ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಕಾಣಸಿಗುವ ಈ ಪುಟ್ಟ ದ್ವೀಪ ಭಾರತ ಇತಿಹಾಸದ ಒಂದು ನಕ್ಷತ್ರವೇ ಸರಿ. ಈ ಊರಿನ ಇತಿಹಾಸ ಹೇಳದೆ ಭಾರತ ದೇಶದ ಚರಿತ್ರೆ ಪೂರ್ತಿಯಾಗುವುದಿಲ್ಲ.ಇತಿಹಾಸ ಯಾವುದೇ ಕಾರಣಕ್ಕೂ ಸಮಾಜವನ್ನು ಒಡೆಯುವ ಸಾಧನವಾಗಬಾರದು ಎಂದು ನಂಬಿದವನು ನಾನು.ಶ್ರೀ ರಂಗ ಪಟ್ಟಣದ ಸ್ಮಾರಕಗಳ ಬಗ್ಗೆ ನನಗೆ ಗೊತ್ತಿರುವ ಮಾಹಿತಿ ನೀಡಲು ಈ ಬ್ಲಾಗ್ ಪ್ರಾರಂಭಿಸಿದ್ದೇನೆ.ನಾನು ನೀಡಿದ ಮಾಹಿತಿ ಬಗ್ಗೆ ಹೆಚ್ಚಿನ ಅರಿವಿದ್ದವರು ತಮ್ಮ ಮಾಹಿತಿ ಸೇರಿಸಲು ಸ್ವಾಗತಿಸುತ್ತೇನೆ.ಈ ಊರಿನಲ್ಲಿ ಇರುವ ಜನರಿಗೆ ತಿಳಿಯದೆ ಮರೆಯಾಗಿರುವ ಸ್ಮಾರಕಗಳೂ ಈ ಬ್ಲಾಗಿನಲ್ಲಿ ತೆರೆದು ಕೊಳ್ಳುತ್ತವೆ.ಈ ಬ್ಲಾಗಿನ ಉದ್ದೇಶ ದೇಶ ಕಟ್ಟುವುದೇ ಹೊರತು ದ್ವೇಷ ಬೆಳೆಸುವುದಲ್ಲ .ಪ್ರತಿ ಸಂಚಿಕೆಯಲ್ಲೂ ಒಂದು ಸ್ಮಾರಕದ ಬಗ್ಗೆ ವಿವರ ನಿಮಗೆ ಲಭಿಸುತ್ತದೆ. ಈ ಊರಿನ ಬಗ್ಗೆ ಹಲವಾರು ಆಶ್ಚರ್ಯಕರ ಮಾಹಿತಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಈ ಸಂಚಿಕೆಯಲ್ಲಿ ನನ್ನ ಬ್ಲಾಗಿನ ಹೆಸರು" ಕಾವೇರಿ ರಂಗ" ಎಂದು ನಾಮಕರಣ ಮಾಡಿದ್ದೇನೆ. ನಿಜವಾದ ಇತಿಹಾಸ ಪುರಾಣಗಳ ಘಟನೆಗಳಿಗೆ ಸಾಕ್ಷಿಯಾಗಿ ಹಲವು ಶತಮಾನಗಳಿಂದ ಶ್ರೀ ರಂಗ ಪಟ್ಟಣ ದ್ವೀಪವನ್ನು ತಬ್ಬಿದ ಕಾವೇರಿ ನದಿ, ಹಾಗು ಈ ಊರಿನ ದೇವರು ಶ್ರೀ ರಂಗ ನಾಥ ಇವರಿಬ್ಬರು ಮಾತ್ರ ಉಳಿದಿದ್ದಾರೆ.ಆದ ಕಾರಣ ನನ್ನ ಬ್ಲಾಗಿನ ಹೆಸರು " ಕಾವೇರಿ ರಂಗ" ಎಂದಾಗಿದೆ.ಇನ್ನು ಶೀರ್ಷಿಕೆ ಚಿತ್ರದಲ್ಲಿನ ಕಿಟಕಿಯಿಂದ ಬೆಳಕಿನ