ಸೋಮವಾರ, ಫೆಬ್ರವರಿ 6, 2012

ಶ್ರೀ ರಂಗ ಪಟ್ಟಣ ಭಾರತ ಕ್ರಿಕೆಟ್ ಇತಿಹಾಸಕ್ಕೂ ತಳುಕು ಹಾಕಿಕೊಂಡಿದೆ.!!!!

ಇತಿಹಾಸ ಕಾಲದ  ಕ್ರಿಕೆಟ್ ಪಂಧ್ಯ  ೧೭೯೯ ರ ಆಸುಪಾಸು

ಇದೇನಿದು ಶ್ರೀ ರಂಗ ಪಟ್ಟಣ ಸ್ಮಾರಖ ಪರಿಚಯ ಮಾಡಿಕೊಡುತ್ತಿದ್ದ ಇವನು ಶ್ರೀ ರಂಗ ಪಟ್ಟಣ ಇತಿಹಾಸಕ್ಕೆ ಸಂಬಂದ ಪಡದ ಕ್ರಿಕೆಟ್ ಬಗ್ಗೆ ಬರೆಯಲು ಹೊರಟನಲ್ಲಾ ಅಂತಾ ಬೇಸರಿಸಬೇಡಿ, ಈ ಊರಿನ ಇತಿಹಾಸದ  ಅಂತರಾಳ  ವಿಚಿತ್ರ ಸ್ವಾಮೀ.ಹೌದು ಇಷ್ಟು ದಿನ ಇತಿಹಾಸದ  ಸ್ಮಾರಕ ಪರಿಚಯ ಮಾಡುತ್ತಿದ್ದ ನಾನು ಸ್ವಲ್ಪ ಬದಲಾವಣೆಗಾಗಿ ಈ ವಿಶೇಷ ಲೇಖನ ಬ್ಲಾಗ್ನಲ್ಲಿ  ಹಾಕುತ್ತಿದ್ದೇನೆ .ಕ್ರಿಕೆಟ್ ನಮಗೆಲ್ಲಾ ತಿಳಿದಂತೆ ಇಂದು ಭಾರತದ ಅನಧಿಕೃತ ರಾಷ್ಟ್ರೀಯ ಕ್ರೀಡೆಯಾಗಿ ಜನಪ್ರೀಯತೆ ಗಳಿಸಿದೆ.ಕ್ರಿಕೆಟ್ ಇಂದು ಭಾರತೀಯರ ಉಸಿರಾಗಿದೆ.ಆಟಗಾರರು ಇಂದು ಚಕ್ರವರ್ತಿಗಳಾಗಿದ್ದಾರೆ. ಆದರೆ ಈ ಕ್ರಿಕೆಟ್ಗೂ ನಮ್ಮ ದೇಶದಲ್ಲಿ ಒಂದು ಇತಿಹಾಸವಿದೆ . ಬ್ರಿಟೀಷ್ ಬಳುವಳಿಯಾದ ಈ ಕ್ರಿಕೆಟ್  ಮೊದಲು ಭಾರತಕ್ಕೆ  ಕಾಲಿಟ್ಟಿದ್ದು 1725  ರಲ್ಲಿ , ಬ್ರಿಟೀಷ್ ಮೂಲದ ಕೆಲವು ನಾವಿಕರು ಕ್ರಿಕೆಟ್ ಆಡಿದರೆಂದು ಕೆಲವು ದಾಖಲೆ ಹೇಳುತ್ತವೆ ಅಧಿಕೃತವಾಗಿ  ಈ ಭಾರತ ಖಂಡದ ಮೊದಲ ಕ್ರಿಕೆಟ್ ಕ್ಲಬ್  1792  ರಲ್ಲಿ ಕಲ್ಕತ್ತಾ ಕ್ರಿಕೆಟ್ ಹಾಗು ಫುಟ್ಬಾಲ್  ಸಂಸ್ಥೆ  ಎಂಬ ಹೆಸರಿನಿಂದ ಪ್ರಾರಂಭವಾಯಿತು . ಅದಾದನಂತರ  ದೇಶದ ಬಹಳಷ್ಟು ಕಡೆ ಬಾಂಬೆ, ದೆಹಲಿ, ಮದ್ರಾಸ್,ಸೇರಿದಂತೆ ಬ್ರಿಟೀಷ್ ಅದಿಪತ್ಯ  ಇದ್ದರೂ  ಎಲ್ಲೂ ಎರಡನೇ ಕ್ರಿಕೆಟ್ ಕ್ಲಬ್ ಪ್ರಾರಂಭವಾಗಲಿಲ್ಲ. ಆದರೆ ಶ್ರೀ ರಂಗ ಪಟ್ಟಣ ಅಂತಿಮ ಯುದ್ದ 1799 ರ ಮೇ  4 ರಂದು ಮುಗಿದ ನಂತರ ಬ್ರಿಟೀಷ್ ಅಧಿಕಾರಿಗಳು ಸೇರಿ ಭಾರತದ  ಎರಡನೇ ಕ್ರಿಕೆಟ್ ಕ್ಲಬ್ ಸ್ಥಾಪಿಸುತ್ತಾರೆ ಹಾಗಾಗಿ ಭಾರತ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಶ್ರೀ ರಂಗ ಪಟ್ಟಣವೂ  ವಿಶೇಷವಾಗಿ ತನ್ನ ಗೌರವ ಪಡೆದು ಮೆರೆದಿದೆ. ಮೇಲಿನ ಮಾಹಿತಿ ನಂಬಿಕೆ ಬರಲಿಲ್ಲವೇ .ಇಲ್ಲಿದೆ ನೋಡಿ ಪುರಾವೆ
ಇತಿಹಾಸದ ಕ್ರಿಕೆಟ್ ಆಟಗಾರ.
1]  [.[ಲಿಂಕ್ :-http://www.iloveindia.com/sports/cricket/history.html],Cricket, now termed as the unofficial national sport of India, has got an old history associated with its existence in the country. The oldest references to the sport in India can be dated as early as the year 1725 when some sailors played a friendly match at a seaport in Kutch. By the year 1792, the Calcutta Cricket and Football Club had been formed, and a yet another Cricket club had been formed at Seringapatam by the year 1799

2].[http://en.wikipedia.org/wiki/1799_English_cricket_season]
In the 1799 English cricket season, Surrey again beat All-England three times. As in the previous year, the number of matches declined due to the effect of the Napoleonic War.
A cricket club was formed at Seringapatam in south India after the successful British siege.

3][http://www.indianmirror.com/games/cricket/cricket-history.html]By the year 1792 the Calcutta cricket and football club had been formed and however another cricket club had been formed during 1799 at Seringapatam in South India. On 3rd march 1845 the Sepoy cricketers had played with the European cricketers in the place Sylhet located in (today’s Bangladesh).In 1848 The First Indian club was named as the Parsee Oriental cricket Club and the first match was held in Bombay (Mumbai).The first class cricket begin in the year 1864 where a match was held up between the madras and Calcutta team. The Bombay Presidency Matches was held in the year 1877.Later that was named the Bombay Triangular and then as Bombay Quadrangular.

10 ಕಾಮೆಂಟ್‌ಗಳು:

mshebbar ಹೇಳಿದರು...

ಕ್ರಿಕೆಟ್ ನನ್ನ ಪ್ರೀತಿಯನ್ನು ಬೆಳೆಸಿಕೊಂಡಿಲ್ಲವಾದರೂ,ನಿಮ್ಮ ಚಾರಿತ್ರಿಕ ಪುರಾವೆಗೆ ತಲೆ ಬಾಗಲೇ ಬೇಕು. ಈ ಅಭಿರುಚಿಯನ್ನು ಬೆಳೆಸಿಕೊಂಡಲ್ಲಿ, ಸಮಾಜಕ್ಕೆ ನೆನಪಿನ ಕೊಂಡಿಯಾಗಬಹುದು. ಭೇಷ್ ಸುಬ್ಬು!!!!

Prabhu Iynanda ಹೇಳಿದರು...

आप का कोई जवाब नहीं, ಬಾಲು!

balasubrahmanya kesthur seetharamaiah ಹೇಳಿದರು...

@ ಎಂ. ಎಸ. ಹೆಬ್ಬಾರ್ :-) ತಮ್ಮಂತಹ ಹಿರಿಯರ ಆಶೀರ್ವಚನ ನನಗೆ ಶ್ರೀ ರಕ್ಷೆ ,ಅಭಿಮಾನದ ಅನಿಸಿಕೆಗಳು ಮನ ಮುಟ್ಟಿವೆ. ಧನ್ಯವಾದಗಳು ಸರ್.

balasubrahmanya kesthur seetharamaiah ಹೇಳಿದರು...

ಪ್ರಭು iynanda :-) ಪ್ರೀತಿ ಮಾತಿಗೆ ಕೃತಜ್ಞ. ನಿಮಗೆ ವಂದನೆಗಳು.

Badarinath Palavalli ಹೇಳಿದರು...

ಕ್ರಿಕೇಟಿನ ಚರಿತ್ರೆಯಲ್ಲಿ ಶ್ರೀರಂಗಪಟ್ಟಣ ಮೈಲುಗಲ್ಲಾದದ್ದು ಖುಷಿ ಕೊಟ್ಟಿತು. ಪುಟ್ಟ ಪಟ್ಟಣ ಇನ್ನೆಷ್ಟು ಐತಿಹ್ಯ ಸೋಜಿಗಗಳಿಗೆ ತವರು ಮನೆಯೋ? ಇತಿಹಾಸ ತಙ್ಞ ಬಾಲು ಅವರೇ ಉತ್ಕಲನ ಮಾಡಿ ಉತ್ತರಿಸುತ್ತಾ ಹೋಗಬೇಕು.

ನಿಮ್ಮ ಬಿಡುವಿರದ ಕೆಲಸಗಳ ನಡುವೆಯೂ ಛಾಯಾಗ್ರಹಣ, ಚಾರಣ, ಸಾಹಿತ್ಯ ಸೇವೆ ಮತ್ತು ಇತಿಹಾಸ ಅನ್ವೇಷಣೆಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸರ್ಕಾರಗಳು ಗುರುತಿಸಿ, ಆರ್ಥಿಕವಾಗಿ ಮತ್ತು ಪ್ರಶಸ್ತಿಗಳ ಮೂಲಕ ಸನ್ಮಾನಿಸುವಂತಾದರೇ, ಬಾಲಣ್ಣನ ಅಭಿಮಾನಿಗಳಾದ ನಮಗೂ ಹೆಮ್ಮೆ.

V.NAGENDRA PRASAD. ಹೇಳಿದರು...

ADBHUTA !!!!!!!!!!! AADARE SHRIRANGA PATTANAM IN SOUTH INDIA ANTA BAREYALAAGIDE. ADU KARNATAKADA SHRIRANGAPATTANA VE ? ATHAVA TAMILU NADINA SRIRANGAM(SRIRANGA PATTANAM)IRABAHUDE EMBA JIJNASE BARUVUDILLAVE. NANNA MATANNU ANYTHAA BHAAVISA BEDI.ANISIKE HELIDE ASHTE.

balasubrahmanya k.s. balu ಹೇಳಿದರು...

ಬದರಿನಾಥ್ ಪಲವಳ್ಳಿ:-) ಹೌದು ನಿಮ್ಮ ಮಾತು ನಿಜ ಈ ಊರಿನ ಬಗ್ಗೆ ಕೆದಕುತ್ತಾ ಹೋದಂತೆ ಅನೇಕ ವಿಚಾರಗಳು ತೆರೆದು ಕೊಳ್ಳುತ್ತಾ ಹೋಗುತ್ತದೆ. ಮುಂದೆ ಹುಡುಕಾಟದಲ್ಲಿ ಇನ್ನೇನು ಸಿಗುವುದೋ ಗೊತ್ತಿಲ್ಲಾ. ಸಿಕ್ಕ ವಿಚಾರವನ್ನು ಪರಿಶೀಲಿಸಿ ಜಾಲಾಡಿ ತಮ್ಮ ಮುಂದಿಡುವುದೇ ನನ್ನ ಕೆಲಸ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ.
ಇನ್ನು ಸನ್ಮಾನ ??? ಯಾಕೆ ಸರ್ ನಾನು ಚೆನ್ನಾಗಿರೋದು ಇಷ್ಟಾ ಇಲ್ವಾ.??

balasubrahmanya k.s. balu ಹೇಳಿದರು...

vi.naagendra prasad :-) ದಯವಿಟು ನನ್ನ ಲೇಖನದಲ್ಲಿ ನೀಡಿರುವ ಲಿಂಕ್ ಗಳನ್ನು ಮತ್ತೊಮ್ಮೆ ಓದಿ ನೋಡಿ. ಅದರಲ್ಲಿ "ಸೇರಿಂಗ ಪಟಂ" ಎಂದು ಬರೆಯಲಾಗಿದೆ.೧೭೯೯ ರಲ್ಲಿ "ಸೇರಿಂಗ ಪಟಂ" ಎಂದು ಕರೆದು ಕೊಳ್ಳುತ್ತಿದ್ದ ಊರು ದಕ್ಷಿಣ ಭಾರತದಲ್ಲಿ ಶ್ರೀ ರಂಗ ಪಟ್ಟಣ ಮಾತ್ರ ಅದಕ್ಕೆ ಆಧಾರವಿದೆ, ತಮಿಳುನಾಡಿನ ಶ್ರೀ ರಂಗಂ ಅಲ್ಲಾ ಆಗ ಶ್ರೀ ರಂಗಂ ಬ್ರಿಟೀಶ್ಆಡಳಿತ ಕೇಂದ್ರ ಆಗಿರಲಿಲ್ಲ. ಹಾಗಾಗಿ ಅದು ಶ್ರೀ ರಂಗ ಪಟ್ಟಣ ಅಂತಾ ಧೈರ್ಯವಾಗಿ ಹೇಳಬಹುದು.

[http://www.indianmirror.com/games/cricket/cricket-history.html]By the year 1792 the Calcutta
cricket and football club had been formed and however another cricket
club had been formed during 1799 at Seringapatam in South India.

adaralli

Pradeep Rao ಹೇಳಿದರು...

nice info sir..

balasubrahmanya k.s. balu ಹೇಳಿದರು...

ಪ್ರದೀಪ್ ರಾವ್ :-)ಥ್ಯಾಂಕ್ಸ್ ಪ್ರದೀಪ್ ಸರ್