ಗುರುವಾರ, ಜೂನ್ 23, 2011

ಜಿ.ಬಿ. ಗೇಟು ಏನು ನಿನ್ನ ಗುಟ್ಟು!!! ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ !!!


ಜಿ.ಬಿ.ಗೇಟು !!!!
ಬಹಳ ದಿನಗಳ ನಂತರ ಮತ್ತೊಮ್ಮೆ ಈ ಬ್ಲಾಗ್  ಬರೆಯಲು ಕುಳಿತೆ , ಯಾರಿಗೂ ಬೇಡದ ವಿಚಾರ ವನ್ನು ತಿಳಿಸುವುದು ಬೇಡವೆಂದು ಅನ್ನಿಸಿತ್ತು ಆದರೂ ನನ್ನ ಮನಸ್ಸಿನ ಸಂತೋಷಕ್ಕೆ ಬರೆಯಲು ಕುಳಿತೆ ."ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ".ಮುಂದೊಮ್ಮೆ ಯಾರಿಗಾದರು  ಈ ಮಾಹಿತಿ ಖಂಡಿತಾ ಅನುಕೂಲ ವಾಗಬಹುದೆಂಬ ನಂಬಿಕೆ ನನಗಿದೆ,  ಶ್ರೀ ರಂಗ ಪಟ್ಟಣದ ರಂಗನಾಥನ ದೇವಾಲಯದ ಸಮೀಪ ಉತ್ತರಕ್ಕೆ ಕೋಟೆಯೊಳಗೆ ಒಂದು ಸಣ್ಣ ಬಾಗಿಲು ನಿಮ್ಮನ್ನು ಸೆಳೆಯುತ್ತದೆ !!. ಅದೇ ಜಿ.ಬಿ.ಗೇಟ್ ಅಂತ ಕರೆಯುವ ಬಾಗಿಲು.ಈ ಬಾಗಿಲಿಗೆ ಜಿ.ಬಿ. ಗೇಟ್ ಅಂತ ಹೆಸರು ಹೇಗೆ ಬಂತು ಎಂಬ ಮಾಹಿತಿ ಎಲ್ಲಿಯೂ ದಾಖಾಲಾಗಿರುವುದು ಕಂಡುಬಂದಿಲ್ಲ !![ಕೆಲವರು ಹೇಳುವಂತೆ ಈ ಗೇಟ್ ಅನ್ನು gate where the british enterd ಎಂದು ತಿಳಿಸುತ್ತಾರೆ! ಈ ಬಗ್ಗೆ ವಿವರ ತಿಳಿದಿಲ್ಲ ]ತನ್ನ ಗುಟ್ಟನ್ನು ಬಿಟ್ಟು ಕೊಡದ ಈ ಗೇಟಿನ ಆವರಣದೊಳಗೆ ಒಂದು ಹನುಮಂತನ ದೇವಾಲಯವಿದ್ದು ಕೋಟೆಯೊಳಗೆ ಸೇರಿಕೊಂಡಿದೆ .ಒಟ್ಟಿನಲ್ಲಿ ಜಿ.ಬಿ.ಗೇಟು ತನ್ನ ಗುಟ್ಟನ್ನು ಬಿಡದೆ ಗತಿಸಿಹ ಇತಿಹಾಸದ ಘಟನೆಗಳ ಮೂಕ ಸಾಕ್ಷಿಯಾಗಿ ಎಲೆಮರೆ ಕಾಯಿ ಯಂತಿದೆ.....! { ಇದರ ಬಗ್ಗೆ ಮಾಹಿತಿ ಇದ್ದವರು ಮಾಹಿತಿ ನೀಡಲು ಕೋರಿದೆ}ಆದರೆ ಕೆಲವು ದಾಖಲೆಗಳಲ್ಲಿ ಈ ಬಾಗಿಲಿನ ಮೂಲಕ ಬಾಂಬೆ ಸೈನ್ಯ ವನ್ನು ಯುದ್ದದಲ್ಲಿ ಎದುರಿಸಲಾಯಿತೆಂದು ಹೇಳಲಾಗಿದೆ . ಬನ್ನಿ ಒಳಗಡೆ ಹೋಗೋಣ  ಜಿ ಬಿ ಗೇಟಿನ ಒಳಗಡೆ ಬಾಗಿಲನ್ನು ಪ್ರವೇಶಿಸಿದರೆ ಮೆಟ್ಟಿಲುಗಳನ್ನು ಇಳಿದು ನಡೆದರೆ ನಿಮ್ಮ ಎಡ ಭಾಗಕ್ಕೆ  ಒಂದು ಆವರಣ ಗೋಚರಿಸುತ್ತದೆ ಇದು ಕೋಟೆಯ ಗೋಡೆಯೊಳಗೆ ಅವಿತು ಕೊಂಡಿದೆ. ಹೊರಗಡೆ ಕಾಣುವುದಿಲ್ಲ.ಹಾಗೆ ಎಡಗಡೆ ಸಿಗುವ ಹಜಾರ ಪ್ರವೇಶಿಸಿದರೆ  ಹನುಮನ ವಿಗ್ರಹ ಸಿಗುತ್ತದೆ  ದರ್ಶನ ಪಡೆದು ಮುಂದುವರೆದರೆ ಮತ್ತೊಂದು ಬಾಗಿಲು ನಿಮಗೆ ಕೋಟೆಯ ಪಕ್ಕದಲ್ಲಿ ಹರಿಯುವ ಕಾವೇರಿ ನಧಿಯ ದರ್ಶನ ಮಾಡಿಸುತ್ತದೆ
ಜಿ.ಬಿ.ಗೇಟು ಒಳಗಡೆ  ಕಾಣುವ ಹನುಮ ಸನ್ನಿಧಿ!!!!
ಜಿ ಬಿ.ಗೇಟಿನ ಒಳಗಡೆ ಹನುಮ ದೇಗುಲದಲ್ಲಿನ ಹಜಾರ!!!!!
ಈ ಗೇಟಿನಿಂದ ಹೊರ ಬಂದ ಸೈನ್ಯ ಬಾಂಬೆ ಸೈನ್ಯನ್ನು ಎದುರಿಸಿತಂತೆ!!!!!

 ಇದೆ ಬಾಗಿಲಿನ ಮೂಲಕ ಟಿಪ್ಪುವಿನ ಸೈನ್ಯ ಬಾಂಬೆಯ ಸೈನ್ಯ ವನ್ನು ಎದುರಿಸಿತೆಂದು ಹೇಳುತ್ತಾರೆ.ಹಾಗೆ ಮುಂದುವರೆದು ನಡೆದ ನನಗೆ ಒಣಗಿದ ನದಿಯಲ್ಲಿ  ಒಂದು ಶಿಲ್ಪಕಲಾ ಕೃತಿ  ಕಂಡು ಬಂತು.

ಯಾರಿಗೂ ಬೇಡದ ಕಲಾಕೃತಿ !!!
ನನ್ನಲ್ಲಿ ನೂರಾರು ಕಥೆಯುಂಟು!!!
ಕಾವೇರಿ ತಾಯಿ ಮಡಿಲಲ್ಲಿ  ಅಡಗಿ ಕುಳಿತಿಹ ಕಲಾಕೃತಿ !!!!
ಸುಂದರ ವಾದ ಕುದುರೆಯ ಕೆತ್ತನೆ ಯಾವ ದೇವಾಲಯದಲ್ಲಿ ಮೆರೆದಿತ್ತೋ ಕಾಣೆ ಆನಾಥ ವಾಗಿ ನದಿಯಲ್ಲಿ ಮಲಗಿತ್ತು ಅಮೂಲ್ಯ ಕಲಾಕೃತಿಯೊಂದು ಹೊರಗಡೆ  ಪ್ರಪಂಚಕ್ಕೆ ಕಾಣದಂತೆ ಇಲ್ಲಿ ಅವಿತು ಕೊಂಡಿತ್ತು. ಜಿ.ಬಿ.ಗೇಟಿನ ಒಳಗಡೆ ವಿಸ್ಮಯ ಒಂದು ಗೋಚರಿಸಿತ್ತು.ಮುಂದಿನ ಸಂಚಿಕೆ ಯಲ್ಲಿ ಲಾಲ್ ಮಹಲ್ ಗೆ ಹೋಗೋಣ.

4 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲೂ ಸರ್..

ಕುತೂಹಲ ಪೂರ್ಣವಾದ..
ಉಪಯುಕ್ತ ಮಾಹಿತಿ..

ಇನ್ನೊಮ್ಮೆ ನೋಡಿ ಬರಬೇಕು ಅಂತ ಅನಿಸ್ತ ಇದೆ...

ಬರೆಯುತ್ತಿರಿ.. ಜೈ ಹೋ !

ಮನಸು ಹೇಳಿದರು...

naavu noDbeku eniside... tumba oLLe lekhana dhanyavadagaLu sir...

ಸೀತಾರಾಮ. ಕೆ. / SITARAM.K ಹೇಳಿದರು...

ಗೇಟ್ ಒಫ್ ಬಾಂಬೆ ????

ಸೀತಾರಾಮ. ಕೆ. / SITARAM.K ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.