|
ಸೆರಿಂಗ ಪಟಂ ನೌಕೆ |
ಇತಿಹಾಸದ ವಿಶೇಷವೇ ಹಾಗೆ ಯಾವುದೋ ಮಾಹಿತಿ ಎಲ್ಲೋ ಅಡಗಿ ಕುಳಿತಿರುತ್ತದೆ.ಯಾವ ಊರಿನ ಬಗೆಗಿನ ಐತಿಹಾಸಿಕ ಘಟನೆ ಇನ್ಯಾವ ಊರಿನಲ್ಲೋ ನಡೆದಿರುತ್ತದೆ. ಅಂತಹ ಒಂದು ಆಸಕ್ತಿದಾಯಕ ಮಾಹಿತಿ ಇಲ್ಲಿದೆ ನೋಡಿ . ಬ್ರಿಟೀಷರಿಗೆ "ಸೆರಿಂಗ ಪಟಂ " ಅಥವಾ" ಶ್ರೀ ರಂಗ ಪಟ್ಟಣ " ಎಂಬ ಊರಿನ ಬಗ್ಗೆ ಅದೇನು ಸೆಳೆತವೋ ಕಾಣೆ ಬಹುಷಃ ಆ ಕಾಲದಲ್ಲಿ ಈ ಊರಿನ ಹೆಸರಿನಲ್ಲಿ ಹಲವಾರು ಆಸಕ್ತಿದಾಯಕ ಐತಿಹಾಸಿಕ ಕಾರ್ಯಗಳನ್ನು ಮಾಡಿದ್ದಾರೆ. ಅಂತಹ ಒಂದು ಘಟನೆ ಇಲ್ಲಿದೆ.ಎಲ್ಲರಿಗೂ ತಿಳಿದಂತೆ ಶ್ರೀ ರಂಗ ಪಟ್ಟಣದ ಮೇಲೆ ಬ್ರಿಟೀಷರು 4 ಮೇ 1799 ರಲ್ಲಿ ವಿಜಯ ಸಾಧಿಸಿದರು. ಆ ನಂತರ "ಬ್ರಿಟೀಶ್ ರಾಯಲ್ ನ್ಯಾವಿ " ವತಿಯಿಂದ" ಸೆರಿಂಗ ಪಟಂ " ಹೆಸರಿನ ಒಂದು ಯುದ್ದ ನೌಕೆ ತಯಾರಿಸಲು ಉದ್ದೇಶಿಸಿ , "ಬಾಂಬೆ ಡಾಕ್ ಯಾರ್ಡ್" ನಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ನೌಕೆ ತಯಾರಿಸಲು ದಿನಾಂಕ 21 -08 -1813 ರಲ್ಲಿ ಸೂಚಿಸಲಾಯಿತು.ಅದರಂತೆ ಈಸ್ಟ್ ಇಂಡಿಯಾ ಕಂಪನಿ ದಿನಾಂಕ 5 ಸೆಪ್ಟೆಂಬರ್ 1819 ರಿಂದ 10 ಏಪ್ರಿಲ್ 1821 ರವರೆಗೆ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ "ಸೆರಿಂಗ ಪಟಂ " ಹೆಸರಿನ ಯುದ್ಧ ನೌಕೆಯನ್ನು ತಯಾರಿಸಿ "ಬ್ರಿಟೀಶ್ ರಾಯಲ್ ನ್ಯಾವಿ " ವಶಕ್ಕೆ ನೀಡಲಾಯಿತು. ನಂತರ ಈ ನೌಕೆ ಹಲವಾರು ಐತಿಹಾಸಿಕ ಸೇವೆ ಸಲ್ಲಿಸಿ "ಸೆರಿಂಗ ಪಟಂ " ಅಥವಾ "ಶ್ರೀ ರಂಗ ಪಟ್ಟಣ" ಹೆಸರನ್ನು ಪ್ರಸಿದ್ದ ಗೊಳಿಸಿದೆ. ಉತ್ತಮ ಸೇವೆಸಲ್ಲಿಸಿದ ಈ ನೌಕೆಯನ್ನು ಆಫ್ರಿಕಾ ಖಂಡದ "ಕೇಪ್ ಆಫ್ ಗುಡ್ ಹೋಪ್" ನಲ್ಲಿ 1873 ರ ವರ್ಷದಲ್ಲಿ ಒಡೆದು ಹಾಕಲಾಯಿತು . ಈ ನೌಕೆ ಸಾಗರದಲ್ಲಿ ಪ್ರ ಪ್ರಥಮ ವಾಗಿ ಅಂಚೆ ಸಾಗಿಸಿ ದಾಖಲೆ ಮಾಡಿದ ನೆನಪಿನಲ್ಲಿ ಒಂದು ಅಂಚೆ ಚೀಟಿಯನ್ನು ಈ ನೌಕೆಯ ಸ್ಮರಣಾರ್ಥ ಹೊರಡಿಸಲಾಗಿದೆ.
ಭಾರತ ದೇಶದ ಒಂದು ಊರಿನ ಹೆಸರನ್ನು ಇತಿಹಾಸದಲ್ಲಿ ಬೆಳಗಿಸಿದ ಆ ನೌಕೆಗೆ ನಾವೆಲ್ಲಾ ಸಲಾಂ ಹೇಳೋಣ ಅಲ್ವೇ.{ ಈ ಲೇಖನದ ಸಂಪೂರ್ಣ ಮಾಹಿತಿಯನ್ನು http://en.wikipedia.org/wiki/Seringapatam_class_frigate ಹಾಗೂ http://www.shipstamps.co.uk/forum/viewtopic.php?f=2&t=8131#!lightbox/0/ ಅಂತರ್ ಜಾಲ ತಾಣ ಗಳಿಂದ ಕೃತಜ್ಞತಾ ಪೂರ್ವಕವಾಗಿ ಪಡೆಯಲಾಗಿದೆ.}