ಶುಕ್ರವಾರ, ಸೆಪ್ಟೆಂಬರ್ 10, 2010

ಶ್ರೀ ರಂಗಪಟ್ಟಣ ಚರಿತೆ ಹಾಗು ಗೌತಮ ಕ್ಷೇತ್ರ. ಪೌರಾಣಿಕ ಹಿನ್ನೆಲೆ!!!ನಾವರಿಯದ ಮಾಹಿತಿ.!!!!

ಶ್ರೀ ರಂಗ ಪಟ್ಟಣ ದ್ವೀಪಕ್ಕೆ ಸಂಭಂದಿಸಿದಂತೆ ಹಲವಾರು ದಂತ ಕತೆಗಳಿದ್ದು ಎಲ್ಲಾ ಕಥೆಗಳಿಗೆ ಇಂದಿನ ನಾವುಗಳು ಬಯಸುವಂತೆ ದಾಖಲೆಗಳ ಆಧಾರ ವಿಲ್ಲ ಆದಾಗ್ಯೂ  ಕಥೆಗಳಿಗೆ ಆಧಾರವಾಗಿ ಎಂಬಂತೆ ಕೆಲವು ಕುರುಹುಗಳು ಹಾಗೂ ಪ್ರಾಚ್ಯ ವಸ್ತು/ದಾಖಲೆ  ಸಂಗ್ರಹಾಲಯ ದಲ್ಲಿ  ಕೆಲವು ದಾಖಲೆಗಳು ಕಂಡುಬರುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋದನೆ ಮಾಡುವ ಅಗತ್ಯ ವಿದ್ದು ನಮ್ಮಲ್ಲಿ ಇಂತಹ ವಿಚಾರಗಳಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಲಭ್ಯ ವಿರುವ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಿದ್ದೇನೆ.ಶ್ರೀ ರಂಗಪಟ್ಟಣ ದ್ವೀಪವನ್ನು ಗೌತಮಕ್ಷೇತ್ರ  ವೆಂದೂ  ಗೌತಮ ರಂಗನಾಥ  ಸನ್ನಿಧಿ   ಎಂದೂ ಕರೆಯುವುದು ವಾಡಿಕೆ .ಇದು ಹಿಂದಿನ  ಹಲವು   ಶತಮಾನಗಳಿಂದ ಬೆಳೆದು ಬಂದಿದೆ.ಇದಕ್ಕೆ ಪುಷ್ಟಿ ಕೊಡಲೇನೋ ಎಂಬಂತೆ ಶ್ರೀ  ರಂಗನಾಥನ ಸನ್ನಿಧಿ  ಆಲಯದಲ್ಲಿ ಗೌತಮ ಋಷಿಯ ಮೂರ್ತಿಯೂ  ಸಹ ಇದೆ.ಹಾಗೆ
ಶ್ರೀ ರಂಗಪಟ್ಟಣ ದ್ವೀಪದ ಪಶ್ಚಿಮಕ್ಕೆ ಕಾವೇರಿ  ಮಡಿಲಲ್ಲಿ  ಗೌತಮ ಕ್ಷೇತ್ರ ಎಂಬ ಹೆಸರಿನ ಮತ್ತೊಂದು ದ್ವೀಪ ವಿದೆ. ಅಲ್ಲಿ  ಗೌತಮ ಮುನಿಗಳು ತಪ್ಪಸ್ಸು ಮಾಡಿದರೆಂದೂ  ಹೇಳುವ ಜಾಗದಲ್ಲಿ ಒಂದು ಮಂದಿರವಿದ್ದು ಅಲ್ಲಿ ಹಲವಾರು ಮುನಿಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ .ಎರಡನೇ ಚಿತ್ರದಲ್ಲಿ ಗೌತಮ ಕ್ಷೇತ್ರದಿಂದ ಶ್ರೀ ರಂಗ ಪಟ್ಟಣ ದ್ವೀಪ  ಕಾಣುವ  ಒಂದು ನೋಟ ವಿದೆ.ಮೂರನೇ ಚಿತ್ರದಲ್ಲಿ  ಬಲ ಗಡೆ ಒಂದು  ಕಲ್ಲಿನ ಮಂಟಪ ಕಾಣಬಹುದಾಗಿದ್ದು ಆ ಜಾಗ ದಲ್ಲಿ ಗೌತಮಋಷಿಗಳು ತಪಸ್ಸು ಮಾಡುತ್ತಿದ್ದರೆಂದು ಹೇಳುತ್ತಾರೆ. ಬಿ.ಎಲ್. ರೈಸ್ ರವರ ಎಪಿಗ್ರಾಫಿಯ ದಲ್ಲಿ ಈ ಬಗ್ಗೆ ಉಲ್ಲೇಖವಿದ್ದು  ಈ ಮಂಟಪದ ಒಂದು ಬಂಡೆಯ ಮೇಲೆ ಈ ಗೌತಮ ಮುನಿಯಿ....... ಹ......ತೀರ್ತ  ಎಂದೂ ಪಶ್ಚಿಮ ರಂಗನಾಥನ ಸಾಯುಜ್ಯವಹುದು ಎಂದು ಬರೆಯಲಾಗಿದೆ.

ದೇವಾಲಯದ .ಅಂದರೆ ಶ್ರೀ ರಂಗನಾಥನ ದೇವಾಲಯದ ಉತ್ತರ ಗೋಡೆಯ ಕಲ್ಲಿನಲ್ಲಿನ ಒಂದು ಶಾಸನದಲ್ಲಿ ಕಾವೇರಿ ವನ ಮಧ್ಯ ದೇಶೆ ವಿಲ [ಸ ].ತ್ ಶ್ರೀ ರಂಗ ಪಟ್ಟಣಾ  ಭಿದೇ. ವೈಕುಂಟೆ ಮುನಿ ಗೌತಮಸ್ಯ  ತಪಸಾ ಹೃಷ್ಟಹ ಪುರಾಣಹ ಪುಮಾನ್  ಎಂದು ಹೇಳಿ ಗೌತಮ  ಋಷಿಯ  ತಪಸನ್ನು ಸ್ಮರಿಸಲಾಗಿದೆ ಹಾಗು ಶ್ರೀ  ರಂಗನಾಥನಿಗೂ ಹಾಗೂ  ಗೌತಮ  ಋಷಿಗೂ  ಇರುವ ಸಂಭಂದ ತಿಳಿಸಲಾಗಿದೆ.ಮೂರನೇ ಹಾಗೂ  ನಾಲ್ಕನೇ  ಚಿತ್ರದಲ್ಲಿ ಶ್ರೀ ರಂಗನಾಥ ಸ್ವಾಮೀ ದೇವಾಲಯ  1820  ರಲ್ಲಿ ಇದ್ದ ರೀತಿಯನ್ನು ತೋರಿಸುವ ಅಪರೂಪದ ಚಿತ್ರಣವಿದೆ [ ಕೃಪೆ ಅಂತಜಾಲ ]. 1791 ರಲ್ಲಿ ಶ್ರೀ ರಂಗ ಪಟ್ಟಣ ಹೇಗಿತ್ತು ಎಂಬ ಬಗ್ಗೆ ಅನಾಮದೇಯ ರೊಬ್ಬರು ಚಿತ್ರಿಸಿರುವ ಮೇಲಿನ  ಚಿತ್ರಗಳು  ಅಂದಿನ ದಿನದ ಶ್ರೀ ರಂಗ ಪಟ್ಟಣ ವದ ವೈಭವ ವನ್ನು ನೆನಪಿಸುತ್ತದೆ. ಕ್ರಿ. ಶ. ೧೮೨೦  ರಲ್ಲಿ  ಶ್ರೀ ರಂಗನಾಥನ ರಥ ಹೇಗಿತ್ತು ಎಂಬ ಚಿತ್ರಣ ಇಲ್ಲಿದೆ.ಇದು ಗೌತಮ ಹಾಗೂ ಶ್ರೀ ರಂಗ ಪಟ್ಟಣದ  ಕ್ಷೇತ್ರ  ವಿಷಯವಾದರೆ.ಮುಂದುವರೆದು ಇನ್ನೊಂದು ಕಥೆ ನೋಡಿ!!!
ಇನ್ನೊಂದು  ವಿಚಾರ ಶ್ರೀ ರಂಗ ಪಟ್ಟಣ ದ  ಚರಿತೆಯದು ಈ ದಾಖಲೆಯಲ್ಲಿ ಶ್ರೀ ರಂಗ ಪಟ್ಟಣ  ದ್ವೀಪ ಸಮುಚ್ಚಯ ಮೂರು ಹಳ್ಳಿ ಗಳಿಂದ ಕೂಡಿತ್ತೆಂದೂ   ಹಂಗರಹಳ್ಳಿ, ಹೊಸಳ್ಳಿ  ಹಾಗೂ ಧ್ರುವ ಎಂಬ ಮೂರು ಹಳ್ಳಿ ಗಳು ಸೇರಿದ್ದವೆಂದೂ ಒಂದು ದಿನ  ಹಂಗರ ಹಳ್ಳಿಯ ಒಬ್ಬ ಹೆಂಗಸಿಗೆ ಸೇರಿದ   ಹಸು ತನ್ನ ಹಾಲನ್ನು ಕಾಡಿನಲ್ಲಿದ್ದ ಒಂದು ಹುತ್ತಕ್ಕೆ ಧಾರೆ ಹರಿಸಿದ ಕಾರಣ ಆ ಜಾಗದಲ್ಲಿ    ಅಗೆದಾಗ ಶ್ರೀ ರಂಗ ನಾಥನ ಮೂರ್ತಿ ಹೊರ ಬಂದಿತೆಂದೂ ಹೇಳಲಾಗಿದೆ, ನಂತರ ಹಸುವಿನ ಒಡತಿ   ಈ ಮೂರ್ತಿಗೆ ಮರದಿಂದ ಒಂದು ಆಕೃತಿ ನಿರ್ಮಿಸಿ  ಸೂರು ಕಲ್ಪಿಸಿದಳೆಂದು ತಿಳಿಸಲಾಗಿದೆ.. ಇದಕ್ಕೆ ಆಧಾರವಾಗಿ ಪ್ರಹ್ಲಾದ ಚರಿತೆ ಯನ್ನು ಉಲ್ಲೇಖಿಸಲಾಗಿದೆ.ಮೇಲಿನ ಎರಡು ಚಿತ್ರಗಳಲ್ಲಿ ಈ ಬಗ್ಗೆ ದಾಖಲೆ ನೋಡಬಹುದಾಗಿದೆ.
  ಮೊದಲಿಗೆ ರಂಗನಾಥನ ದೇವಾಲಯ ದ  ನಿರ್ಮಾಣ ಗಂಗರ ಕಾಲದಲ್ಲಿ ಕ್ರಿ.ಶ  894 ರಲ್ಲಿ     ಗಂಗರಸರ ಪ್ರಧಾನಿ ತಿರುಮಲಯ್ಯ ಎಂಬುವರು  ಈ ದೇವಾಲಯ  ನಿರ್ಮಾಣ ಮಾಡಿಸಿದರೆಂದು ತಿಳಿದುಬರುತ್ತದೆ.ನಂತರ ಕ್ರಿ.ಶ .1120 ರಲ್ಲಿ ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನ ನ ತಮ್ಮ ಉದಯಾದಿತ್ಯ ರ ಕಾಲದಲ್ಲಿ ಶ್ರೀ ರಂಗ ನಾಥ ದೇವಾಲಯ  ಮತ್ತಷ್ಟು ಅಭಿವೃದ್ದಿ ಕಂಡಿದೆ, ಹಾಗು ಶ್ರೀ ರಂಗ ಪಟ್ಟಣ ಊರೂ ಸಹ ಕೀರ್ತಿ ಗಳಿಸಿ ಅಭಿವೃದ್ದಿ ಹೊಂದಿದೆ. ಕಾವೇರಿ ನದಿಯ ದಡ ದಲ್ಲಿ  ಅಷ್ಟಗ್ರಾಮಗಳ ಅನಾವರಣ ಈ ಅವಧಿಯಲ್ಲಿ ಆಯಿತೆಂದು  ತಿಳಿದು ಬರುತ್ತದೆ.ನಂತರ ವಿಜಯ ನಗರ ಅರಸರ ಪ್ರತಿನಿಧಿ ಹಾಗೂ ನಾಗಮಂಗಲ ದ ದಂಡ ನಾಯಕ    ತಿಮ್ಮಣ್ಣ  ನು ಕ್ರಿ.ಶ  . 1454 ರಲ್ಲಿ  ವಿಜಯ ನಗರ ಅರಸರ ಅನುಮತಿ ಪಡೆದು ಶ್ರೀ ರಂಗ ಪಟ್ಟಣದಲ್ಲಿ ಕೋಟೆ ಕಟ್ಟಿ ಸಿದನೆಂದು ಹಾಗೂ ಶ್ರೀ ರಂಗ ನಾಥ ದೇವಾಲಯವನ್ನು ಅಭಿವೃದ್ದಿ ಪಡಿಸಿ  ಮತ್ತಷ್ಟು ವಿಸ್ತರಿಸಿದನೆಂದು  ದಾಖಲೆಗಳು ಹೇಳುತ್ತವೆ. ಇವನ ನಂತರ ಬಂದ ಶ್ರೀ ರಂಗರಾಯನೂ ಸಹ ವಿಜಯ ನಗರದ ಪ್ರತಿನಿಧಿ ಯಾಗಿ ಆಳ್ವಿಕೆ ನಡೆಸಿ ಆ ನಂತರ ಕ್ರಿ.ಶ . 1610 ರಲ್ಲಿ ರಾಜ ವೊಡೆಯರ್ ಶ್ರೀ ರಂಗ ಪಟ್ಟಣವನ್ನು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡು  ಮೈಸೂರು ಸಂಸ್ತಾನದ ರಾಜಧಾನಿಯಾಗಿ ಶ್ರೀ ರಂಗ ಪಟ್ಟಣ ವನ್ನು ಘೋಷಿಸಿ  ಇಲ್ಲೇ ನೆಲೆ ನಿಂತರು , ನಂತರ  ಚಾಮರಾಜ ವೊಡೆಯರ್   v [೧೬೧೭-೧೬೩೭,], ಇಮ್ಮಡಿ ರಾಜ ವೊಡೆಯರ್ [೧೬೩೭-೧೬೩೮], ಕಂಟೀರವ ನರಸರಾಜ ವೊಡೆಯರ್  1 ,[೧೬೩೮-೧೬೫೯],ದೇವರಾಜ ವೊಡೆಯರ್ [ ೧೬೫೯-೧೬೭೩] , ಚಿಕ್ಕ ದೇವರಾಜ ವೊಡೆಯರ್ [೧೬೭೩-೧೭೦೪],  ನರಸರಾಜ ಒಡೆಯರ್ [ ೧೭೦೪ -೧೭೧೪],  ಒಂದನೇ ಕೃಷ್ಣರಾಜ ಒಡೆಯರ್  [ ೧೭೧೪-೧೭೩೨], ಏಳನೇ ಚಾಮರಾಜ ಒಡೆಯರ್ [ ೧೭೩೨-  ೧೭೩೪ ] , ಎರಡನೇ ಕೃಷ್ಣರಾಜ ಒಡೆಯರ್  [ ೧೭೩೪- ೧೭೬೧ ]      ಆ ನಂತರ  ಹೆಸರಿಗೆ ಮೈಸೂರ ಅರಸರೂ ಇದ್ದೂ    ಹೈದರ್ ಅಲಿಯ   ಪ್ರತಿನಿಧಿಸಿದ್ದ ಆಡಳಿತದಲ್ಲಿ   ಎರಡನೇ  ಕೃಷ್ಣ ರಾಜ ಒಡೆಯರ್ [ ೧೭೬೧- ೧೭೬೬] 
                                ನಂಜರಾಜ ವೊಡೆಯರ್ [೧೭೬೬-೧೭೭೦ ],ಬೆಟ್ಟದ ಚಾಮರಾಜ ವೊಡೆಯರ್ v11     {೧೭೭೦-೧೭೭೬] ನಂತರ ಖಾಸಾ ಚಾಮರಾಜ ವೊಡೆಯರ್ V111  ರ  ಪ್ರತಿನಿದಿಯಾಗಿ ಹೈದರ್ ಅಲಿ ,ಆನಂತರ ಟಿಪ್ಪೂ ಸುಲ್ತಾನ್         ಆಳ್ವಿಕೆ ನಡೆಸಿ ಕ್ರಿ .ಶ.1799  ರ ಮೈಸೂರಿನ ಅಂತಿಮ ಯುದ್ದದ ಸೋಲಿನ ನಂತರ  ಶ್ರೀ ರಂಗ ಪಟ್ಟಣ ದ ಒಂದು  ಸುವರ್ಣ ಅಧ್ಯಾಯ ಮುಗಿದಿತ್ತು.  ಇಂದು ಕರ್ನಾಟಕ ರಾಜ್ಯದ ಮಂಡ್ಯಾ ಜಿಲ್ಲೆ ಯಲ್ಲಿನ ಒಂದು ಸಣ್ಣ ತಾಲೂಕ ಆಗಿ ಗತ ಇತಿಹಾಸದ ಸ್ಮಾರಕಗಳ  ಬೀಡಾಗಿ ಪ್ರವಾಸಿಗಳನ್ನು ಕೈಬೀಸಿ ಕರೆದಿದೆ.ಬನ್ನಿ ಮುಂದಿನ  ಸಂಚಿಕೆಯಲ್ಲಿ ಶ್ರೀ ರಂಗನ ದರ್ಶನಕ್ಕೆ ಹೋಗೋಣ.

6 ಕಾಮೆಂಟ್‌ಗಳು:

ಮನಮುಕ್ತಾ ಹೇಳಿದರು...

ಫೋಟೊಗಳೊ೦ದಿಗೆ ತು೦ಬಾ ಉತ್ತಮ ಮಾಹಿತಿಗಳನ್ನು ಕೊಟ್ಟು ಸುಮಧುರ ಹಾಡುಗಳನ್ನು ಕೊಟ್ಟಿದ್ದೀರಿ.
ಬರೆದ ಶೈಲಿ ವಿವರಣೆ ಹಿಡಿಸಿತು.ಅನೇಕ ಗೊತ್ತಿರದ ವಿಷಯಗಳನ್ನು ನಿಮ್ಮ ಲೇಖನಗಳು ತಿಳಿಸುತ್ತಿವೆ.
ತು೦ಬಾ ಧನ್ಯವಾದಗಳು.

Shiv ಹೇಳಿದರು...

ಬಾಲು ಅವರೇ,

ಶ್ರೀರಂಗಪಟ್ಟಣದ ಬಗ್ಗೆ ಅರಿಯದ ಅನೇಕ ಮಾಹಿತಿಗಳು ನಿಮ್ಮ ಬ್ಲಾಗ್ ಓದಿದ ಮೇಲೆ ಗೊತ್ತಾದವು. ಇಂತಹ ಉಪಯುಕ್ತ ಲೇಖನಕ್ಕೆ ಧನ್ಯವಾದಗಳು.

ವಿ.ಆರ್.ಭಟ್ ಹೇಳಿದರು...

ಸಚಿತ್ರಲೇಖನ ಬಹಳ ಖುಷಿ ಕೊಟ್ಟಿತು, ಸ್ಥಳವನ್ನು ನೋಡಿದರೂ ಮಾಹಿತಿ ಸಿಗಬೇಕಲ್ಲ ? ಒಳ್ಳೆಯ ಕೆಲಸ, ಧನ್ಯವಾದಗಳು

Badarinath Palavalli ಹೇಳಿದರು...

Very informative article, I have mailed this link to all my friends sir.
Thamks for visiting my blog

- ಕತ್ತಲೆ ಮನೆ... ಹೇಳಿದರು...

uttama lekhana..

ಸೀತಾರಾಮ. ಕೆ. / SITARAM.K ಹೇಳಿದರು...

ಇತಿಹಾಸದ ಮರೆಯಾದ ಪುಟಗಳನ್ನೂ ಹೆಕ್ಕಿ ಮಾಹಿತಿ ನೀದುತ್ತಿರುವದಕ್ಕೆ ತಮಗೆ ವಂದನೆಗಳು.