ಭಾನುವಾರ, ಸೆಪ್ಟೆಂಬರ್ 19, 2010

ಬನ್ನಿ ಕಾವೇರಿ ರಂಗನ ದರುಶನಕೆ !!! ದೇವಾಲಯದ ಅಂಗಳಕೆ !!!ಪಂಡಿತ್ ಭೀಮ್ ಸೇನ್ ಜೋಷಿಯವರು ಭಕ್ತಿ ತುಂಬಿ ಹಾಡಿದ ಕಂಗಳಿದ್ಯಾತಕೋ ಹಾಡಿನಿಂದ ನಿಮ್ಮನ್ನು ಸ್ವಾಗತಿಸುತ್ತೇನೆ. ಬನ್ನಿ ಕಾವೇರಿ ರಂಗನ ದರುಶನಕ್ಕೆ ಮೊದಲು ಕಾವೇರಿ ನದಿಗೆ ಹೋಗಿ ಬರೋಣ ಶ್ರೀ ರಂಗ ಪಟ್ಟಣದ  ಆದಿ ರಂಗನ  ,[ ಪಶ್ಚಿಮ ರಂಗ, ಗೌತಮ ರಂಗ , ಕಾವೇರಿ ರಂಗ  ಇನ್ನೂ ಹಲವಾರು ಹೆಸರಿನಿಂದ ಕರೆಯಬಹುದು ] ಸನ್ನಿದಾನದಲ್ಲಿ ಶ್ರೀ ರಂಗ ಪಟ್ಟಣದ ಸುತ್ತ  ಪ್ರೀತಿಯ ಆಲಿಂಗನ  ಮಾಡುವ ಕಾವೇರಿ ತಾಯಿಯ  ದರುಶನ ಮಾಡಿ ರಂಗನ ದರುಶನಕೆ  ಸಿದ್ದರಾಗೋಣ. ಸಾಮಾನ್ಯ ವಾಗಿ ಬರುವ  ಪ್ರವಾಸಿಗಳಿಗೆ ಸಾಕಷ್ಟು ಸಮಯ ಇಲ್ಲದ ಕಾರಣ ನಿಧಾನವಾಗಿ ದೇವಾಲಯ ನೋಡಲು ಸಾಧ್ಯವಾಗದು.ಬನ್ನಿ ಮುಂದೆ ಹೋಗೋಣ.ಬನ್ನಿ   ಶ್ರೀ ರಂಗ ನಾಥ ನ ಆಲಯ ಪೂರ್ವಾಭಿಮುಖ ವಾಗಿದೆ ಒಳಗೆ ಪ್ರವೇಶಿಸುವಾಗ  ತಕ್ಷಣವೇ ಬಾಗಿಲಿನ ಒಳಗಡೆ ಗೋಡೆಗೆ ತಾಗಿದಂತೆ ಶ್ರೀ ರಂಗ ನಾಥನ ದರ್ಶನ ಭಾಗ್ಯ ಈ ರೀತಿ ಆಗುತ್ತದೆ.ಬಹುಷಃ  ಯಾವುದೇ ದೇವಾಲಯದಲ್ಲಿಯೂ ಪ್ರವೇಶ ದ್ವಾರದಲ್ಲಿ  ಮುಖ್ಯ  ದೇವರು ಇರುವುದು ನನಗೆ ತಿಳಿದಿಲ್ಲ.ಗರ್ಭ ಗುಡಿಯ ರಂಗನಾಥನ  ಮೊದಲು ಇಲ್ಲೇ ನಿಮಗೆಪ್ರಥಮ ದರ್ಶನ್ ಸಿಗುತ್ತದೆ. ಹಾಗೆ ಬನ್ನಿ ದೇವಾಲಯದ ಒಳ ಆವರಣಕ್ಕೆ ಹೋಗೋಣ.ಸುಂದರ ಮುಖ ಮಂಟಪದ ಮೊಗಸಾಲೆಯಲ್ಲಿ ನಿಮ್ಮನ್ನು ವಿಷ್ಣುವಿನವಿವಿಧ ಅವತಾರಗಳ ಅಪರೂಪದ ದರ್ಶನ ನಿಮಗೆ ಸಿಗುತ್ತದೆ.ಹಾಗೆ ಎಡಗಡೆ ಪಕ್ಕಕ್ಕೆ ಬನ್ನಿ ಪ್ರದಕ್ಷಿಣೆ ಹಾಕಿದ ಹಾಗು ಆಗುತ್ತೆ ದೇವಾಲಯ ನೋಡಿದ ಹಾಗು ಆಗುತ್ತೆ.ಅರೆ ಇಲ್ಲೊಂದು ಶಾಸನ ಕಲ್ಲು ಇದೆತಮಿಳು ಲಿಪಿ ಹೊಂದಿರುವ ಇದು ಮಸುಕಾಗಿದೆ. ಅಕ್ಷರಗಳು ಸ್ಪಷ್ಟವಾಗಿ ಕಾಣುವುದಿಲ್ಲ . ಬಿ.ಎಲ್.ರೈಸ್  ರವರ ಪ್ರಕಾರ ಈ ಶಾಸನವು  ಕ್ರಿ.ಶ. ೧೨೧೦ ಕ್ಕೆ ಸಂಭಂದಿಸಿದೆ ಎಂದು ತಿಳಿಸುತ್ತದೆ,.ವೀರ ಭಲ್ಲಾಳ ದೇವನ ಆಳ್ವಿಕೆ ಉಲ್ಲೇಖವಿದ್ದು  ಗ್ರಾಮ ದತ್ತಿ ನೀಡಿದ ಬಗ್ಗೆ  ಮಾಹಿತಿ ನೀಡುತ್ತದೆ.ಸ್ವಲ್ಪ ದೂರದಲ್ಲಿ ಕೆಲವು ಹೆಜ್ಜೆ ಹಾಕಿದರೆ ಒಂದು ಕಲ್ಲಿನ ಮಂಟಪ ನೋಡಬಹುದು  ಕೆಲವೇ ಹೆಜ್ಜೆಗಳನ್ನು ಉತ್ತರದ ಕಡೆ ಹಾಕಿದರೆ ಸಿಗುವುದೇ  ಮತ್ತೊಂದು ವಿಷ್ಣು ಸನ್ನಿದಿ  ಇಲ್ಲಿ ಶ್ರೀನಿವಾಸನ ದೇವಾಲಯ ವಿದೆ ವಿಶೇಷ ದಿನಗಳಲ್ಲಿ ಇಲ್ಲಿ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ಮೂಲಕ ಬರುವ ಭಕ್ತಾದಿಗಳಿಗೆ ಇಲ್ಲಿನ ಶ್ರೀನಿವಾಸನ ದರ್ಶನ ಭಾಗ್ಯ ದೊರಕುತ್ತದೆ.ಈ ದೇವಾಲಯದಲ್ಲಿ ಕಲ್ಲಿನ ಎರಡು ಆನೆಗಳ ಮೂರ್ತಿಗಳು ನೋಡಲು ಸುಂದರವಾಗಿವೆ.ಮುಂದೆ ಸ್ವಲ್ಪ ದೂರ ಹೆಜ್ಜೆ ಹಾಕಿದರೆ ನಿಮಗೆ ಸಿಗುವ ಬಾಗಿಲು "ಸ್ವರ್ಗದಬಾಗಿಲು " ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಬಾಗಿಲ ಮೂಲಕ ಮೊದಲು ಶ್ರೀ ರಂಗ ನಾಥ ಉತ್ಸವ ಹೊರಬರುತ್ತದೆ ನಂತರ ಭಕ್ತಾದಿಗಳು ಅನುಸರಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಈ ಬಾಗಿಲು ತೆರೆಯಲ್ ಪಡುತ್ತದೆ .ಹಾಗೆ ಬನ್ನಿ ನಿಮಗೆ ಈಗ ಸಿಗುವುದು ಒಂದು ಕಲ್ಲಿನ ಮಂಟಪದ ಹತ್ತಿರ ವೃಂದಾವನ  ಹತ್ತಿರಬನ್ನಿ  ನೋಡೋಣ.ವೃಂದಾವನದ ನಾಲ್ಕು  ದಿಕ್ಕುಗಳಿಗೂ ಮುಖಮಾಡಿದ ದಕ್ಷಿಣಕ್ಕೆ ಮುಖಮಾಡಿದ ಶ್ರೀ ರಂಗನಾಥ , ಪಶ್ಚಿಮ ದಿಕ್ಕಿಗೆ ವೇಣುಗೋಪಾಲ,ಉತ್ತರ ದಿಕ್ಕಿಗೆ ಜನಾರ್ಧನ ಹಾಗು ಪೂರ್ವ ದಿಕ್ಕಿಗೆ ಕೃಷ್ಣ  ನ ದರ್ಶನ ಸಿಗುತ್ತದೆ. ದಕ್ಷಿಣಕ್ಕೆ ಮುಖಮಾಡಿರುವ ರಂಗನಾಥನ ವಿಗ್ರಹದ ಶೇಷನ ಹೆಡೆ ಸ್ವಲ್ಪ ಮುಕ್ಕಗಿದೆ ಉಕಿದಂತೆ ನೋಡಲು ಸುಂದರವಾಗಿದೆ. ಇದರ ಪಕ್ಕದಲ್ಲೇ ಒಂದು ಪುಟ್ಟ ಕೊಳವಿದ್ದು ನೋಡಲು ಸುಂದರವಾಗಿದೆ. ಕೆಲವೇ ಹೆಜ್ಜೆಗಳ ಅಂತರದಲ್ಲಿ ಮತ್ತೊಂದು ಶಾಸನ ಕಲ್ಲಿದೆ ಈ ಶಾಸನದಲ್ಲಿ ವಿಜಯನಗರ ದ  ಅಚ್ಯುತ ದೇವರಾಯನ  ಉಲ್ಲೇಖವಿದ್ದು  ಆ ಸಮಯದಲ್ಲಿ ನೀಡಿದ ದತ್ತಿಗಳ ಬಗ್ಗೆ ತಿಳಿಸಲಾಗಿದೆ. ಇಲ್ಲಿಗೆ ಮೊದಲ ಹೊರ ಪ್ರಾಂಗಣದ ಪ್ರದಕ್ಷಿಣೆ ಮುಗಿಯುತ್ತದೆ.ಈ ಗಾಗಲೇ ನೀವು ಎರಡು ಭಾರಿ ಶ್ರೀ ರಂಗ ನಾಥನ ದರ್ಶನ ಮಾಡಿದ್ದೀರಿ  ಇನ್ನೂ ಹಲವಾರು ಮಾಹಿತಿಗಳಿವೆ   ಪಶ್ಚಿಮ ರಂಗನಾಥನ ದರ್ಶನ ಮಾಡುವ ಮೊದಲು ಸ್ವಲ್ಪ ವಿಶ್ರಾಂತಿ ಪಡೆಯಿರಿ   ಮತ್ತೆ ಮುಂದುವರೆಯೋಣ.ಓ.ಕೆ.

6 ಕಾಮೆಂಟ್‌ಗಳು:

ashokkodlady ಹೇಳಿದರು...

Baalu sir,

lekhanada moolkave darshana maadisidiri, very nice, dhanyavadagalu...

Deep ಹೇಳಿದರು...

Baalu,

Photoglu channgive, Devalayada gopurada jote tegeda framegalu ista aytu.

Nimma jote ondu 'patna" trip plan madodu haage pending ide..

bega madbeku :-)

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಬಾಲು ಸರ್..

ಚಂದದ ಫೋಟೊಗಳೋಡನೆ...
ನಮ್ಮನ್ನೆಲ್ಲ ಶ್ರೀರಂಗಪಟ್ಟಣದ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು...

Shivaram H ಹೇಳಿದರು...

ನಿಮ್ಮ ಫೋಟೋ ಸಂಗ್ರಹ ಚೆನ್ನಾಗಿದೆ. ಕಾವೇರಿ ರಂಗನ ದೇವಾಲಯದ ದೃಶ್ಯಗಳು ತುಂಬಾ ಚೆನ್ನಾಗಿವೆ. ಜೊತೆಗೆ ನಿಮ್ಮ ಸಂಗೀತ ಸಂಗ್ರಹವೂ ಕೂಡ.ನಿಮ್ಮ ಹವ್ಯಾಸ ಅವ್ಯಾಹತವಾಗಿ ಸಾಗಲೆಂದು ಹಾರೈಸುವೆ,
.

Vishnu Priya ಹೇಳಿದರು...

Good One!

ಸೀತಾರಾಮ. ಕೆ. / SITARAM.K ಹೇಳಿದರು...

ಸುಂದರ ಚಿತ್ರಗಳು