ಗುರುವಾರ, ಡಿಸೆಂಬರ್ 1, 2011

ಕಾಣದಂತೆ ಹಲವು ದಶಕಗಳು ಮರೆಯಾಗಿದ್ದ ಈ ಸೆರೆಮನೆಯನ್ನು ಇಂಜಿನಿಯರ್ ಒಬ್ಬ ಕಂಡುಹಿಡಿದು ಪರಿಚಯಿಸಿದರು.!!


ಹೌದು ಐತಿಹಾಸಿಕವಾಗಿ  ಮೆರೆದಾಡಿದ್ದ ಈ ಸೆರೆಮನೆ 1859 ರವರೆಗೂ ಅಜ್ಞಾತವಾಗಿ ಉಳಿದಿತ್ತು.ಆದರೆ  ಥಾಮಸ್ ಇನ್ಮಾನ್ ಎಂಬ  ಆಂಗ್ಲ  "ಎಗ್ಸಿಕುಟಿವ್ ಇಂಜಿನೀರ್ " ಈ ಸೆರೆಮನೆಯನ್ನು 1859  ರಲ್ಲಿ ಇದನ್ನು  ಪತ್ತೆ ಹಚ್ಚಿ ಗುರುತು ಹಿಡಿದ ಕಾರಣ ಅವರ  ಹೆಸರಿನ ಒಂದು ಕಮಾನು ನಿರ್ಮಿಸಿ ಈ ಸೆರೆಮನೆಗೆ "ಇನ್ಮಾನ್ ಡನ್ಜನ್ " ಎಂದು ಕರೆಯಲಾಗಿದೆ.ಬನ್ನಿ ಈ ಡನ್ಜನ್  ಹತ್ತಿರ ತೆರಳೋಣ.
ಕಳೆದ ಸಂಚಿಕೆಯಲ್ಲಿ  ಟಿಪ್ಪು ಮಡಿದ ಜಾಗಗಳ ಹಾಗು ದೇಹ ಸಿಕ್ಕ ಜಾಗಗಳ ದರ್ಶನ ಮಾಡಿದ್ದೆವು.ಹಾಗೆ ಪೂರ್ವಕ್ಕೆ ಸಾಗಿದರೆ  ನಿಮಗೆ "ಬಿದ್ದ ಕೋಟೆ"  ಎಂಬ ಜಾಗಕ್ಕೆ ಒಂದು ಕಾಲುಹಾದಿ ನಿಮ್ಮನ್ನು ಕರೆದೊಯ್ಯುತ್ತದೆ.ಅಲ್ಲಿಗೆ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ
ಬಿದ್ದ ಕೋಟೆ ಗಣಪತಿ ದೇವಾಲಯ

ನಿಮಗೆ ಇತ್ತೀಚಿನ ವರ್ಷಗಳಲ್ಲಿ  ನಿರ್ಮಿತಗೊಂಡ ಒಂದು ಸಣ್ಣ  ಗಣಪತಿ ದೇವಾಲಯ ಗೋಚರಿಸುತ್ತದೆ. ಅದನ್ನು ಬಿದ್ದ  ಕೋಟೆ ಗಣಪತಿ ಎಂದು ಕರೆಯುತ್ತಾರೆ ಹಾಗೆ ಮುಂದೆ ಬನ್ನಿ ನಿಮಗೆ ಒಂದು ಮುರಿದ ಕಂಬದ ಗುರುತಿನೆಡೆಗೆ ಕಾಲು ಹಾದಿ ಕಾಣಿಸುತ್ತದೆ  ಮೊದಲು ಅಲ್ಲಿ ಒಂದು ಕಮಾನು ಬಾಗಿಲು ಇತ್ತು
ಕಮಾನು ಗೇಟು ಮೊದಲಿದ್ದದ್ದು
ಮುರಿದ ಕಮಾನು ಬಾಗಿಲು ಇಂದಿನದು

ಅದರಲ್ಲಿನ ಕಮಾನಿನಲ್ಲಿ "ಥಾಮಸ್ ಇನ್ಮಾನ್" ಹೆಸರು ಬರೆಯಲಾಗಿತ್ತು. ಆದರೆ ಕೆಲವು ಕಿಡಿಗೇಡಿಗಳು ಅದನ್ನು ಮುರಿದುಹಾಕಿದ್ದಾರೆ ಆದರೆ ನನ್ನಲ್ಲಿ ಹಳೆಯ ಚಿತ್ರ ಇದ್ದು ಅದನ್ನು ನೋಡಿಬಿಡಿ. ಹಾಗೆ ಮುಂದೆ ಬನ್ನಿ ಒಂದು ಕಡಿದಾದ ಮೆಟ್ಟಿಲುಗಳ ಹಾದಿ ಗೋಚರಿಸುತ್ತದೆ ಬನ್ನಿ ಮೆಟ್ಟಿಲೇರಿ
ಕಾವಲುಗಾರರ ಕೋಣೆ
ಕತ್ತಲ ಕೋಣೆಗೆ ಬೆಳಕಿನ ವ್ಯವಸ್ಥೆ

ಕಾವಲುಗಾರನ  ಕೋಣೆಯ ದರ್ಶನ ನಿಮಗೆ ಆಗುತ್ತದೆ  ಕಗ್ಗತ್ತಲ ಕೋಣೆಯೊಳಗೆ  ಇರುವ ಒಂದೇ ಕಿಟಕಿಯಿಂದ  ಬೆಳಕಿನ ಸೌಲಭ್ಯ ಬಿಟ್ಟರೆ ಬೇರೆ ಏನು ಇಲ್ಲದ ಕೋಣೆ  ಇದು. ಕಾವಲು ಮನೆಯ ಪಕ್ಕದಲ್ಲೇ ಇರುವ ಮೆಟ್ಟಿಲು ಏರಿದ ತಕ್ಷಣ ಕೆಳಮುಖವಾಗಿ ಕಡಿದಾದ ಮೆಟ್ಟಿಲುಗಳು ಸಾಗುತ್ತವೆ  ಅದನ್ನು ಇಳಿದರೆ  ನಿಮಗೆ ಈ ಅಭೇಧ್ಯ ಸೆರೆಮನೆಯ ದರ್ಶನ ಆಗುತ್ತದೆ.
ಕೆಳಮುಖವಾಗಿ  ಮೆಟ್ಟಿಲು ಇಳಿದಾಗ ಪಾತಾಳದಲ್ಲಿ   ಕಾಣಸಿಗುವ ಸೆರೆಮನೆ ಬಾಗಿಲು.
ಪಾತಾಳದಲ್ಲಿರುವ ಸೆರೆಮನೆ ಕಮಾನು ಬಾಗಿಲು
ಕಮಾನು ದಾಟಿದಾಗ  ಸಿಗುವ ಸೆರೆಮನೆ ನೋಟ.
ಸೆರೆಮನೆ ಒಳಗಿನ ದೃಶ್ಯ
ಸೆರೆಮನೆಯ ಅಭೇಧ್ಯ ಗೋಡೆಗಳು.
ಸೆರೆಮನೆ ಮೇಲ್ಭಾಗ
ಸುತ್ತಲೂ ಕೋಟೆ ಕೊತ್ತಲಗಳಿಂದ ಆವರಿಸಿದ ಈ ಬಂಧೀಖಾನೆ ಯಿಂದ ತಪ್ಪಿಸಿಕೊಳ್ಳುವುದು  ಅಸಾಧ್ಯದ ಮಾತೆ ಸರಿ . ಇಲ್ಲಿಂದ ಯಾರೂ ಸಹ ಜೀವಂತವಾಗಿ ಬಂದ ಬಗ್ಗೆ ಮಾಹಿತಿ ಇಲ್ಲಾ. ಈ ಜಾಗದಲ್ಲಿ ಬ್ರಿಟೀಶ್ ಅಧಿಕಾರಿಗಳನ್ನು , ಮರಾಟಿ ನಾಯಕ "ದೊಂಡಿಯ್ಯಾ ವಾಗ್" ಮುಂತಾದ ಪ್ರಮುಖರನ್ನು ಸೆರೆ ಇಡಲಾಗಿತ್ತೆಂದು ತಿಳಿದುಬರುತ್ತದೆ.  ಇತಿಹಾಸದ ಕರಾಳಮುಖದ ಈ ಜಾಗದಲ್ಲಿ ಅತೀ ಕ್ರೂರವಾಗಿ ಖೈದಿಗಳನ್ನು ಶಿಕ್ಷಿಸಲಾಗುತ್ತಿತ್ತೆಂದು  ಹೇಳುತ್ತಾರೆ.ಹೊರ ಜಗತ್ತಿನ ಸಂಪರ್ಕ ವಿಲ್ಲದೆ ಅದೆಷ್ಟು ಜೀವಗಳು ಮರೆಯಾದವೋ ಗೊತ್ತಿಲ್ಲ.  ಬನ್ನಿ ಸೆರೆಮನೆಯ ಮೇಲೆ ಹೋಗೋಣ  ನಿಮಗೆ ಅಲ್ಲಿನ ಚಿತ್ರಣ ಬೇರೆಯದೇ ಆಗಿರುತ್ತದೆ.  ಸೆರೆಮನೆ ಮೇಲ್ಬಾಗಕ್ಕೆ ನೀವು ಬಂದರೆ ನೀವು ನಿಂತಿರುವ ಪ್ರದೇಶದ  ಕೆಳಗೆ ಒಂದು ಸೆರೆಮನೆ ಇದೆ ಎಂಬ ಅಂಶವೇ ನಿಮಗೆ ಮರೆತುಹೋಗುತ್ತದೆ.
ಸುಂದರ ಕಾವೇರಿ ನದಿಯ ಜೊತೆ ವೆಲ್ಲೆಸ್ಲಿ ಸೇತುವೆ ದರ್ಶನ.
ಸುಂದರ ಮನಮೋಹಕ ದೃಶ್ಯಗಳ ದರ್ಶನ. ಹಾಗು ಮೂರುಸುತ್ತಿನ ಕೋಟೆಯ ಬಗ್ಗೆ ಪುರಾವೆ.

ಅಂತಹ ಜಾಗದಲ್ಲಿ ನಿಮಗೆ ಕಾಣಸಿಗುವುದು ರಮಣೀಯ ದರ್ಶನ. ಶ್ರೀ ರಂಗ ಪಟ್ಟಣದ ಸುತ್ತಾ ಮೂರು ಸುತ್ತಿನ ಕೋಟೆ ಇತ್ತು ಎಂಬ ಬಗ್ಗೆ  ನಿಮಗೆ ಇಲ್ಲಿ ಪುರಾವೆ ಸಿಗುತ್ತದೆ. ಇಂತಹ ಸೆರೆಮನೆಯನ್ನು ಟಿಪ್ಪೂ ಸುಲ್ತಾನ ಫ್ರೆಂಚ್ ಇಂಜಿನಿಯರ್ ಗಳ ಸಹಕಾರದಲ್ಲಿ ನಿರ್ಮಿಸಿದನೆಂದು ಹೇಳುತ್ತಾರೆ. ಇದರ ಬಗ್ಗೆಯೂ  ಹೆಚ್ಚಿನ ಅಂಶ ಬೆಳಕಿಗೆ ಬರಬೇಕಾಗಿದೆ.  ಮುಂದೆ ನೀವು ಈ ಊರಿಗೆ  ಬಂದಾಗ ಇಲ್ಲಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯಮಾಡಿಕೊಳ್ಳೋಣ. ಅಲ್ಲಿಯವರೆಗೂ ನಮಸ್ಕಾರ.

6 ಕಾಮೆಂಟ್‌ಗಳು:

AntharangadaMaathugalu ಹೇಳಿದರು...

Very informative... Extremely good work. Thank you Balu sir...



shyamala

ಸುಬ್ರಮಣ್ಯ ಹೇಳಿದರು...

ಒಳ್ಳೇ ವಿಷಯ

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

Thank you Sir for good information with photos.

Prabhu Iynanda ಹೇಳಿದರು...

ಎಷ್ಟೊಂದು ಸೆರೆಮನೆಗಳು! ಯುದ್ಧ ಕೈದಿಗಳನ್ನು ಚಿತ್ರಹಿಂಸೆ ಮಾಡಿ ಅದೇನು ಆನಂದ ಪಡುತ್ತಿದನೋ ಆ ಟಿಪ್ಪು! ಎಪ್ಪತ್ತು-ಎಂಬತ್ತು ಸಾವಿರ ಕೊಡವರನ್ನು ಶಾಂತಿಸಂಧಾನಕ್ಕೆಂದು ಕರೆಸಿ, ಮೋಸದಿಂದ ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಸಾಗಿಸಿ, ಅವರನ್ನು ಇಂಥ ಸೆರೆಮನೆಗಳಲ್ಲಿಟ್ಟಿದ್ದ. ಅವುಗಳಿಂದ ತಪ್ಪಿಸಿಕೊಂಡು ಕೊಡಗಿಗೆ ಮರಳಿದವರು ಮತ್ತೆ ಕೊಡವರಾಗಲಾರದೆ, ಕೊಡವ ಮಾಪಿಳ್ಳೆಗಳಾದದು ಕರ್ಣಾಟಕದ ಒಂದು ಐತಿಹಾಸಿಕ ದುರಂತ.

Badarinath Palavalli ಹೇಳಿದರು...

ಇಂತಹ ಅಙ್ಞಾತ ಸೆರಮನೆಯ ಧರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು. ಅದಕ್ಕೊಪ್ಪೂವ ಚಿತ್ರಗಳು ನಿಮ್ಮ ಶ್ರಮ ತೋರುತ್ತವೆ. ಇತಿಹಾಸ ಆಸಕ್ತರಿಗೆ ನೀವು ಕೋಶದಂತವರು.

Unknown ಹೇಳಿದರು...

oh! very good info with lovely photos. i was missing all these so far. thank god i met you in Bangalore on 8 Jun and got to know about your blogs which you are managing . well done keep it up.