ಭಾನುವಾರ, ಫೆಬ್ರವರಿ 12, 2012

ಶ್ರೀ ರಂಗ ಪಟ್ಟಣದಲ್ಲಿ ಫ್ರೆಂಚ್ ಕ್ರಾಂತಿಕಾರಿ ಜಾಕೊಬಿನ್ ಕ್ಲಬ್ ಇತ್ತಂತೆ ...........................! ಜಾಕೊಬಿನ್ ಕ್ಲಬ್ ಎಂದರೇನು ?


ಜಾಕೊಬಿನ್  ಕ್ಲಬ್  ಲಾಂಛನ [ಚಿತ್ರ ಕೃಪೆ ಅಂತರ್ಜಾಲ]
ಹೌದು ಇತಿಹಾಸ ಕೆದಕುತ್ತಾ ಹೋದಂತೆ ಮತ್ತಷ್ಟು ಹೊಸ ವಿಚಾರ  ಹೊರಬರುತ್ತದೆ. ಕಳೆದ ಸಂಚಿಕೆಯಲ್ಲಿ ಶ್ರೀ ರಂಗ ಪಟ್ಟಣ ಕ್ರಿಕೆಟ್ ಇತಿಹಾಸಕ್ಕೆ ತಳುಕು    ಹಾಕಿಕೊಂಡಿತ್ತು, ಈ ಸಂಚಿಕೆಯಲ್ಲಿ ಮತ್ತಷ್ಟು ಅಚ್ಚರಿಯಾಗಿ ಫ್ರಾನ್ಸ್  ಅಂತರ್ ರಾಷ್ಟ್ರೀಯ ಸಂಘಟನೆ "ಜಾಕೊಬಿನ್ ಕ್ಲಬ್ "  ಶಾಖೆ  ಅನ್ನು ಭಾರತ ಖಂಡದಲ್ಲಿ ಹೊಂದಿದ್ದ ಏಕೈಕ ತಾಣವಾಗಿ ಹೊಮ್ಮಿದೆ.ಬನ್ನಿ ಮೊದಲು ಫ್ರಾನ್ಸ್ ನ ಜಾಕೊಬಿನ್ ಕ್ಲಬ್ ಎಂದರೇನು ತಿಳಿಯೋಣ.
ಫ್ರಾನ್ಸ್ ದೇಶದ ಜಾಕೊಬಿನ್ ಕ್ಲಬ್ ನೋಟ[ಚಿತ್ರ ಕೃಪೆ ಅಂತರ್ಜಾಲ ]

1789  ರ  ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಸಮಯವಾಗಿತ್ತು , ಆ ಸಂದರ್ಭದಲ್ಲಿ ಒಂದು ಕ್ರಾಂತಿ ಕಾರಿ ದೋರಣೆ ಉಳ್ಳ  "ಜಾಕೊಬಿನ್ ಕ್ಲಬ್ "    ಅಸ್ತಿತ್ವಕ್ಕೆ ಬಂದಿತು , ಇದರ ಹಲವು ಕಾರ್ಯಕ್ರಮಗಳು ಅಂದಿನ ಫ್ರಾನ್ಸ್ ದೇಶ ದ ಜನರಿಗೆ ಇಷ್ಟವಾದ ಕಾರಣ ಬಹಳ ಬೇಗ ತನ್ನ ಶಾಖೆಗಳನ್ನು ಫ್ರಾನ್ಸ್ ದೇಶಾದ್ಯಂತ ವಿಸ್ತರಿಸಿಕೊಂಡು 1789  ರಿಂದ ಸುಮಾರು 1800 ರವರೆಗೂ ಫ್ರಾನ್ಸ್ ದೇಶದ ಕ್ರಾಂತಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಿತು.ಅಂತಹ ಒಂದು ಸಂಸ್ಥೆಯ ಒಂದು ಶಾಖೆ  ಶ್ರೀ ರಂಗ ಪಟ್ಟಣದಲ್ಲಿ ಅಸ್ತಿತ್ವದಲ್ಲಿತ್ತು. ಇದರ ಆರಂಭದ ಮುಖ್ಯ ಅತಿಥಿ ಸ್ವತಹ "ಟಿಪ್ಪೂ ಸುಲ್ತಾನನೆ"   ಆಗಿದ್ದ  ಹಾಗು ತಾನೂ ಸಹ "ಜಾಕೊಬಿನ್ ಕ್ಲಬ್"  ನ ಸದಸ್ಯನಾಗಿ ಫ್ರಾನ್ಸ್ ದೇಶದ ಸ್ವಾತಂತ್ರ ಕ್ರಾಂತಿಗೆ ಬೆಂಬಲ ಘೋಷಿಸಿದ ಎಂದು ತಿಳಿದು ಬರುತ್ತದೆ.ಹಾಗೂ  1797 ರ ಮೇ 05  ರಂದು ಶ್ರೀ ರಂಗ ಪಟ್ಟಣದಲ್ಲಿ ಜಾಕೊಬಿನ್ ಕ್ಲಬ್ಬಿನ ಪದಾಧಿಕಾರಿಗಳ ಆಯ್ಕೆ ನಡೆದು 1797  ರ ಮೇ 14  ರಂದು  ಶ್ರೀ ರಂಗ ಪಟ್ಟಣದಲ್ಲಿ ಜಾಕೊಬಿನ್ ಕ್ಲಬ್ ಪ್ರಾರಂಭೋತ್ಸವಕ್ಕೆ  ನೂರಾರು ಖುಶಾಲು ತೋಪು, ಹಾಗು ರಾಕೆಟುಗಳನ್ನು ಹಾರಿಸಿ  ಸಂಭ್ರಮಿಸಲಾಯಿತೆಂದು  ಫ್ರಾನ್ಸ್ ಸ್ವಾತಂತ್ರ ಕ್ರಾಂತಿಯ ನೆನಪಿನಲ್ಲಿ  ಒಂದು ಗಿಡವನ್ನು ಟಿಪ್ಪೂ ಸುಲ್ತಾನನ ಕೈಲಿ ನೆಡಿಸಿ, ಫ್ರಾನ್ಸ್ ದೇಶದ  ಸ್ವಾತಂತ್ರ ದ್ವಜಾ ರೋಹಣ   ಮಾಡಲಾಯಿತೆಂದು  ತಿಳಿದು ಬರುತ್ತದೆ.   ಜಾಕೊಬಿನ್ ಕ್ಲಬ್ ಗಳ ಬಗ್ಗೆ ಅಂದಿನ ದಿನದಲ್ಲಿ ಭಾರತದ ಯಾವ ಮೂಲೆಯಲ್ಲೂ ಅಸ್ತಿತ್ವದ ಬಗ್ಗೆ ಇಂತಹ ಮಾಹಿತಿ ಸಿಗಲಾರದು .ಇದೂ ಸಹ ಈ  ಪುಟ್ಟ ಊರಿನ  ಅಂತರ್ರಾಷ್ಟ್ರೀಯ ಖ್ಯಾತಿ  ನಿರೂಪಿಸುತ್ತದೆ.   ನಂಬಿಕೆ ಬರಲಿಲ್ಲ ವೆ ಇಲ್ಲಿದೆ ನೋಡಿ ಆಧಾರ ಅಂತರ್ಜಾಲ   ಲಿಂಕ್ ಗಳ ಮಾಹಿತಿ ಇಲ್ಲಿದೆ ನೋಡಿ.   {ದುರಂತ ವೆಂದರೆ ಶ್ರೀ ರಂಗ ಪಟ್ಟಣದ ಜಾಕೊಬಿನ್ ಕ್ಲಬ್ ನ ಬಗ್ಗೆ  ಹೆಚ್ಚಿನ ಮಾಹಿತಿ ಬ್ರಿಟನ್ ಹಾಗು ಫ್ರಾನ್ಸ್ ನಲ್ಲಿ ಇರುವುದು}.
ಜಾಕೊಬಿನ್ ಕ್ಲಬ್ ನ ಇನ್ನೊಂದು ನೋಟ[ಚಿತ್ರ ಕೃಪೆ ಅಂತರ್ಜಾಲ ]
       
1 ]http://en.wikipedia.org/wiki/Jacobin_Club      After the March on Versailles in October 1789, the club, still entirely composed of deputies, followed the National Constituent Assembly to Paris, where it rented the refectory of the monastery of the Jacobins in the Rue Saint-Honoré, adjacent to the seat of the Assembly. The name "Jacobins", given in France to the Dominicans (because their first house in Paris was in the Rue St Jacques), was first applied to the club in ridicule by its enemies. The title assumed by the club itself, after the promulgation of the constitution of 1791, was Société des amis de la constitution séants aux Jacobins à Paris, which was changed on 21 September 1792, after the fall of the monarchy, to Société des Jacobins, amis de la liberté et de l'égalité (Society of Jacobins, friends of liberty and equality). It occupied successively the refectory, the library, and the chapel of the monastery.
2} http://www.tigerandthistle.net/tipu332.htm        
          
fter the captivating scenes of the Hostage Princes in 1792, the jubilation which followed the successful Storming of Seringapatam was quickly exploited by artists and printmakers. Subscribers were sought, not only in Britain, but through agents in Madras, Calcutta and Bombay, and prints were dedicated to influential figures in the Mysore campaigns: Baird; Dundas; Richard Wellesley or His most gracious Majesty George III. The prints were often published in sets of four: The Assault and Taking of Seringapatam; 'The Last Effort and Fall of Tipu Sultan; The Body of Tipu Sultan recognised by his Family; The Surrender of the 'Two Sons of Tipu Sultan (to Major General Baird). For the popular market, engravings of the dying Tipu and the surrender of his sons were translated into glass paintings. Orme and Bartolozzi made engravings after Mather Brown's paintings; Grozer, Rogers, Laminet and Cardon after Singleton; Reynolds after Ker Porter, and Cardon and Schiavonetti after Allan. Nor was the market restricted to Great Britain. Schiavonetti's series after Singleton was published in London, but also sold by the Augsburg Akademy, with inscriptions in German and English. Other engravings have both English and French inscriptions.

Following the French links to India, and Seringapatam, there is evidence for the most remarkable demonstration of contemporary French political ideals. A French paper was found in Tipu's Palace in 1799, entitled 'Proceedings of a Jacobin Club formed at Seringapatam by the French Soldiers in the Corps commanded by M.Dompart. ' A Scotsman, Capt W Macleod, attested to its authenticity. The Paper listed by name 59 Frenchmen in the pay of 'Citizen Tippoo'; it described the gathering of a Primary Assembly on 5th May 1797, to elect a President, Francois Ripaud, and other officers. The 'Rights of Man' were proclaimed, and Ripaud presented a lecture on Republican principles. Further deliberations and formalities followed before, on 14th May, the National flag was ceremonially raised and a small delegation were formally received by Tipu. The 'Citizen Prince' ordered a salute of 2,300 cannon, all the musketry and 500 rockets, with a further 500 cannon firing from the Fort. A Tree of Liberty was planted, and crowned with a Cap of Equality, before Ripaud challenged his co-patriots: 'Do you swear hatred to all Kings, except Tippoo Sultaun, the Victorious, the Ally of the French Republic - War against all Tyrants, and love towards your Country and that of Citizen Tippoo.' 'Yes! We swear to live free or die,' they replied.
6 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಬ್ರಿಟಿಷರ ವಿರುದ್ಧ ಸಿಡಿದೆದ್ದ ಟಿಪೂ ಪ್ರೆಂಚರ ಜೊತೆ ಕೈ ಜೋಡಿಸಿದ್ದು ಮತ್ತು ಕ್ಲಬ್ಬಿನ ಸದಸ್ಯನಾದದ್ದು ಚೆನ್ನಾಗಿ ಮೂಡಿಬಂದಿದೆ.

ಅಂತರ್ಜಾಲವೆಲ್ಲ ಜಾಲಾಡಿ ಮಾಹಿತಿ ಕಲೆ ಹಾಕಿ, ಚಿತ್ರ ಕಥನ ಕೊಡುವ ನಿಮ್ಮ ಶ್ರಮಕ್ಕೆ ಶತಾಭಿನಂದನೆಗಳು.

ಬಾಲು ಅವರು ಶ್ರೀರಂಗಪಟ್ಟಣದ ಜೀವಂತ ಪಠ್ಯ ಪುಸ್ತಕ.

balasubrahmanya k.s. balu ಹೇಳಿದರು...

@ ಬದರಿನಾಥ್ ಪಲವಳ್ಳಿ :-) ಧನ್ಯವಾದಗಳು ಸರ್

M.D.subramanya Machikoppa ಹೇಳಿದರು...

ಉತ್ತಮ ಮಾಹಿತಿ ಬಾಲು ಅಣ್ಣ.

balasubrahmanya k.s. balu ಹೇಳಿದರು...

@ ಎಂ.ಡಿ.ಸುಬ್ರಮಣ್ಯ ಮಾಚಿಕೊಪ್ಪ :-) ಧನ್ಯವಾದಗಳು

Pradeep Rao ಹೇಳಿದರು...

ಅಬ್ಬಾ! ನಿಮ್ಮ ಶ್ರೀ ರಂಗ ಪಟ್ಟಣ ಇನ್ನೂ ಏನೇನು ವಿಷಯಗಳಿಗೆ ಖ್ಯಾತಿ ಪಡೆದಿದೆ ಸಾರ್? ಕ್ರಿಕೆಟ್ ಕ್ಲಬ್, ಜಾಕೋಬಿನ್ ಕ್ಲಬ್... ಇನ್ನು ಅದೆಷ್ಟು ವಿಷಯಗಳೋ!! ಮಾಹಿತಿ ಸಂಗ್ರಹದಲ್ಲಿ ನಿಮ್ಮ ಆಸಕ್ತಿ ಮೆಚ್ಚಲೆಬೇಕು! ತುಂಬಾ ಚೆನ್ನಾಗಿದೆ!

balasubrahmanya k.s. balu ಹೇಳಿದರು...

ಪ್ರದೀಪ್ :-) ಮೆಚ್ಚುಗೆ ಮಾತಿಗೆ ಶರಣು