ಶ್ರೀ ರಂಗ ನಾಥನ ದರ್ಶನ ಪಡೆದು ಪಾವನ ರಾದ ನಿಮಗೆ ಬನ್ನಿ ಸನಿಹದಲ್ಲೇ ಇರುವ ಒಂದು ವಿಸ್ಮಯ ಸೃಷ್ಟಿಸಿದ್ದ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ,ಇದೇನು ಪಾಳು ಬಿದ್ದ ಮುರಿದ ಗೋಡೆಯ ಗುಡ್ಡೆಯ ಜಾಗಕ್ಕೆ ಕರೆದುಕೊಂಡು ಬಂದು ಕಿವಿ ಮೇಲೆ ಹೂ ಇಡುತಿದ್ದಾನೆ ಅಂತೀರಾ.ಹೌದು ಇಲ್ಲಿ ನೋಡಿ ಡಿ. ಹಾವಿಲೆಂದ್ ಎಂಬ ಫ್ರೆಂಚ್ ಇಂಜಿನಿಯರ್ ಒಬ್ಬ ಟಿಪ್ಪೂ ಆಳ್ವಿಕೆಯಲ್ಲಿ ಈ ಕಮಾನು ತೂಗು ಸೇತುವೆ ನಿರ್ಮಿಸಿದುದಾಗಿ ತಿಳಿದು ಬರುತ್ತದೆ.ಈ ಕಮಾನು ಸೇತುವೆ ಕಾಮನ ಬಿಲ್ಲಿನಿನಂತೆ ಬಾಗಿದ್ದು ಗಾರೆ ಗಚ್ಚಿನಿಂದ ನಿರ್ಮಿತವಾಗಿತ್ತೆಂದೂ 1808 ರಲ್ಲಿ ನಿರ್ಮಿತಗೊಂಡು ಸೇತುವೆ ಮೇಲೆ ನಿಂತರೆ ತೂಗುಯ್ಯಾಲೆಯಂತೆ ಸ್ವಲ್ಪ ತೂಗಾಡುತ್ತಿತ್ತೆಂದು ಹೇಳಲಾಗಿದೆ.ಕಾವೇರಿ ನದಿಗೆ ಅಡ್ಡಲಾಗಿ ಶ್ರೀರಂಗ ಪಟ್ಟಣ ದ್ವೀಪ ಸಂಪರ್ಕಿಸಲು ಇಂತಹ ಸೇತುವೆ ನಿರ್ಮಿಸಲು ಪ್ರಾಯೋಗಿಕವಾಗಿ ಈ 112 ಅಡಿ ಉದ್ದದ ತೂಗುಸೇತುವೆ ನಿರ್ಮಿಸಲಾಗಿತ್ತು .ಈ ಸೇತುವೆಯ ಪೂರ್ಣ ಚಿತ್ರ ಹಾಲಿ ಲಭ್ಯ ವಿಲ್ಲದ ಕಾರಣ ಅಂತರ್ಜಾಲದಲ್ಲಿ ಹುಡುಕಾಡಿದಾಗ ಒಂದು ಪುಟ್ಟ ಚಿತ್ರ ಸಿಕ್ಕಿದೆ ಅದಷ್ಟೇ ನಮಗೆ ಸಾವಿರ ಕಥೆ ಹೇಳುತ್ತಿದೆ.ಈ ಕಮಾನು ತೂಗು ಸೇತುವೆ 125 ವರ್ಷ ಬಾಳಿ 2-7 -1936 ರಂದು ಕುಸಿದು ಬಿದ್ದಿದೆ.ಬರಿ ಗಾರೆ ಗಚ್ಚಿನಿಂದ ನಿರ್ಮಿಸಿದ ಈ ತೂಗು ಸೇತುವೆ ಇಂದಿನ ಇಂಜಿನಿಯರ್ ಗಳಿಗೆ ಸವಾಲಾಗಿ ತಾನಿದ್ದ ಸ್ಥಳ ದಲ್ಲಿ ಮತ್ತೊಬ್ಬ ಇಂಜಿನಿಯರ್ ಬಂದು ತನ್ನನ್ನು ಮರು ನಿರ್ಮಾಣ ಮಾಡುವನೇ ಅಂತಾ ಅಂದಿನಿಂದ ಕಾಯುತ್ತಾ ಕುಳಿತಿದೆ.
ಲೈಫ್ ಪತ್ರಿಕೆಯಲ್ಲಿ ಹಲವಾರು ದಶಕಗಳ ಹಿಂದೆ ಪ್ರಕಟವಾದ ಚಿತ್ರ.[ ಚಿತ್ರ ಕೃಪೆ ಅಂತರ್ಜಾಲ ಹಾಗು ಲೈಫ್ ಪತ್ರಿಕೆ ] |
4 ಕಾಮೆಂಟ್ಗಳು:
ಬಾಲುರವರೆ...
ಅಬ್ಭಾ ನಮ್ಮ ಹಿರಿಯರು ಅದೆಷ್ಟು ಬುದ್ಧಿವಂತರಿದ್ದರು?
ತಂತ್ರಜ್ಞಾನ ಅದೆಷ್ಟು ತಿಳಿದಿತ್ತು ಅಲ್ಲವೆ?
ನಮ್ಮ ಭವ್ಯ ಪರಂಪರೆಗಳ ಬಗ್ಗೆ ಹೆಮ್ಮೆಯೆನಿಸಿದರೂ...
ಇಂದಿನ ದುಸ್ಥಿತಿಯ ನೋಡಿ ನಮ್ಮ ಬಗ್ಗೆಯೇ ನಮಗೆ ಬೇಸರವಾಗುತ್ತದೆ..
ಗೊತ್ತಿರದ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ...
ನೋಡಬೇಕೆಂದು ಎನಿಸುತ್ತಿದೆ..
ಹೇಗಿದ್ದರೂ ಬರುತ್ತೀವಲ್ಲ ನೋಡೋಣ..
ಜೈ ಹೋ...
ಬಹಳ ಒಳ್ಳೆಯ ಮಾಹಿತಿ ಬರೆದಿದ್ದೀರಿ. ಹಲವು ಪ್ರದೇಶಗಳೇ ಹೀಗೆ....ಯಾರಿಗೂ ಗೊತ್ತಿಲ್ಲದೇ ಹಾಳಾಗುತ್ತಿವೆ. ಬಹುಶಃ ಅಂದಿನ ಜನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದರಿಂದ ಈ ಕಡೆಗೆ ಲಕ್ಷ್ಯವಿಲಿಲ್ಲವೇನೋ ಅನಿಸುತ್ತದೆ. ಖಾಲೀ ಗಾರೆಯಿಂದ ತೂಗುಸೇತುವೆ ನಿರ್ಮಿಸಿದ್ದು ನಿಜಕ್ಕೂ ಅಚ್ಚರಿ! ಧನ್ಯವಾದಗಳು
BALOO SIR;Excellent information about an interesting monument.Thanks a lot.Would like to visit these places personally.Regards.
ವಿಚಿತ್ರ... ಅಭಿಯಂತರರಿಗೆ ಸವಾಲಿನ ಸೇತುವೆ.. ನಿಜಕ್ಕೂ ಇದರ ಬಗ್ಗೆ ಅಧ್ಯಯನ ನಡೆಯಬೇಕು..
ಕಾಮೆಂಟ್ ಪೋಸ್ಟ್ ಮಾಡಿ