ಬುಧವಾರ, ಸೆಪ್ಟೆಂಬರ್ 1, 2010

ಬನ್ನಿ ದ್ವೀಪದ ಪರಿಚಯ ಮಾಡಿಕೊಳ್ಳೋಣ.!!!!


ನಮಸ್ಕಾರ  ಬನ್ನಿ ನಿಮಗೆ ಸ್ವಾಗತ. ನಮ್ಮ ಭೂಮಿ ಗ್ರಹದಲ್ಲಿ  ನಮ್ಮ ಅಸ್ತಿತ್ವ ಎಲ್ಲಿದೆ ಅಂತಾ ಹುಡುಕಿದರೆ  ಅದು ಕಣ್ಣಿಗೆ ಕಾಣದಷ್ಟು ಶೂನ್ಯವಾಗಿದೆ. ಆದಾಗ್ಯೂ ನಾವು ಭೂಮಿಯಲ್ಲಿ ಪರಸ್ಪರ ಹೊಂದಾಣಿಕೆ ಯಿಂದ ಬದುಕುವುದನ್ನು ಕಲಿಯಲಿಲ್ಲ.ಅರಿವಿನ ಜ್ಞಾನದ ಹಣತೆ ಬೆಳಗಿದಾಗ ನಮ್ಮ ಅಸ್ತಿತ್ವ
ಈ ಭೂಮಿಯಲ್ಲಿ ಏನು ಎಂದು ಅರ್ಥವಾಗುತ್ತೆ.ನಮ್ಮ ವಿಶ್ವದಲ್ಲಿ ಹಲವಾರು ದೇಶಗಳು ತಮ್ಮದೇ ಆದ  ಇತಿಹಾಸದ ಘನತೆ ಹೊಂದಿ ಪ್ರಪಂಚಕ್ಕೆ ಸಾರಿ ಹೇಳುತ್ತಿವೆ. ಅಂತೆಯೇ ನಮ್ಮ ದೇಶದ ಬಹಳಷ್ಟು ಹಳ್ಳಿ,ಪಟ್ಟಣ, ಮುಂತಾದವುಗಳು ದೇಶದ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿ ಮೆರೆದಿವೆ.ಇವುಗಳ ನಡುವೆ ನನಗೆ ಗೋಚರಿಸಿದ ಒಂದು ದ್ವೀಪವೇ ಈ ಶ್ರೀ ರಂಗ ಪಟ್ಟಣ .ಈ ಊರಿನಲ್ಲಿ ಪುರಾಣವಿದೆ, ಇತಿಹಾಸವಿದೆ,ಪ್ರಪಂಚವನ್ನೇ ಬೆಚ್ಚಿಬೀಳಿಸಿದ ಮಾಹಿತಿಗಳಿವೆ,ತಲ ತಲಾಂತರದಿಂದ ಈ ಊರಿಗೆ ವಲಸೆ ಬರುವ ಹಕ್ಕಿಗಳಿವೆ.ಇಲ್ಲಿನ ಇತಿಹಾಸ ತಿಳಿಸದೇ ನಮ್ಮ ದೇಶದ ಇತಿಹಾಸ ಪೂರ್ಣವಾಗುವುದಿಲ್ಲವೆಂಬ ಸತ್ಯವಿದೆ. ಈ ಊರಿನ ಇತಿಹಾಸಕ್ಕೆ ಪ್ರಪಂಚದ ಹಲವಾರು ಪ್ರಸಿದ್ದ  ವ್ಯಕ್ತಿಗಳು ತಳುಕು ಹಾಕಿಕೊಂಡಿದ್ದಾರೆ.ಈ ಊರಿನ ಇತಿಹಾಸದ ಬಗ್ಗೆ ವಿಶ್ವಾದ್ಯಂತ ಸಾವಿರಾರು ಪುಸ್ತಕಗಳು ಪ್ರಕಟಗೊಂಡಿವೆ, ಅಂತರ್ಜಾಲದಲ್ಲಿ ಮಾಹಿತಿಗಳು ಹರಿದಾಡುತ್ತಿವೆ.ಇಷ್ಟೆಲ್ಲಾ ಆದರೂ ಇಲ್ಲಿನ ಸ್ಮಾರಕಗಳ  ಮಾಹಿತಿ ಅಪೂರ್ಣವಾಗಿಯೇ ಉಳಿದಿದೆ.ನಿಜದ ಇತಿಹಾಸ ಬಲ್ಲ ಕಾವೇರಿ ನದಿ ಹಾಗು ಶ್ರೀ ರಂಗನಾಥ  ಇಬ್ಬರೂ ತಮಗೆ ಏನೂ ಗೊತ್ತಿಲ್ಲದಂತೆ ನಿಸ್ಸಹಾಯಕರಾಗಿ ಉಳಿದಿದ್ದಾರೆ.ಬನ್ನಿ ಸುಂದರ ದ್ವೀಪದ ಪರಿಚಯ ಮಾಡಿಕೊಳ್ಳೋಣ
.ಶ್ರೀ ರಂಗಪಟ್ಟಣ ಮಂಡ್ಯಾ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿ ಸುಮಾರು ಅಂದಾಜು 16000  ಜನಸಂಖ್ಯೆ  ಇದೆ. ಶ್ರೀರಂಗ ಪಟ್ಟಣ ಕರ್ನಾಟಕದ ಒಳನಾಡಿನಲ್ಲಿರುವ
,ಕಾವೇರಿ ಮಡಿಲಿನ ಒಂದು ಸುಂದರ ದ್ವೀಪ ಸುತ್ತಲೂ ಕಾವೇರಿ ನದಿಯ ಆಲಿಂಗನ ,
ಹಸಿರಮಡಿಲಲ್ಲಿ  ಜುಳು ಜುಳು ನಾದದ ನಡುವೆ ಹಕ್ಕಿಗಳ ಕಲರವ ಬನ್ನಿ ಇಲ್ಲಿನೋಡಿ ಕಾವೇರಿನದಿ ಶ್ರೀರಂಗಪಟ್ಟಣ   ದ್ವೀಪ ಪ್ರವೇಶಿಸುವಾಗ ಉಂಟಾಗುವ ಎರಡು ಭಾಗವಾಗಿ ಸೀಳಿ ಹೋಗುವ ಒಂದು ದೃಶ್ಯ. ಹಾಗೆ ಈ ದ್ವೀಪವನ್ನು ಪ್ರೀತಿ ಇಂದ ಆಲಂಗಿಸುವ ಪ್ರಾರಂಭದ ದೃಶ್ಯವೂ ಹೌದು.ಮುಂದೆ ಸಾಗುವ ಕಾವೇರಿ ಉತ್ತರಾಭಿ ಮುಖವಾಗಿ ಹಾಗೂ ದಕ್ಷಿಣ ಅಭಿಮುಖವಾಗಿ  ಪ್ರವಹಿಸಿ ಮುಂದೆ ಮತ್ತೊಂದು ತುದಿಯ  ಸಂಗಮದಲ್ಲಿ ಸೇರಿಕೊಳ್ಳುತ್ತಾಳೆ  
.
ಉತ್ತರ ಕಾವೇರಿಯ
ಒಡಲಿಗೆ ಲೋಕಪಾವನಿ ನದಿಯೂ ಸೇರಿಕೊಳ್ಳುತ್ತದೆ.ಶ್ರೀ ರಂಗ ಪಟ್ಟಣ ದ್ವೀಪ ಎರಡು ಭಾಗ ಗಳಾಗಿದ್ದು  ಒಂದು ರಾಜರುಗಳು ಆಡಳಿತ ನಡೆಸಲು ಕೋಟೆ ಕಟ್ಟಿಕೊಂಡಿದ್ದ  ಶ್ರೀ ರಂಗ ಪಟ್ಟಣ ಹಾಗೂ ಪ್ರಜೆಗಳು ವಾಸವಿದ್ದ  ಗಂಜಾಂ ಈ ಎರಡೂ ಭಾಗಗಳು ಸೇರಿ ಒಂದು ದ್ವೀಪವಾಗಿದ್ದು ಈ ದ್ವೀಪ   ಈ ಶ್ರೀ ರಂಗ ಪಟ್ಟಣ.
, ಇತಿಹಾಸದ ಕಣಜವಾಗಿ ಮೆರೆದಿದೆ.ಶ್ರೀರಂಗಪಟ್ಟಣ ದ್ವೀಪ ಇತಿಹಾಸದ ಮಾಯಾ ದ್ವೀಪವಾಗಿ ಲೋಕಕ್ಕೆ ತಿಳಿಯದ ಹಲವಾರು ವಿಚಾರಗಳನ್ನು ಬಚ್ಚಿಟ್ಟುಕೊಂಡು ನಿರ್ಲಿಪ್ತವಾಗಿ ನಿಂತಿದೆ.ಇದಕ್ಕೆ ಕಾವೇರಿ ನದಿ ಹಾಗೂ ಶ್ರೀ  ರಂಗನಾಥರು  ಸಾಕ್ಷಿಯಾಗಿದ್ದಾರೆ...............................................................ಆಲ್ವಾ !!!!! . ಜಿ.ಪಿ ರಾಜರತ್ನಂ ರವರು ತಮ್ಮ ರಚನೆಯಲ್ಲಿ ಬರೆದು ರಾಜು ಅನಂತ ಸ್ವಾಮೀ ಹಾಡಿದ  ನೀನ್ ನಂ ಅಟ್ಟಿಗ್ ಬೆಳಕಂಗಿದ್ದೆ ನಂಜಿ  ಹಾಡಿನಲ್ಲಿನ ಒಂದು ಪ್ಯಾರ" ಸೀರಂಗ್ ಪಟ್ನದ್ ತಾವ್ ಕಾವೇರಿ ಹರ್ದು,  ಎರಡೋಳಾಗಿ  ಪಟ್ನದ್ ಸುತ್ತಾ ಹರ್ದೂ  ಸಂಗಂ ದಾಗೆ ಸೇರ್ಕೋ ಮಳ್ಳಿ " ಅಂತಾ ಸಾಗುತ್ತೆ ಕವಿಯ ಕಲ್ಪನೆ ಈ ದ್ವೀಪವನ್ನು ಹೇಗೆ ವರ್ಣಿಸಿದೆ ನೋಡಿ .................ಮುಂದೆ ಪ್ರಾರಂಭಿಸೋಣ    ಸ್ಮಾರಕಗಳ ದರ್ಶನ ಹಾಗೂ ಮಾಹಿತಿ.ಬನ್ನಿ ನನ್ನೊಡನೆ ನೀವು ಹೆಜ್ಜೆ ಹಾಕಿ.ನಿಮಗೆ ಸ್ವಾಗತ.ಸುಸ್ವಾಗತ.

3 ಕಾಮೆಂಟ್‌ಗಳು:

Sriii :-) ಹೇಳಿದರು...

ಶ್ರೀ ರ೦ಗ ಪಟ್ಟಣದ virtual ದರ್ಶನ ಮಾಡಿಸಿದ್ದಕ್ಕಾಗಿ ದನ್ಯವಾದಗಳು
:-) ಶ್ರೀ :-)

ವಿ.ಆರ್.ಭಟ್ ಹೇಳಿದರು...

Nice Sir, Thanks for showing the details! tumbaa dhanyavaadagalu

ಸೀತಾರಾಮ. ಕೆ. / SITARAM.K ಹೇಳಿದರು...

ನೈಸ್