮಂಡಲ್ ಪೇಟೆ" ಎಂದೂ
ಸಹ ಕರೆಯಲಾಗುತ್ತಿತ್ತು. ಮೈಸೂರಿನ ಅಂತಿಮ ಯುದ್ದಾ ನಂತರ ಗೆದ್ದ ಬ್ರಿಟೀಷರು
ಮೈಸೂರು ರಾಕೆಟ್ ಗಳನ್ನೂ ಬ್ರಿಟನ್ ಗೆ ತೆಗೆದು ಕೊಂಡು ಹೋಗಿ ಅದನ್ನು ಸಂಶೋಧಿಸಿ ,
ಮತ್ತಷ್ಟು ಅಭಿವೃದ್ಡಿ ಪಡಿಸಿ ತಾವೂ ಸಹ ಹಲವಾರು ಯುದ್ಧಗಳಲ್ಲಿ ರಾಕೆಟ್ ಉಡಾಯಿಸಿ
ವಿಜಯದ ನಗೆ ಬೀರಿದರು. ಇಂದಿಗೂ ಕೂಡ ಶ್ರೀರಂಗಪಟ್ಟಣದ ರಾಕೆಟ್ ಗಳ ಬಗ್ಗೆ ವಿಶೇಷ
ಗೌರವ ಇದೆ. "ಅಮೇರಿಕಾದ ನಾಸಾ" , ಬ್ರಿಟೀಷ್ ಡಿಫೆನ್ಸ್ ಅಕಾಡಮಿ, ಮುಂತಾದೆಡೆ ಶ್ರೀರಂಗಪಟ್ಟಣದ ರಾಕೆಟ್ ಗಳ ಬಗ್ಗೆ ಸಂಶೊಧನೆ ನಡೆದಿದೆ . ನಮ್ಮ ದೇಶದ ನೆಚ್ಚಿನ
ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಮ್ ರವರೂ ಸಹ ತಮ್ಮ "wings of fire"
ಪುಸ್ತಕದಲ್ಲಿ ಶ್ರೀರಂಗಪಟ್ಟಣದ ರಾಕೆಟ್ ಗಳ ಬಗ್ಗೆ ಉಲ್ಲೇಖಿಸಿದ್ದಾರೆ .
ಕಸದ ಮಡಿಲಲ್ಲಿ ರಾಕೆಟ್ ಕೋರ್ಟ್
ವಿಶ್ವ ರಾಕೆಟ್ ತಂತ್ರಜ್ಞಾನದ ಇತಿಹಾಸದಲ್ಲಿ ಶ್ರೀರಂಗಪಟ್ಟಣದ ರಾಕೆಟ್ ಗಳ ಉಲ್ಲೇಖ ಇಲ್ಲದಿದ್ದರೆ ಆ ಇತಿಹಾಸ ಅಪೂರ್ಣವೆಂದೆ ಅರ್ಥ .
ಇಷ್ಟೆಲ್ಲಾ ಕೀರ್ತಿ ಕಿರೀಟ ಹೊಂದಿದ್ದ ಶ್ರೀರಂಗಪಟ್ಟಣ ದ ರಾಕೆಟ್ ಗಳಿಗೆ
ಸಂಬಂದಿಸಿದ ಒಂದು ಜಾಗ "ರಾಕೆಟ್ ಕೋರ್ಟ್" ತನ್ನ ಅವಸಾನ ಹೊಂದುತ್ತಾ ಮರಣ ಶಯ್ಯೆ
ಯಲ್ಲಿದೆ. ಹೌದು ಈ ಜಾಗದಲ್ಲಿ ರಾಕೆಟ್ ಉಡಾವಣೆ ಮಾಡುತ್ತಿದ್ದರೋ ಅಥವಾ ತಯಾರು
ಮಾಡುತ್ತಿದ್ದರೋ, ತಿಳಿಯದು ಆದರೆ ರಾಕೆಟ್ ಕೋರ್ಟ್ ಎಂದು ಇಂದಿಗೂ ಇತಿಹಾಸ
ತಿಳಿದಿರುವ ಹಲವರು ಇದನ್ನು ಗುರುತಿಸುತ್ತಾರೆ.
ರಾಕೆಟ್ ಕೋರ್ಟ್ ಒಳನೋಟ ಹಿಂದಿನದು
ರಾಕೆಟ್ ಕೋರ್ಟ್ ಒಳ ನೋಟ ಇಂದು
ಇಂದು ಈ ರಾಕೆಟ್ ಕೋರ್ಟ್ ಜನರ ಮನಸಿನಿಂದ ಮರೆಯಾಗಿದ್ದು, ಕಸದ
ಲೋಕದಲ್ಲಿ ಲೀನವಾಗುತ್ತಾ , ಮನುಷ್ಯರ ಮಲದಿಂದ ಅಲಂಕಾರ ಗೊಂಡು ಮರಣ ಶೈಯ್ಯೆ
ಯಲ್ಲಿದೆ. ಬ್ರಿಟೀಷರು ಇದನ್ನು " garison ball alley " ಎಂದೂ ಸಹ
ಕರೆದಿದ್ದಾರೆ. ಬಹುಷಃ ಬ್ರಿಟೀಷರು ಈ ಪ್ರದೇಶದಲ್ಲಿ ಚೆಂಡಿಗೆ ಸಂಬಂದಿಸಿದ ಯಾವುದೋ
ಆಟಕ್ಕೆ ಉಪಯೋಗಿಸಿರುವ ಸಾಧ್ಯತೆ ಇದೆ 80 ಅಡಿ ಉದ್ದಾ 40 ಅಡಿ ಅಗಲ , ಹಾಗು 35 ಅಡಿ
ಎತ್ತರದ ಗೋಡೆ ಗಳನ್ನೂ ಇಂದು ಕಾಣಬಹುದಾಗಿದೆ. ಇದರ ದುಸ್ತಿತಿ ಬಗ್ಗೆ ಯಾರಿಗೂ
ಯೋಚನೆಯಿಲ್ಲದೆ ಪ್ರವಾಸಿಗಳೂ ಹೋಗಲಾರದ ಹಂತಕ್ಕೆ ಈ ಸ್ಮಾರಕ ತಲುಪಿದೆ. ಸುತ್ತಲೂ
ಮನೆಗಳಿದ್ದು ಒಂದು ಓಣಿ ಮಾತ್ರ ಇಲ್ಲಿಗೆ ತಲುಪಲು ಇದೆ. ಇತಿಹಾಸದ ಮಹತ್ವದ
ಕುರುಹನ್ನು ಅಳಿಸಿಹಾಕುತ್ತಾ ಮಹಾನ್ ಭಾರತೀಯರಾಗಿ ಮೆರೆಯುತ್ತಿದ್ದೇವೆ.
ಮುಂದೊಮ್ಮೆ ಇತಿಹಾಸವನ್ನು ದುರ್ಬೀನ್ ಹಾಕಿ ಹುಡುಕ ಬೇಕಾಗುತ್ತದೆ ಅಲ್ವೇ ??
ಕೇವಲ ಇನ್ನೂರು ಚಿಲ್ಲರೆ ವರ್ಷಗಳ ಹಿಂದಿನ ಇತಿಹಾಸವೂ ಸ್ಪಷ್ಟತೆ ಕಳೆದುಕೊಂಡು ಅಂತೆ ಕಂತೆಗಳ ಸಂತೆಯಾಗಿಬಿಡುವುದು ನಮ್ಮ ಇತಿಹಾಸಪ್ರಜ್ಞೆಗೆ ಸಾಕ್ಷಿ. "ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ, ದಕ್ಕುವುದೆ ನಿನಗೆ ಜಸ ಮಂಕುತಿಮ್ಮ" ಎಂಬ ಮಾತನ್ನು ಗಟ್ಟಿಯಾಗಿ ನಂಬಿರುವವರು ನಾವು.
6 ಕಾಮೆಂಟ್‌ಗಳು:
ಈ ಸಲ ಶ್ರೀರಂಗಪಟ್ಟಣಕ್ಕೆ ಹೋದಾಗ ನೋಡುತ್ತೇನೆ ಗೆಳೆಯರಿಗೂ ತಿಳಿಸುತ್ತೇನೆ
ಬಾಲಣ್ಣ..
ಇದಕ್ಕೊಂದು ಇಲಾಖೆ ಇದೆ...!
ಸರ್ಕಾರ ಇಂಥಹ ಸ್ಮಾರಕಗಳ ಸಂರಕ್ಷಣೆಗಾಗಿ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ...!
ಇಲ್ಲಿ ಏನಾಗುತ್ತಿದೆ....!
ಎಂಥಹ ದುರಂತ ಅಲ್ವಾ?
ಎಂದಿನಂತೆ ಕಣ್ತೆರೆಯುವ ಲೇಖನ.. ಬಾಲಣ್ಣ...
ಧನ್ಯವಾದಗಳು..
Very good information sir. As your othere articles,again fantastic and giving info on unknown facts to many people.
thanks for very good information
Chenag ide sir...dhanyavada
ಕೇವಲ ಇನ್ನೂರು ಚಿಲ್ಲರೆ ವರ್ಷಗಳ ಹಿಂದಿನ ಇತಿಹಾಸವೂ ಸ್ಪಷ್ಟತೆ ಕಳೆದುಕೊಂಡು ಅಂತೆ ಕಂತೆಗಳ ಸಂತೆಯಾಗಿಬಿಡುವುದು ನಮ್ಮ ಇತಿಹಾಸಪ್ರಜ್ಞೆಗೆ ಸಾಕ್ಷಿ. "ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ, ದಕ್ಕುವುದೆ ನಿನಗೆ ಜಸ ಮಂಕುತಿಮ್ಮ" ಎಂಬ ಮಾತನ್ನು ಗಟ್ಟಿಯಾಗಿ ನಂಬಿರುವವರು ನಾವು.
ಕಾಮೆಂಟ್ ಪೋಸ್ಟ್ ಮಾಡಿ