ಗುರುವಾರ, ನವೆಂಬರ್ 25, 2010

ಮೈಸೂರ ಅರಸರ ಜನ್ಮ ಸ್ಥಳ ಹಾಗು ಪಾಳು ಬಿದ್ದ ಅರಮನೆ.!!!

ಕಳೆದ ಬಾರಿ ಡಿ. ಹ್ಯಾವಿಲೆಂಡ್  ಸೇತುವೆ ಬಗ್ಗೆ ತಿಳಿದುಕೊಂಡ ನಾವು ಮತ್ತೆ ರಂಗನಾಥನ ದೇವಾಲಯ ಸಮೀಪಕ್ಕೆ ಹೋಗೋಣ ಬನ್ನಿ.ರಂಗನ ಆಲಯದಿಂದ ಹೊರಬಂದರೆ  ಅಲ್ಲೇ ಸಮೀಪದಲ್ಲಿ ನಮಗೆ ಮತ್ತೊಂದು ವಿಶೇಷ ತಿಳಿದು ಬರುತ್ತದೆ!!,ನಿಮ್ಮ ಗಮನಕ್ಕೆ ಒಂದು ಬಿಳಿಯ ಬಣ್ಣದ ಒಂದು ಜಾಲರಿ ಮನೆ ಕಾಣ ಸಿಗುತ್ತದೆ.ಹಾಗು ಪಕ್ಕದಲ್ಲೇ ಒಂದು ಪಾರ್ಕ್ ಸಹ ಸಿಗುತ್ತದೆ.ನಿಮಗೆ ಆಶ್ಚರ್ಯ ವಾಗಬಹುದು ಈ ಬಿಳಿಯ ಬಣ್ಣದ  ಮನೆಯಲ್ಲಿ                                                          ಒಂಬತ್ತನೇ ಜುಲೈ 1784 ರಲ್ಲಿ ಮುಮ್ಮಡಿ ಕೃಷ್ಣ ರಾಜ ವೊಡೆಯರ್ ರವರ ಜನನ ವಾಗಿದೆ.ಹಾಗು ಅದಕ್ಕೆ ಸಂಭಂದಿಸಿದ ಶಾಸನ ಒಂದು ಅಲ್ಲಿ ಲಭ್ಯ ವಿದೆ.[ಇದೆ ಜಾಗದಲ್ಲಿ  ಇತಿಹಾಸದ ಬಗ್ಗೆ  ನನ್ನ ಮೊದಲ ಛಾಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು ] ಹಾಗು ಈ ಪ್ರದೇಶಕ್ಕೆ ಹೊಂದುಕೊಂಡಂತೆ  ಹಳೆಯ ಅರಮನೆ ಇದ್ದ ಪ್ರದೇಶ ಕಾಣಸಿಗುತ್ತದೆ.ಹೌದು ಇಲ್ಲಿ ಹಿಂದೆ ವಿಜಯ ನಗರ ಪ್ರತಿನಿಧಿ ಹಾಗು ಮೈಸೂರ ಅರಸರ ಅರಮನೆ  ಇಲ್ಲಿ ಇತ್ತೆಂಬ ಬಗ್ಗೆ ಇತಿಹಾಸ ಹೇಳಿದರೂ ಕಾಲ ಚಕ್ರ ದ ಹೊಡೆತಕ್ಕೆ ಸಿಲುಕಿ ಹಲವಾರು ಸಾಕ್ಷಿಗಳು ನಾಶವಾಗಿವೆ. ಸಿಗುವ ಸಾಕ್ಷಿಗಳ ಆಧಾರದ ನೆಲೆ ಇಲ್ಲಿ ಉತ್ತರಾಭಿಮುಕವಾಗಿ ಒಂದು ಅರಮನೆ ಇತ್ತೆಂಬ ಬಗ್ಗೆ ಅಲ್ಪ ಮಾಹಿತಿ ಸಿಗುತ್ತದೆ. ಬನ್ನಿ ಅರಮನೆ ಇದ್ದ ಜಾಗ ನೋಡೋಣ       ಇದೆ ನೋಡಿ ಇತಿಹಾಸದ ಕುರುಹು ಇಂದು ರಕ್ಷಿಸಲಾಗದ ಸ್ಮಾರಕವಾಗಿ ,ಪುನರ್ನಿರ್ಮಾಣಕ್ಕೆ ಪೂರಕವಾದ ಮಾಹಿತಿಗಳು ಇತಿಹಾಸದ ಕಸದ ಬುಟ್ಟಿ ಸೇರಿರುವ ಕಾರಣ ಒಂದು ಉಧ್ಯಾನವನವಾಗಿ  ಮೂಕವಾಗಿ ಮಲಗಿದೆ. ಹಾಗು ಇಂದಿನ ಜನಾಂಗಕ್ಕೆ ಮಾಹಿತಿ ನೀಡಲಾಗದೆ ಮರುಗಿದೆ................................................!!!  ಇಂದಿಗೆ ಇಷ್ಟು ಸಾಕು ಮುಂದೆ ಮತ್ತೊಂದಿಷ್ಟು ಬರಲಿದೆ ನಿಮಗಾಗಿ . ವಂದನೆಗಳು. 

12 ಕಾಮೆಂಟ್‌ಗಳು:

prabhamani nagaraja ಹೇಳಿದರು...

ಗತ ಇತಿಹಾಸದ ಬಗ್ಗೆ ಬೆಳಕನ್ನು ತೂರಿರುವ ನಿಮ್ಮ ಛಾಯಾಚಿತ್ರಗಳು ಹಾಗೂ ವಿವರಣೆ ಬಹಳ ಚೆನ್ನಾಗಿದೆ. ಧನ್ಯವಾದಗಳು.

Ittigecement ಹೇಳಿದರು...

ಬಾಲೂ ಸರ್...
ಡಿಲೀಟ್ ಮಾಡುವದು ಬೇಡ... ಹಾಗೆಯೇ ಇಡಿ...

ನಾವೆಲ್ಲ ಬರಲಿಲ್ಲ.. ಇನ್ನು ಬರುತ್ತೇವೆ ಇಂಥಹ ಒಳ್ಳೆಯ ಬ್ಲಾಗು ಮುಚ್ಚುವದು ಬೇಡ...

Jai Ho...

ಚುಕ್ಕಿಚಿತ್ತಾರ ಹೇಳಿದರು...

ಬಾಲು ಅವರೇ..

ಇತಿಹಾಸದ ವಿಚಾರಗಳನ್ನು ತಿಳಿಸುವ ನಿಮ್ಮ ಬ್ಲೊಗ್ ಚನ್ನಾಗಿದೆ.. ನಾನು ದಿನಾ ಅದನ್ನು ಹಳೆ ಪೋಸ್ಟ್ ಗಳಿ೦ದ ಶುರುಮಾಡಿ ಓದ್ತಾ ಇದ್ದೇನೆ. ಪ್ರತಿಕ್ರಿಯೆ ಹಾಕಲಿಕ್ಕೆ ವಿಳ೦ಬವಾಯ್ತು.....ಡಿಲೀಟ್ ಮಾಡ್ಬೇಡಿ.

ಇನ್ನೊ೦ದು ..ಓದುವುದರ ಜೊತೆಗೆ ಸ೦ಗೀತ ಕೇಳಲು ತು೦ಬಾ ಚನ್ನಾಗಿದೆ.ಇಷ್ಟೂ ದಿನ ನಾನು ಸೌ೦ಡ್ ಮ್ಯೂಟ್ ನಲ್ಲಿಟ್ಟು ಓದುತ್ತಿದ್ದೆ.. ಅಕಸ್ಮಾತ್ತಾಗಿ ಸೌ೦ಡ್ ಹೆಚ್ಚಿಗೆ ಇದ್ದು ನಿಮ್ಮ ಬ್ಲಾಗನ್ನು ಸ೦ಗೀತದ ಜೊತೆ ಆಸ್ವಾದಿಸಲು ಅವಕಾಶವಾಯ್ತು..

ಮತ್ತೊ೦ದೆ೦ದರೆ .ನನಗನ್ನಿಸಿದ್ದೇನ೦ದರೆ ಬ್ಲೊಗ್ ಪೊಸ್ಟ್ ಮಾಡುವಾಗ ಫೋಟೋಗಳಿಗೂ ವಿವರಣೆಗಳಿಗೂ ನಡುವೆ ಸ್ವಲ್ಪ ಅ೦ತರ ಇದ್ದರೆ ಓದಲು ಆಕರ್ಷಣೀಯವಾಗಿರುತ್ತದೆ.. ಇದು ನನ್ನ ಅಭಿಪ್ರಾಯ.
ಥ್ಯಾ೦ಕ್ಸ್

PARAANJAPE K.N. ಹೇಳಿದರು...

ಬಾಲೂ ಅವರೇ, ನಿಮ್ಮ ಈ ಬ್ಲಾಗನ್ನು ನಾನು ನೋಡುತ್ತಿದ್ದೇನೆ. ದಯವಿಟ್ಟು ಡಿಲೀಟ್ ಮಾಡಬೇಡಿ, ಮು೦ದುವರಿಸಿ, ಚೆನ್ನಾಗಿದೆ. ಇತಿಹಾಸದ ಇ೦ತಹ ವಿಚಾರಗಳನ್ನು ತಿಳಿಸುವವರು ಬಹಳ ಕಡಿಮೆ ಮ೦ದಿ ಇದ್ದಾರೆ. ನಿರಾಶರಾಗದಿರಿ, ಮು೦ದುವರಿಸಿ.

ಮನಸು ಹೇಳಿದರು...

sir, ee blogannu modalu noduttalidde... tumba maahiti ide idannu delete maadabedi...

PaLa ಹೇಳಿದರು...

BUZZನಲ್ಲಿ ಬ್ಲಾಗು ಮುಚ್ಚುವ ಬಗ್ಗೆ ಓದಿ ನಿಮ್ಮ ಬ್ಲಾಗಿಗೆ ಬಂದೆ.

ಬೆಳೆಯುವ ಬಳ್ಳಿಗೆ ಆಸರೆ ಬೇಕಾದದ್ದು ಸಹಜ. ನಿಮ್ಮ ಬ್ಲಾಗಿಗೂ ಕೂಡ ಜನರು ಭೇಟಿ ಕೊಟ್ಟು ಕಮೆಂಟಿಸಿದರೆ ಬ್ಲಾಗಿನ ಬೆಳವಣಿಗೆಗೆ ನಮ್ಮ ಪ್ರೋತ್ಸಾಹಕ್ಕೆ ಪೂರಕ.

ನಾನೂ ಹಿಂದೊಮ್ಮೆ ಬ್ಲಾಗ್ ಮುಚ್ಚುವುದರ ಬಗ್ಗೆ ಅಲ್ಲ, ಹೊಸ ಪೋಸ್ಟ್ ಮಾಡುವುದನ್ನು ನಿಲ್ಲಿಸುವುದರ ಬಗ್ಗೆ ಯೋಚಿಸಿದ್ದೆ. ಆಮೇಲೆ ಕಮೆಂಟಿನಿ ಎಣಿಕೆ ಅಲ್ಲ ಅದರ ಮೌಲ್ಯ ಮುಖ್ಯ; ಬ್ಲಾಗಿಗೆ ಹೊಸ ಹೊಸ ಚಿತ್ರ ಯಾವ ರೀತಿ ತೆಗೆಯಬಹುದು ಅದಕ್ಕೇನು ತಲೆಬರಹ ಬರೆಯುವುದು, ಚಿತ್ರ ತೆಗೆಯಲು ಎಲ್ಲಿ ಹುಡುಕಾಡುವುದು ಇವೇ ಕಾಮೆಂಟಿಗಿಂತ ಖುಷಿ ತರತೊಡಗಿದವು.

ಎಲ್ಲೋ ಒಂದೆರಡು ಕಾಮೆಂಟುಗಳು ನಮ್ಮ ಬೆಳವಣಿಗೆಗೆ ಸಹಾಯ ಮಾಡಬಹುದಷ್ಟೇ, ಉಳಿದದ್ದೆಲ್ಲ ನಮಗೆ ಪ್ರೋತ್ಸಾಹ ಕೊಡಲಿಕ್ಕೋ, ಒಣ ಹೆಮ್ಮೆಯನ್ನು ಹೆಚ್ಚಿಸಲಿಕ್ಕೋ ಮಾತ್ರ ಸಹಾಯಕ! ಆದರೆ ಹೊಸತು ಬರೆಯಬೇಕೆಂಬ ಉತ್ಸಾಹ ನಮ್ಮೊಳಗಿನಿಂದಲೇ ಬರಬೇಕೆ ಹೊರತು ನಾ ಮಾಡಿದ್ದೆಲ್ಲವೂ ಜಗತ್ತು ಮೆಚ್ಚಬೇಕು ಎಂದುಕೊಂಡರೆ ಕಷ್ಟ.

ಹಲವು ಕಾಲದಿಂದ ನನ್ನ ಬ್ಲಾಗಿಗೆ ಬಂದು ಕಾಮೆಂಟಿಸಿ ಪ್ರೋತ್ಸಾಹಿಸಿದ್ದೀರಿ. ನಿಮ್ಮ ಬ್ಲಾಗಿಗೆ ಕಾಮೆಂಟಿಸಿಲ್ಲ ಅಂದ ಮಾತ್ರಕ್ಕೆ ನಿಮ್ಮ ಬರಹ, ವಿಷಯ ಚೆನ್ನಾಗಿಲ್ಲ ಅಂತಲ್ಲ. ಅದರ ಬಗ್ಗೆ ಹೆಚ್ಚಿಗೆ ತಿಳಿದಿಲ್ಲವಾದ್ದರಿಂದ ತಿಳಿಯಲು ಪ್ರಯತ್ನಿಸುತ್ತಿರುವೆ ಎಂದರ್ಥ. ನನ್ನಂತವರಿಗೆ ಹೊಸ ವಿಷಯ ಕೊಡುವುದು ಬಿಡುವುದು ನಿಮಗೆ ಬಿಟ್ಟ ವಿಚಾರ.

ನಿಮ್ಮ ಬ್ಲಾಗಿನ layout ನಲ್ಲಿ ತುಸು ಬದಲಾವಣೆ ಮಾಡಿಕೊಂಡರೆ ಚೆನ್ನಾಗಿರುತ್ತೆ. ಬ್ಲಾಗಿನಲ್ಲಿ ಹಾಡು ಓದುವಾಗಿನ ತನ್ಮಯತೆ ಹಾಳು ಮಾಡುತ್ತದೆ. ಕತ್ತಲೆ ಕೋಣೆಗೆ ಬೆಳಕು ಚೆಲ್ಲುವ ಚಿತ್ರ ಚೆನ್ನಾಗಿದ್ದರೂ ಪ್ರತೀ ಬಾರಿ ಬ್ಲಾಗು ತೆಗೆದಾಗ ಒಂದಿಡೀ ಪುಟ ಅದೇ ತುಂಬಿಕೊಳ್ಳುವುದರಿಂದ ಬ್ಲಾಗ್ ಪೋಸ್ಟ್ ಕಣ್ಣಿಗೆ ಬೀಳದೇ ಆಕರ್ಷಣೆ ಕಳೆದುಕೊಳ್ಳುತ್ತದೆ. ಬ್ಲಾಗ್ ಸರಳವಾಗಿದ್ದಷ್ಟೂ ಸುಂದರ!

ನಾಗರಾಜ್ .ಕೆ (NRK) ಹೇಳಿದರು...

ಮರೆತೆಹೋದ, ತಿಳಿಯದೆ ಇರುವ ಮಾಹಿತಿಯನ್ನ ನೀಡುವ ಒಂದು ಬ್ಲಾಗಿದು.
ಮುಂದುವರೆಸಿ ಅಂತ ಕೆಳ್ತಾಯಿದಿನಿ . . .

ಮನಮುಕ್ತಾ ಹೇಳಿದರು...

ಈ ಬ್ಲಾಗ್ ತು೦ಬಾ ಒಳ್ಳೆಯ ಮಾಹಿತಿ ಕೊಡುತ್ತಿದೆ..ದಯವಿಟ್ಟು ಇದನ್ನು ಮುಚ್ಚದೆ ಇನ್ನಷ್ಟು ಒಳ್ಳೆಯ ಮಾಹಿತಿಗಳು ನಮಗೆ ಸಿಗಲಿ ಎ೦ದು ವಿನ೦ತಿಸಿಕೊಳ್ಳುತ್ತೇನೆ.
ವ೦ದನೆಗಳು.

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಬ್ಲಾಗ್ ಚೆನ್ನಾಗಿದೆ.
ಸ್ವಲ್ಪ Leyoutನಲ್ಲಿ ಬದಲಾವಣೆಮಾಡಿದರೆ ಕಣ್ಣಿಗೆ ಹಿತವಾದೀತು.
ತುಂಬಾ ಮಾಹಿತಿ ಇರುವ ಸುಂದರವಾದ ಬ್ಲಾಗ್
ಮುಚ್ಚುವ ಮಾತು ಯಾಕೆ ?
ಪರಸ್ಪರ "ನೀನನಗಿದ್ದರೆ ನಾ ನಿನಗೆ" ಅಂತ ಹೊಗಳಿಕೊಳ್ಳುವ ಕೆಲವು ಜನ ಕಮೆಂಟ್ ಬರೆಯುವವರನ್ನು ತಲೆಗೆ ಹಚ್ಚಿಕೊಳ್ಳ ಬೇಡಿ.
ಕಮೆಂಟ್ಗಳು ಬರದಿದ್ದರೆ ಓದುವವರು ಇಲ್ಲ ಅಂತ ತಿಳ್ಕೊಬೇಡಿ.
ಸ್ನೇಹಿತರು ಹೆಚ್ಚುಮಂದಿ ಇದ್ದವರ ಬ್ಲಾಗ್ ನಲ್ಲಿ ಹೆಚ್ಚು ಕಮೆಂಟ್ ಗಳು ಇರುತ್ತೆ ಸಹಜವಾಗಿ.ಇರಲಿಬಿಡಿ.

ಬರೆದಾಗ ನಮಗೆ ಸಮಾಧಾನ/ನೆಮ್ಮದಿ ಸಿಗಬೇಕಾದ್ದು ಮುಖ್ಯ.
ಕೆಲವು ಗಂಬೀರವಾದ ವಿಷಯಗಳನ್ನೊಳಗೊಂಡ ಬ್ಲಾಗ್ ಓದುವವರ ಸಂಖ್ಯೆ ಸಹಜವಾಗಿ ಕಡಿಮೆ.
ಅದರ ಬಗ್ಗೆ ಯೋಚನೆ ಮಾಡೊದನ್ನೇ ನಿಲ್ಲಿಸಿ,ನಿಮ್ಮ ಕೆಲಸ ಮುಂದುವರಿಸಿ.
ದಯವಿಟ್ಟು ಉಪದೇಶ ಅಂತ ತಿಳಿಯದೆ..ಸಲಹೆ ಅಂತ ಪರಿಗಣಿಸಿ.

KalavathiMadhusudan ಹೇಳಿದರು...

baalu ravare olleya maahitiyanna neediddeera.intaha attyuttama maahtigaagi dhanyavadagalu.

ಸೀತಾರಾಮ. ಕೆ. / SITARAM.K ಹೇಳಿದರು...

ನೋಡಿ ಸಿಕ್ಕ ಒಂದೇ ದಿನದಲ್ಲಿ ತಮ್ಮ ಹಿಂದಯಾನ ಮುಂದಿನ ಎಲ್ಲ ಬರಹ ಓದುತ್ತಾ ಬರುತ್ತಿದ್ದೇನೆ... ನನ್ನಂತಹವರು ಇದ್ದಾರೆ... ಬ್ಲಾಗ್ ಮುಚ್ಚುವ ಬಗ್ಗೆ ಮಾತಾಡುವದು ಸಲ್ಲದು..

Unknown ಹೇಳಿದರು...

nice information thank u