ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಕಾಣಸಿಗುವ ಈ ಪುಟ್ಟ ದ್ವೀಪ ಭಾರತ ಇತಿಹಾಸದ ಒಂದು ನಕ್ಷತ್ರವೇ ಸರಿ. ಈ ಊರಿನ ಇತಿಹಾಸ ಹೇಳದೆ ಭಾರತ ದೇಶದ ಚರಿತ್ರೆ ಪೂರ್ತಿಯಾಗುವುದಿಲ್ಲ.ಇತಿಹಾಸ ಯಾವುದೇ ಕಾರಣಕ್ಕೂ ಸಮಾಜವನ್ನು ಒಡೆಯುವ ಸಾಧನವಾಗಬಾರದು ಎಂದು ನಂಬಿದವನು ನಾನು.ಶ್ರೀ ರಂಗ ಪಟ್ಟಣದ ಸ್ಮಾರಕಗಳ ಬಗ್ಗೆ ನನಗೆ ಗೊತ್ತಿರುವ ಮಾಹಿತಿ ನೀಡಲು ಈ ಬ್ಲಾಗ್ ಪ್ರಾರಂಭಿಸಿದ್ದೇನೆ.ನಾನು ನೀಡಿದ ಮಾಹಿತಿ ಬಗ್ಗೆ ಹೆಚ್ಚಿನ ಅರಿವಿದ್ದವರು ತಮ್ಮ ಮಾಹಿತಿ ಸೇರಿಸಲು ಸ್ವಾಗತಿಸುತ್ತೇನೆ.ಈ ಊರಿನಲ್ಲಿ ಇರುವ ಜನರಿಗೆ ತಿಳಿಯದೆ ಮರೆಯಾಗಿರುವ ಸ್ಮಾರಕಗಳೂ ಈ ಬ್ಲಾಗಿನಲ್ಲಿ ತೆರೆದು ಕೊಳ್ಳುತ್ತವೆ.ಈ ಬ್ಲಾಗಿನ ಉದ್ದೇಶ ದೇಶ ಕಟ್ಟುವುದೇ ಹೊರತು ದ್ವೇಷ ಬೆಳೆಸುವುದಲ್ಲ .ಪ್ರತಿ ಸಂಚಿಕೆಯಲ್ಲೂ ಒಂದು ಸ್ಮಾರಕದ ಬಗ್ಗೆ ವಿವರ ನಿಮಗೆ ಲಭಿಸುತ್ತದೆ. ಈ ಊರಿನ ಬಗ್ಗೆ ಹಲವಾರು ಆಶ್ಚರ್ಯಕರ ಮಾಹಿತಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಚಿಕೆಯಲ್ಲಿ ನನ್ನ ಬ್ಲಾಗಿನ ಹೆಸರು" ಕಾವೇರಿ ರಂಗ" ಎಂದು ನಾಮಕರಣ ಮಾಡಿದ್ದೇನೆ. ನಿಜವಾದ ಇತಿಹಾಸ ಪುರಾಣಗಳ ಘಟನೆಗಳಿಗೆ ಸಾಕ್ಷಿಯಾಗಿ ಹಲವು ಶತಮಾನಗಳಿಂದ ಶ್ರೀ ರಂಗ ಪಟ್ಟಣ ದ್ವೀಪವನ್ನು ತಬ್ಬಿದ ಕಾವೇರಿ ನದಿ, ಹಾಗು ಈ ಊರಿನ ದೇವರು ಶ್ರೀ ರಂಗ ನಾಥ ಇವರಿಬ್ಬರು ಮಾತ್ರ ಉಳಿದಿದ್ದಾರೆ.ಆದ ಕಾರಣ ನನ್ನ ಬ್ಲಾಗಿನ ಹೆಸರು " ಕಾವೇರಿ ರಂಗ" ಎಂದಾಗಿದೆ.ಇನ್ನು ಶೀರ್ಷಿಕೆ ಚಿತ್ರದಲ್ಲಿನ ಕಿಟಕಿಯಿಂದ ಬೆಳಕಿನ
ಮಳೆ ಬಂದು ಕತ್ತಲೆಯ ಲೋಕ ಪ್ರವೇಶಿಸಿದೆ.ಅದೇ ರೀತಿ ನಾವುಗಳು ಸಹ ಇಂದು ಪ್ರತೀ ಊರಿನಲ್ಲಿಯೂ ನಿಜದ ಇತಿಹಾಸ ತಿಳಿಯಬೇಕಾಗಿದೆ.ಇತಿಹಾಸದ ಬಗ್ಗೆ ಒಂದು ಮಾತಿದೆ "ಇತಿಹಾಸ ತಿಳಿಯ ದವನಿಗೆ ಮತ್ತೊಬ್ಬ ಇತಿಹಾಸ ತಿಳಿಯದವನು ತನಗೆ ಇತಿಹಾಸ ಗೊತ್ತಿಲ್ಲ ದಿರುವ ವಿಚಾರವನ್ನು ಜಾಣತನದಿಂದ ಮರೆಮಾಚಿ ಹೇಳುವುದೇ ಇತಿಹಾಸ "ನನ್ನ ಉದ್ದೇಶ ಸ್ಮಾರಕಗಳ ಪರಿಚಯ ಮಾತ್ರ ಇತಿಹಾಸ ಹೇಳುವುದಿಲ್ಲ ಆದರೆ ದಾಖಲೆಗಳ ಆಧಾರ ವಿರುವ ಮಾಹಿತಿ ಮಾತ್ರ ಬರಬಹುದು. ನಿಮಗಾಗಿ ರಂಗನ ತಿಟ್ಟಿನ ಹಕ್ಕಿಯಂತೆ ಕಾಯುತ್ತೇನೆ.
ಬನ್ನಿ ನಿಮ್ಮ ಕಣ್ಣುಗಳನ್ನು ಇತ್ತ ಹರಿಸಿ ಒಳ್ಳೆಯ ಮನಸ್ಸಿನಿಂದ ಹಾರೈಸಿ ಪೋಷಿಸಿ. ನಿಮ್ಮ ಅನಿಸಿಕೆಗಳು ಹರಿದು ಬರಲಿ ಇಂದಿನಿಂದ ಒಂದು ತಿಂಗಳು ನಿಮ್ಮ ಅನಿಸಿಕೆಗಳನ್ನು ಕಾಯ್ದು ಉತ್ತಮ ಅನಿಸಿಕೆಗಳನ್ನು ಅಳವಡಿಸಿಕೊಂಡು ಮುಂದುವರೆಯುವೆ.ಬನ್ನಿ ನಿಮ್ಮ ಸಲಹೆ ಸೂಚನೆ ನೀಡಿ ಸಹಕರಿಸಿ
9 ಕಾಮೆಂಟ್‌ಗಳು:
sir `
munduvareyiri
nimage jaya sigali
-kanasu
ಸರ್, ನಿನ್ನೆ ದಿನ ನಿಮ್ಮನ್ನು ಭೇಟಿ ಮಾಡಿದ್ದು ಸಂತಸವಾಯಿತು. ನಿನ್ನೆ ದಿನ ಮಾತಿನ ನಡುವೆ ಶ್ರೀರಂಗ ಪಟ್ಟಣದ ಇತಿಹಾಸದ ಬಗ್ಗೆ ತಿಳಿಸಿದಿರಿ. ನಿಮಗೆ ಶುಭವಾಗಲಿ.
ನನಗೂ ನಿಮ್ಮಂತೆಯೇ ಇತಿಹಾಸ, ಛಾಯಾಗ್ರಹಣ, ಬರವಣಿಗೆ ಹೀಗೆ ಆಸಕ್ತಿಯಿದೆ. ನನ್ನ ಬ್ಲಾಗಿಗೂ ಒಮ್ಮೆ ಭೇಟಿಕೊಡಿ.
ಸ್ನೇಹದಿಂದ,
ನನ್ನ ಪೂರ್ಣ ಬೆಂಬಲ ನಿಮಗೆ.
ಮುಂದುವರೆಸಿ. ನಿಜಕ್ಕೂ ರೋಮಾಂಚನ ವಾಗುತ್ತದೆ. ನಮಗೆ ಗೊತ್ತಿರದ ಸಂಗತಿಗಳು ಬಹಳಷ್ಟಿವೆ.
ನಿಮ್ಮಿಂದ ಸ್ವಲ್ಪಮಟ್ಟಿಗೆ ತಿಳಿದುಕೊಳ್ಳುವಂತಾಗಲಿ.
ಇಂತಿ
ಕನ್ನಡಹನಿಗಳ ಬಳಗ
kandita ista ide sir.. munduvarisi.. namma kale samskrutiya bagge bahalastu tiliyuva vishayagalivi.. nim ee prayatnadinda navu swalpa tiliyutteve....
ತುಂಬಾನೇ ಆಸಕ್ತಿದಾಯಕ ಹಾಗೂ ಕುತೂಹಲಕಾರೀ ವಿಷಯಗಳನ್ನು ಬಿಚ್ಚಿಟ್ಟಿದ್ದೀರಾ
ಧನ್ಯವಾದಗಳು
sir taavu needuva maahitigaligaagi kutuhaladinda kaayuttiddene..khandita munduvaresi..ellarigu ishtavaguttade..
Wonderful attempt. I had also read your post on KanandaBloggers about the Sugar factory at Palahalli. Please continue the good work.
Thank you,
Srinidhi
www.srinidhi.net.in
ಶುಭವಾಗಲಿ....
ನಿಮ್ಮ ಮಾಹಿತಿ ಅಧ್ಬುತ ವಾದ ಮಾಹಿತಿ ಕಣಜ ಸರ್
ಕಾಮೆಂಟ್ ಪೋಸ್ಟ್ ಮಾಡಿ