ಬುಧವಾರ, ಜನವರಿ 25, 2012

ಇತಿಹಾಸದ ಹಲವು ಬಾವುಟಗಳನ್ನು ಹಾರಿಸಿದ್ದ ಐತಿಹಾಸಿಕ ಬತೇರಿ , ಇಂದು ರಾಷ್ಟ್ರ ದ್ವಜ ಹಾರಿಸುತ್ತದೆ.!!!!


ಐತಿಹಾಸಿಕ ಬತೇರಿ 

ಇಲ್ಲಿದೆ ನೋಡಿ ಬತೇರಿ
ಕಳೆದ ಸಂಚಿಕೆಯಲ್ಲಿ ಜಮ್ಮಾ ಮಸೀದಿ ಬಗ್ಗೆ ತಿಳಿದೆವು ಬನ್ನಿ ಇಲೊಂದು ಐತಿಹಾಸಿಕ ದ್ವಜ ದ ಕಂಬ ಹೊತ್ತ ಬತೇರಿ[ ಫ್ಲಾಗ್ ಪೋಸ್ಟ್ ] ಇದೆ ಅದನ್ನು ನೋಡೋಣ. ಶ್ರೀ ರಂಗ ಪಟ್ಟಣಕ್ಕೆ ಬರುವ ಪ್ರವಾಸಿಗರು ಇದನ್ನು ದೊರದಿಂದಲೇ ನೋಡಿ ಹೊರಟು ಹೋಗುತ್ತಾರೆ.ಅಥವಾ ಗಮನಿಸುವುದೇ ಇಲ್ಲಾ , ಪ್ರವಾಸಿ ಮಾರ್ಗದರ್ಶಿಗಳೂ ಸಹ ಇದಕ್ಕೆ ಅಂತಹ ಮಹತ್ವ ಕೊಡುವುದಿಲ್ಲ .  ಆದರೆ ಇದರ ಹತ್ತಿರ ಹೋದಾಗ ನಿಮಗೆ ತಿಳಿಯುತ್ತದೆ ಇದರ ಮಹತ್ವ. ಹೌದು ಈ ಜಾಗದಲ್ಲಿಯೇ 1799 ಮೇ 04 ರಂದು ಬ್ರಿಟೀಷರು ಮೈಸೂರಿನ ಅಂತಿಮ ಯುದ್ದದಲ್ಲಿ ಟಿಪ್ಪೂ ಮಡಿದ ನಂತರ ಶ್ರೀ ರಂಗ ಪಟ್ಟಣವನ್ನು ವಶಕ್ಕೆ ಪಡೆದ  ಕುರುಹಾಗಿ ಟಿಪ್ಪೂ ಸುಲ್ತಾನನ ರಾಜ್ಯ ಲಾಂಚನದ ಬಾವುಟ ಇಳಿಸಿ ಬ್ರಿಟೀಷ್ ಬಾವುಟವನ್ನು ಈ ಬತೆರಿಯ ಮೇಲೆ ಹಾರಿಸಿದ್ದರು.
ಯಾವ ಹಡಗಿನ ದ್ವಜ ಸ್ಥಂಬವೋ ಕಾಣೆ

ಬತೆರಿಯ ಮೇಲೆ ನಿಂತರೆ ಅದ್ಭುತ ನೋಟಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. ಶ್ರೀ ರಂಗ ಪಟ್ಟಣದ ಹಲವು ಮೈಲು ದೂರದ ನೋಟವನ್ನು ನೀವು ನೋಡಬಹುದು.
ಬತೇರಿ ಯಿಂದ ಕಾಣುವ    ಶ್ರೀ ರಂಗನಾಥ ದೇವಾಲಯ 
ಬತೆರಿಯಿಂದ ಕಾಣುವ ಕರಿಘಟ್ಟ ಬೆಟ್ಟ
ಬತೆರಿಯಿಂದ ಕಾಣುವ ಪಾಂಡವಪುರದ ಕುಂತಿಬೆಟ್ಟ
ಈ ಬತೆರಿಯನ್ನು ಟಿಪ್ಪೂ ಸುಲ್ತಾನನ ಕಾಲದಲ್ಲಿ ನಿರ್ಮಿಸಲಾಯಿತೆಂದು ತಿಳಿದು ಬರುತ್ತದೆ , ಹೇಗೆ ನಿರ್ಮಾಣವಾಯಿತು, ಇದರ ಹಿಂದಿನ ಕಥೆ ಏನೂ ಎಂಬ ಬಗೆ ಯಾವುದೇ ಮಹತ್ವದ ವಿಚಾರ ಇತಿಹಾಸದ ಪುಟಗಳಲ್ಲಿ ಕಂಡುಬರುತ್ತಿಲ್ಲ. ಆದರೂ ಈ ಫ್ಲಾಗ್ ಪೋಸ್ಟ್ ಅಥವಾ ಬತೇರಿ ಹಲವು ಐತಿಹಾಸಿಕ ಘಟನೆಗಳಿಗೆ  ಕಾರಣವಾಗಿ ಸಂಧರ್ಬಕ್ಕೆ ತಕ್ಕಂತೆ ಗೆದವರ ದ್ವಜ ಹಾರಿಸಿದೆ. ಇನ್ನು ಈ ಫ್ಲಾಗ್ ಪೋಸ್ಟ್ ಸಹ ಒಂದು ವಿಸ್ಮಯವೇ ಸರಿ ಬಹಳ ಎತ್ತರದ ಕಲ್ಲಿನ ಬತೇರಿ ನಿರ್ಮಿಸಿ ಅದರ ಮೇಲೆ ಯಾವುದೋ ಹಡಗಿನ ಎತ್ತರದ ದ್ವಜದ ಸ್ಥಂಬವನ್ನು  ನೆಡಲಾಗಿದೆ. ಇಲ್ಲಿ ಹಾರಿಸಿದ ದ್ವಜ ಬಹಳ ದೂರ ಅಂದರೆ ಹಲವು ಮೈಲಿಗಳಷ್ಟು  ದೂರಕೆ ಕಾಣುತ್ತಿತ್ತಂತೆ.

ವಿಸ್ಮಯ ದ್ವಜ ಸ್ಟಂಬ ಇದು.

ಹೆಮ್ಮೆಯ ರಾಷ್ಟ್ರ ದ್ವಜ  ಹಾರಿಸುವ ಕಾಯಕ  ಇಂದು
ಐತಿಹಾಸಿಕ ಘಟನೆಗಳು  ಕಳೆದು ಇಂದು ಈ ಸ್ಮಾರಕ  ಬತೆರಿಯ ದ್ವಜ ಸ್ಥಂಬ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಯದಲ್ಲಿ ನಮ್ಮ ಹೆಮ್ಮೆಯ ರಾಷ್ಟ್ರ ದ್ವಜವನ್ನು ಹೊತ್ತು ಮೆರೆಯುತ್ತದೆ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ತಿಳಿಯೋಣ ಅಲ್ಲಿಯವರೆಗೆ ನಿಮಗೆ ವಂದನೆಗಳು.








8 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲಣ್ಣ...

ಕುತೂಹಲದ ವಿಷಯ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...

ನಾನು ಹಲವಾರು ಬಾರಿ ಭೇಟಿ ನೀಡಿದ್ದರೂ ಇದು ಗೊತ್ತಿರಲಿಲ್ಲ... ಜೈ ಹೋ !

ಈಶ್ವರ ಹೇಳಿದರು...

ಒಳ್ಳೆ ವಿಷಯವನ್ನು ತಿಳಿಸಿಕೊಟ್ಟಿದ್ದೀರಿ.. ಇನ್ನೊಮ್ಮೆ ಭೇಟಿ ಕೊಟ್ಟಾಗ ಸರಿಯಾಗಿ ಇಣುಕಿ ಬರುತ್ತೇನೆ. ಫೋಟೋಗಳು ತುಂಬಾ ಉಪಯುಕ್ತ ಸರ್.

balasubramanya ಹೇಳಿದರು...

@ ಸಿಮೆಂಟು ಮರಳಿನ ಮಧ್ಯೆ :-) ಪ್ರಕಾಶ್ ಸರ್ ಅನಿಸಿಕೆಗೆ ಜೈ ಹೋ.

balasubramanya ಹೇಳಿದರು...

@ ಈಶ್ವರ ಭಟ್ . ಕೆ :- ಹೌದು ಮತ್ತೊಮ್ಮೆ ಭೇಟಿ ಕೊಟ್ಟಾಗ ಈ ಬ್ಲಾಗ್ ನಲ್ಲಿನ ಮಾಹಿತಿಯನ್ನು ಪರಿಶೀಲಿಸಿ. ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

Badarinath Palavalli ಹೇಳಿದರು...

ಎಲ್ಲಾದರು ಟಿಪ್ಪುವಿನ ರಾಜ್ಯ ಲಾಂಛನ, ಬಾವಿಟ ಮತ್ತು ಕೈ ಬರಹ ಸಿಕ್ಕರೆ ಪ್ರಕಟಿಸಿ ಸಾರ್.

ಬತ್ತರೇಯ ಚಿತ್ರಗಳು ಮತ್ತು ಬರಹ ವಿವರಣಾತ್ಮಕವಾಗಿತ್ತು ಸಾರ್.

ಒಂದೇ ಬತ್ತೇರಿಯು ಕಾಲದ ದೀರ್ಘ ಪಯಣಕೆ ಸಿಕ್ಕು ಅದೆಷ್ಟು ಪತಾಕೆಗಳಿಗೆ ಆಧಾರವಾಗಿತ್ತು ಅಲ್ಲವೇ ಸಾರ್?

"ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?" ಎನ್ನುವಂತೆ!

balasubramanya ಹೇಳಿದರು...

ಬದರಿನಾಥ್ ಪಲವಳ್ಳಿ:-) ನಿಮ್ಮ ಅನಿಸಿಕೆಗೆ ಜೈ ಹೋ ,ಹೌದು ನಿಮ್ಮ ಅಭಿಪ್ರಾಯದಂತೆ ಟಿಪ್ಪೂವಿನ ರಾಜ್ಯ ಲಾಂಛನ ಹಾಗೂ ಕೈಬರಹ ಮುಂದಿನ ದಿನಗಳಲ್ಲಿ ಈ ಬ್ಲಾಗ್ನಲ್ಲಿ ತರಲು ಪ್ರಯತ್ನಿಸುತ್ತೇನೆ.

Prabhu Iynanda ಹೇಳಿದರು...

ಶ್ರೀರಂಗಪಟ್ಟಣದ ಬಗ್ಗೆ ಬರೆಯುತ್ತಿರುವ ತಮ್ಮನ್ನು ಅಭಿನಂದಿಸಿದಷ್ಟೂ ಸಾಲದೆನ್ನಿಸುತ್ತದೆ. ದಯೆಯಿಟ್ಟು ನನ್ನ ಕೆಲವು ಸಂದೇಹಗಳನ್ನು ನಿವಾರಿಸುರಾ, ಬಾಲು ಅವರೇ?

‘ಈ ಬತೆರಿಯನ್ನು ಟಿಪ್ಪೂ ಸುಲ್ತಾನನ ಕಾಲದಲ್ಲಿ ನಿರ್ಮಿಸಲಾಯಿತೆಂದು ತಿಳಿದು ಬರುತ್ತದೆ.’ ಎಂದು ತಿಳಿಸಿದಿರಿ. ‘ಹೇಗೆ ನಿರ್ಮಾಣವಾಯಿತು, ಇದರ ಹಿಂದಿನ ಕಥೆ ಏನು, ಎಂಬ ಬಗೆ ಯಾವುದೇ ಮಹತ್ವದ ವಿಚಾರ ಇತಿಹಾಸದ ಪುಟಗಳಲ್ಲಿ ಕಂಡುಬರುತ್ತಿಲ್ಲ.’ ಎಂದೂ ತಾವು ಬರೆದಿರುವದರಿಂದ ಅವನ ಕಾಲದಲ್ಲಿ ನಿರ್ಮಿಸಲಾಯಿತೆಂದು ಹೇಗೆ ತಿಳಿಯಲಾಯಿತು ಎಂದು ಹೇಳುವಿರಾ? ಬಹುಶಃ ಅವನ ಕಾಲಕ್ಕೂ ಮುಂಚೆ ಯಾರಾದರೂ ಮೈಸೂರಿನ ಅರಸರೋ, ವಿಜಯನಗರದ ಅರಸರೋ ಕಟ್ಟಿಸಿರಲೂ ಸಾಧ್ಯವೇನೋ ಎಂದು ನನ್ನ ಅನ್ನಿಸಿಕೆ.

balasubramanya ಹೇಳಿದರು...

ನಮಸ್ಕಾರ ಸರ್ , ತಮ್ಮ ಅನಿಸಿಕೆ ಬಗ್ಗೆ ಧನ್ಯವಾದಗಳು.ಹೌದು ನಾನೂ ಸಹ ಈ ನಿಟ್ಟಿನಲ್ಲಿ ಹುಡುಕಿದೆ. ಹಾಗೂ ಹಳೆಯ ಹಲವಾರು ಪುಸ್ತಕಗಳಲ್ಲಿ /ವಿದೇಶೀಯ ಲೇಖನಗಳನ್ನು ಜಾಲಾಡಿದೆ. ಬತೇರಿ ಬಗ್ಗೆ ವಿಜಯ ನಗರದ ಕಾಲದಲ್ಲಿನ, ಮೈಸೂರು ಅರಸರ ಕಾಲದ ,ಹಾಗು ಹೈದರ್ ಅಲಿ ಕಾಲದ ಶ್ರೀ ರಂಗ ಪಟ್ಟಣ ವರ್ಣನೆಯಲ್ಲಿ ಎಲ್ಲಿಯೂ ಈ ಬತೇರಿ ಬಗ್ಗೆ ವರ್ಣನೆ ಇಲ್ಲ ಅಥವಾ ಉಲ್ಲೇಖ ಇಲ್ಲ ಟಿಪ್ಪೂ ಕಾಲದ ಶ್ರೀರಂಗ ಪಟ್ಟಣದ ವರ್ಣನೆಯಲ್ಲಿ ಈ ಬತೆರಿಯ ಉಲ್ಲೇಖವಿದೆ.ಹಾಗಾಗಿ ಲೇಖನದಲ್ಲಿ ಆ ಅಭಿಪ್ರಾಯಕ್ಕೆ ಬಂದಿದ್ದೇನೆ ಸರ್.ನನ್ನ ಲೇಖನದ ಉದ್ದೇಶ ಯಾರನ್ನೂ ಹೊಗಳುವುದಲ್ಲ. ಸಾಧ್ಯ ಆದಷ್ಟೂ ಸ್ಮಾರಕಗಳ ನೈಜ ವಿಚಾರ ತಿಳಿಸುವುದಷ್ಟೇ ಆಗಿದೆ. ತಮ್ಮ ಬಳಿ ಯಾವುದಾದರೂ ಮಾಹಿತಿ ಇದ್ದಲ್ಲಿ ಕಳುಹಿಸಿಕೊಡಿ ಅದನ್ನೂ ಪರಿಶೀಲಿಸಿ ತಿಳಿದುಕೊಳ್ಳುತ್ತೇನೆ.ವಿಚಾರ ತಮ್ಮನ್ತವರಿಂದ ಬದರೆ ನನಗೆ ಖುಷಿಯಾಗುತ್ತೆ. ತಮ್ಮ ಪ್ರೀತಿ ಮಾತಿಗೆ ನಮನಗಳು.