ಸೋಮವಾರ, ಫೆಬ್ರವರಿ 7, 2011

ದ್ವೀಪದಲ್ಲಿ ಕಂಡಿತ್ತು ಹಳೆಯ ಮಸೀದಿ!!!! ಹತ್ತಿರದಲ್ಲೇ ಇತಿಹಾಸ ಸಾರಿದ ರೈಲು ನಿಲ್ದಾಣ ತೋರಿದ ಐತಿಹಾಸಿಕ ಕುರುಹು!!!

                                                                                                                  ಶ್ರೀ ರಂಗಪಟ್ಟಣ ದ  ವಿಸ್ಮಯವೇ ಹಾಗೆ ಕಳೆದ ಬಾರಿ ನಿಮಗೆ ಮದ್ದಿನ ಮನೆ ಹಾಗೂ ಗ್ಯಾರಿಸನ್ ಆಸ್ಪತ್ರೆ ಬಗ್ಗೆ ತಿಳಿಸಿದ್ದೆ. ಬನ್ನಿ ಈಗ ಮತ್ತೊಂದು ವಿಸ್ಮಯ ದತ್ತ ಸಾಗೋಣ, ಗ್ಯಾರಿಸನ್ ಆಸ್ಪತ್ರೆ ಯಾ ಹಿಂಬಾಗ ಬಂದರೆ ಕಾಣುತಿತ್ತು ಈ ಮಸೀದಿ , ಬನ್ನಿ ಹಳೆಯ ನೆನಪಿಗೆ ಜಾರೋಣ
          ಈ ಹಳೆಯ  ಮಣ್ಣಿನ ಗೋಡೆಯ ಕಟ್ಟಡ ಇಂದು ಮಾಯವಾಗಿ ಕಂಡು ಬರುವುದಿಲ್ಲ ವಾದರೂ  [ ಹಾಲಿ ಇದು ಅಸ್ತಿತ್ವದಲ್ಲಿ ಇಲ್ಲ ]  manuscripts  and historical records  part-4  ನಲ್ಲಿ  ದಾಖಲಾದ  ಸ್ವಲ್ಪ  ಮಾಹಿತಿ ಪ್ರಕಾರ ಇದು ಇದು ಶ್ರೀ ರಂಗ ಪಟ್ಟಣದ ಹಳೆಯ ಮಸೀದಿ ಎಂದೂ ಟಿಪ್ಪೂ ಸುಲ್ತಾನ್  ಜುಮ್ಮಾ ಮಸೀದಿ ನಿರ್ಮಿಸುವ ವರೆಗೆ  ಶ್ರೀ ರಂಗ ಪಟ್ಟಣದ ಮುಸ್ಲಿಂ ಜನರು ಇಲ್ಲಿಯೇ ಪ್ರಾಥನೆ ಸಲ್ಲಿ ಸುತ್ತಿದ್ದರೆಂದು ಹೇಳಲಾಗಿದೆ.ಇದನ್ನು  ಹಳೆಯ ಜುಮ್ಮಾ ಮಸೀದಿ ಎಂದೂ ಸಹ ಕರೆಯಲಾಗಿದೆ.ಮಣ್ಣಿನ ಗೋಡೆಯ , ಹಳೆಯ ವಿನ್ಯಾಸ ಹೊಂದಿದ ಈ ಮಸೀದಿ ಮರದ ಕಂಬಗಳಿಂದ ಸೌಂದರ್ಯ ಪಡೆದಿತ್ತು .                                                                                                                                                                                                               ಇದರ ಎದುರುಗಡೆ ಕಾಣಸಿಗುವುದೇ ಶ್ರೀ ರಂಗ ಪಟ್ಟಣ ರೈಲು ನಿಲ್ದಾಣ.ರೈಲು ನಿಲ್ದಾಣದ ಹಳಿಗಳನ್ನು ದಾಟಿ ಪ್ಲಾಟ್ ಫಾರ್ಮ್ ಗೆ ಹೋಗುವ ಮೊದಲು ಒಂದು ತರಬೇತಿ  ಕೇಂದ್ರದ ಕಟ್ಟಡ ವಿದೆ ಬನ್ನಿ ಸಮೀಪಕ್ಕೆ ಹೋಗೋಣ                                                                                                                                                                                                   ಈ ಕಟ್ಟಡದಲ್ಲಿ ನಿಮಗೆ ಕೆಲವು ಕಂಬಗಳು ಕಂಡು ಬರುತ್ತವೆ .ಇವುಗಳಿಗೆ ಬಣ್ಣ ಬಳಿದು ಮಸುಕಾಗಿದ್ದರೂ    ಈ ಕಂಬಗಳನ್ನು ಟಿಪ್ಪೂ ವಿನ ಅರಮನೆಯಿಂದ [ ಲಾಲ್ ಮಹಲ್]   ತಂದು  ಇಲ್ಲಿ ಉಪಯೋಗಿಸಿ ಕೊಂಡಿರುವುದಾಗಿ  ತಿಳಿದು ಬರುತ್ತದೆ. [ ಮುಂದೆ ಲಾಲ್ ಮಹಲ್ ಬಗ್ಗೆ ಬರೆಯುವಾಗ ಈ ಬಗ್ಗೆ ತಿಳಿಯೋಣ ]  ಅರಮನೆಯಲ್ಲಿ ಮೆರೆದಿದ್ದ ಕಂಬಗಳು ರೈಲು ನಿಲ್ದಾಣದಲ್ಲಿ ಇತಿಹಾಸ ಸಾರುತ್ತಾ, ಗತ ವೈಭವ ನೆನೆಯುತ್ತಾ ನಿಂತಿವೆ.                                                                                                                                

7 ಕಾಮೆಂಟ್‌ಗಳು:

ಮನಸು ಹೇಳಿದರು...

ಒಳ್ಳೆ ಮಾಹಿತಿ ಸರ್, ಇವೆಲ್ಲ ಹೇಗೆ ಹುಡುಕ್ತೀರಿ, ಒಟ್ಟಲ್ಲಿ ನಿಮಗೆ ಧನ್ಯವಾದಗಳು ಯಾರ ಕಣ್ಣಿಗೂ ಬೀಳದೇ ಇರುವಂತಹವನ್ನು ನಮಗೆಲ್ಲಾ ತಿಳುಸ್ತಾ ಇದ್ದೀರಿ. ಟಿಪ್ಪು ಸುಲ್ತಾನರ ಕಾಲದ ವಿಶೇಷ ಸ್ಥಳಗಳ ಮತ್ತಷ್ಟು ಪರಿಚಯ ಸಾಗಲಿ...

nimmolagobba ಹೇಳಿದರು...

@ ಸುಗುಣ ಮೇಡಂ , ಶ್ರೀ ರಂಗ ಪಟ್ಟಣದ ವಿಸ್ಮಯವೇ ಹಾಗೆ. ಅರ್ಥವಾಗದ ಅದ್ಭುತ ವಿಷಯಗಳ ದ್ವೀಪ ಅದು. ಸುಮಾರು ಇಪ್ಪತ್ತು ವರ್ಷಗಳಿಂದಲೂ ವಿಸ್ಮಯಗಳ ವಿಚಾರಗಳನ್ನು ಕಾಣುತ್ತಲೇ ಇದ್ದೇನೆ.ಮುಂದೆ ನಿಮ್ಮ ಭೇಟಿ ಸಾಗಿದಲ್ಲಿ ಇನ್ನೂ ಹಲವಾರು ಮಾಹಿತಿ ಹೆಕ್ಕಿ ತರುವೆ. ಪರಿಚಯ ಸಾಗುತ್ತದೆ ಜೊತೆಗೆ ಓದುಗರ ಸಾತ್ ಇರಲಿ. ನಿಮಗೆ ಧನ್ಯವಾದಗಳು.

ವಿಚಲಿತ... ಹೇಳಿದರು...

ನೀವೇ ಹೇಳಿದ್ದೀರಲ್ಲ.. ಅಲ್ಲಿನ ನಿಜವಾದ ಇತಿಹಾಸ ಶ್ರೀರಂಗನಿಗೆ ಮಾತ್ರ ಗೊತ್ತೆಂದು.
ವಿಸ್ಮಯ ಕಾಣದೆ ಮತ್ತಿನ್ನೇನು..
ನಿಮ್ಮ ಕಡೆಗೆ ನನ್ನದೊಂದು ಪುಟ್ಟ ಸಾತ್..

nimmolagobba ಹೇಳಿದರು...

@ವಿಚಲಿತ... ಗುರುಪ್ರಸಾದ್, ನಿಮ್ಮ ಅನಿಸಿಕೆಗೆ ಹಾಗು ಸಾತ್ ನೀಡಿದ್ದಕ್ಕೆ ಥ್ಯಾಂಕ್ಸ್.

ಕಲರವ ಹೇಳಿದರು...

baalu sir shriranganaathana sannidhi, mahatvavaada ithihaasaulla sthala.olleya vishayagalanna tilisuttiddira.dhanyavaadagalu.

nimmolagobba ಹೇಳಿದರು...

ಕಲಾವತಿ ಮಧುಸೂದನ್ , ನಿಮ್ಮ ಮೆಚ್ಹುಗೆಯ ಮಾತುಗಲಿಗೆ ಧನ್ಯವಾದಗಳು , ನಿಮ್ಮ ಆಗಮನ ಹೀಗೆ ಮುನ್ದುವರೆಸಿ. ಧನ್ಯವಾದಗಳು.

ಸೀತಾರಾಮ. ಕೆ. / SITARAM.K ಹೇಳಿದರು...

ಒಳ್ಳೆ ಮಾಹಿತಿ ಸರ್