ಶುಕ್ರವಾರ, ಜೂನ್ 1, 2012

ಬ್ರಿಟೀಷರು ತಯಾರಿಸಿದ್ದ ಸೆರಿಂಗಪಟಂ ಹೆಸರಿನ ಒಂದು ಯುದ್ದ ನೌಕೆ

ಸೆರಿಂಗ ಪಟಂ ನೌಕೆ

ಇತಿಹಾಸದ ವಿಶೇಷವೇ ಹಾಗೆ ಯಾವುದೋ ಮಾಹಿತಿ ಎಲ್ಲೋ ಅಡಗಿ ಕುಳಿತಿರುತ್ತದೆ.ಯಾವ ಊರಿನ  ಬಗೆಗಿನ ಐತಿಹಾಸಿಕ ಘಟನೆ ಇನ್ಯಾವ ಊರಿನಲ್ಲೋ  ನಡೆದಿರುತ್ತದೆ. ಅಂತಹ ಒಂದು ಆಸಕ್ತಿದಾಯಕ ಮಾಹಿತಿ ಇಲ್ಲಿದೆ ನೋಡಿ . ಬ್ರಿಟೀಷರಿಗೆ "ಸೆರಿಂಗ ಪಟಂ " ಅಥವಾ" ಶ್ರೀ ರಂಗ ಪಟ್ಟಣ " ಎಂಬ ಊರಿನ ಬಗ್ಗೆ ಅದೇನು ಸೆಳೆತವೋ ಕಾಣೆ ಬಹುಷಃ ಆ ಕಾಲದಲ್ಲಿ ಈ ಊರಿನ ಹೆಸರಿನಲ್ಲಿ ಹಲವಾರು ಆಸಕ್ತಿದಾಯಕ ಐತಿಹಾಸಿಕ  ಕಾರ್ಯಗಳನ್ನು ಮಾಡಿದ್ದಾರೆ. ಅಂತಹ ಒಂದು ಘಟನೆ ಇಲ್ಲಿದೆ.ಎಲ್ಲರಿಗೂ ತಿಳಿದಂತೆ ಶ್ರೀ ರಂಗ ಪಟ್ಟಣದ  ಮೇಲೆ ಬ್ರಿಟೀಷರು 4 ಮೇ 1799 ರಲ್ಲಿ ವಿಜಯ ಸಾಧಿಸಿದರು. ಆ ನಂತರ "ಬ್ರಿಟೀಶ್ ರಾಯಲ್ ನ್ಯಾವಿ " ವತಿಯಿಂದ" ಸೆರಿಂಗ ಪಟಂ "  ಹೆಸರಿನ ಒಂದು ಯುದ್ದ ನೌಕೆ ತಯಾರಿಸಲು ಉದ್ದೇಶಿಸಿ , "ಬಾಂಬೆ ಡಾಕ್ ಯಾರ್ಡ್" ನಲ್ಲಿ  ಈಸ್ಟ್ ಇಂಡಿಯಾ ಕಂಪನಿಗೆ  ನೌಕೆ ತಯಾರಿಸಲು  ದಿನಾಂಕ  21 -08 -1813 ರಲ್ಲಿ  ಸೂಚಿಸಲಾಯಿತು.ಅದರಂತೆ ಈಸ್ಟ್ ಇಂಡಿಯಾ ಕಂಪನಿ ದಿನಾಂಕ 5 ಸೆಪ್ಟೆಂಬರ್  1819  ರಿಂದ 10 ಏಪ್ರಿಲ್  1821 ರವರೆಗೆ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ "ಸೆರಿಂಗ ಪಟಂ " ಹೆಸರಿನ ಯುದ್ಧ ನೌಕೆಯನ್ನು ತಯಾರಿಸಿ  "ಬ್ರಿಟೀಶ್ ರಾಯಲ್ ನ್ಯಾವಿ " ವಶಕ್ಕೆ ನೀಡಲಾಯಿತು. ನಂತರ ಈ ನೌಕೆ ಹಲವಾರು ಐತಿಹಾಸಿಕ ಸೇವೆ ಸಲ್ಲಿಸಿ "ಸೆರಿಂಗ ಪಟಂ " ಅಥವಾ "ಶ್ರೀ ರಂಗ ಪಟ್ಟಣ" ಹೆಸರನ್ನು ಪ್ರಸಿದ್ದ ಗೊಳಿಸಿದೆ. ಉತ್ತಮ ಸೇವೆಸಲ್ಲಿಸಿದ ಈ ನೌಕೆಯನ್ನು ಆಫ್ರಿಕಾ ಖಂಡದ "ಕೇಪ್ ಆಫ್ ಗುಡ್ ಹೋಪ್" ನಲ್ಲಿ    1873  ರ ವರ್ಷದಲ್ಲಿ   ಒಡೆದು ಹಾಕಲಾಯಿತು . ಈ ನೌಕೆ ಸಾಗರದಲ್ಲಿ  ಪ್ರ ಪ್ರಥಮ ವಾಗಿ  ಅಂಚೆ ಸಾಗಿಸಿ ದಾಖಲೆ ಮಾಡಿದ ನೆನಪಿನಲ್ಲಿ ಒಂದು ಅಂಚೆ ಚೀಟಿಯನ್ನು ಈ ನೌಕೆಯ ಸ್ಮರಣಾರ್ಥ ಹೊರಡಿಸಲಾಗಿದೆ.

ಭಾರತ ದೇಶದ ಒಂದು ಊರಿನ  ಹೆಸರನ್ನು ಇತಿಹಾಸದಲ್ಲಿ ಬೆಳಗಿಸಿದ ಆ ನೌಕೆಗೆ  ನಾವೆಲ್ಲಾ ಸಲಾಂ ಹೇಳೋಣ ಅಲ್ವೇ.{ ಈ ಲೇಖನದ ಸಂಪೂರ್ಣ  ಮಾಹಿತಿಯನ್ನು     http://en.wikipedia.org/wiki/Seringapatam_class_frigate  ಹಾಗೂ   http://www.shipstamps.co.uk/forum/viewtopic.php?f=2&t=8131#!lightbox/0/    ಅಂತರ್ ಜಾಲ ತಾಣ ಗಳಿಂದ ಕೃತಜ್ಞತಾ ಪೂರ್ವಕವಾಗಿ ಪಡೆಯಲಾಗಿದೆ.}

3 ಕಾಮೆಂಟ್‌ಗಳು:

Badarinath Palavalli ಹೇಳಿದರು...

ನಮಸ್ಕಾರ ಬಾಲಣ್ಣ,

ಉತ್ತಮ ಮಾಹಿತಿಯ ಬರಹದೊಂದಿಗೆ ಬ್ಲಾಗಿಗೆ ವಾಪಸ್ಸಾಗಿದ್ದಕ್ಕೆ ಧನ್ಯವಾದಗಳು.

ಬಹುಶಃ ಶ್ರೀರಂಗಪಟ್ಟಣವನ್ನು ಆಕ್ರಮಿಸಲು ಬ್ರಿಟೀಷರು ಹರಸಾಹಸ ಮಾಡಿರ ಬೇಕು, ಅದರ ವಿಜಯೋತ್ಸವದ ಪ್ರತೀಕವಾಗಿ ಇಂತಹ ನೌಕೆಯನ್ನು ನಿರ್ಮಿಸಿದರು ಅಂತ ಕಾಣುತ್ತೆ.

ಇನ್ನು ಕಾಣೆಯಾಗಬೇಡಿ ಎಂದು ವಿನಂತಿಸುತ್ತಾ, ನಮಸ್ಕಾರ...

Dr.D.T.Krishna Murthy. ಹೇಳಿದರು...

ಚೆಂದದ ಮಾಹಿತಿಯುಕ್ತ ಲೇಖನ ಬಾಲಣ್ಣ.ಹೀಗೇ ಬರೆಯುತ್ತಿರಿ ಮತ್ತು ನಮ್ಮ ಬ್ಲಾಗಿಗೂ ತಪ್ಪದೆ ಬರುತ್ತಿರಿ.

ಮನಸು ಹೇಳಿದರು...

ಒಳ್ಳೆಯ ಮಾಹಿತಿ ಬಾಲು ಸರ್... ನೀವು ಯಾವಾಗಲೂ ಇಂತಹ ಮಾಹಿತಿ ನೀಡುತ್ತಲೇ ಬಂದಿದ್ದೀರಿ... ಮತ್ತಷ್ಟು ವಿಷಯಗಳನ್ನು ತಿಳುಸ್ತಾನೇ ಇರಿ. ಧನ್ಯವಾದಗಳು