ಕಳೆದ ಸಂಚಿಕೆಯಲ್ಲಿ ಶ್ರೀ ರಂಗ ಪಟ್ಟಣದ ಅಂತಿಮ ಯುದ್ದದ ನೆನಪಿಗಾಗಿ ನಿರ್ಮಿಸಿರುವ ಶತಮಾನ ದಾಟಿದ ಯುದ್ದ ಸ್ಮಾರಕದ ಬಗ್ಗೆಪರಿಚಯ ಮಾಡಿಕೊಟ್ಟಿದ್ದೆ. ಬನ್ನಿಸನಿಹದಲ್ಲೇ ಇರುವ ಡೆಲ್ಲಿ ಗೇಟಿನ ಒಳಗಡೆ ಹೋಗಿಬರೋಣ.ನಾನು ಹಲವಾರು ಬಾರಿ ಓಡಾಡಿದ್ದರೂ ಕೂಡ ಹಲವು ತಿಂಗಳು ಈ ಜಾಗದ ಪೂರ್ಣ ವಿವರ ತಿಳಿದಿರಲಿಲ್ಲ ,ನಂತರ ಒಬ್ಬ ಸ್ನೇಹಿತರು ನನ್ನನ್ನು ಈ ಜಾಗಕ್ಕೆ ಕರೆದುಕೊಂಡು ಹೋಗಿ ಇದನ್ನು ತೋರಿಸಿದರು.ನಂತರ ನಾನು ಯುದ್ದ ಸ್ಮಾರಕ ನೋಡಲು ಬಂದರೆ ಈ ಜಾಗಕ್ಕೆ ತಪ್ಪದೆ ಭೇಟಿ ಕೊಡುತ್ತೇನೆ.ಯುದ್ದ ಸ್ಮಾರಕ ನೋಡಲು ತೆರಳುವ ಹಾದಿಯಲ್ಲಿ ನಿಮಗೆ ಬಲಭಾಗಕ್ಕೆ ಒಂದು ಕಮಾನು ಗೇಟು
ಕಾಣಿಸುತ್ತದೆ ,ಅದರ ಕಲ್ಲಿನ ಕಮಾನಿನ ಮೇಲೆ 'GATE TO DELHI BRIDGE'' ಎಂದುಬರೆಯಲಾಗಿದೆ.ನೋಡಿದವರಿಗೆ ಆಶ್ಚರ್ಯ ತರಿಸುವ ಈ ಕಮಾನು ಹೊಕ್ಕಿಒಳ ನಡೆದರೆ ನಿಮಗೆ ಬೇರೆಯದೇ ದರ್ಶನ ವಾಗುತ್ತದೆ ಅಲ್ಲಾ ಎಲ್ಲಿಯ ಡೆಲ್ಲಿ ಎಲ್ಲಿಯ ಶ್ರೀ ರಂಗ ಪಟ್ಟಣ ಅಂತಾ ಅನ್ನಿಸಲು ಶುರುಮಾಡುತ್ತೆ ,ಬನ್ನಿ ಒಳಗಡೆ ಹೋಗೋಣ .ಅರೆ ಇದೇನು ಇದೆಲ್ಲಾ ಶಿಥಿಲ ಗೊಂಡ ಕೋಟೆಯ ಸಾಮ್ರಾಜ್ಯ ಬ್ರಿಟೀಷರ ಸೈನ್ಯದ ದಾಳಿಗೆ ಸಿಕ್ಕಿ ನಲುಗಿದ ಕೋಟೆಯ ಅವಶೇಷಗಳು , ಇವನ್ನು ನೋಡಿ ಮುಂದುವರೆದರೆ ದಾಳಿಗೂ ಹೆದರದೆ ಜಗ್ಗದೆ ನಿಂತ ಕೋಟೆಯ ಒಳಭಾಗದ ಗೋಡೆಯ ಬುರುಜುಗಳ ದರ್ಶನ ಆಗುತ್ತದೆ. ಸ್ವಲ್ಪ ಮುಂದೆ ಬನ್ನಿ ಇಲ್ಲೊಂದು ಸಣ್ಣ ಬಾಗಿಲು ಇದೆ ಒಳಗಡೆ ಹೋಗೋಣ ಅರೆ ಕಾವೇರಿ ನದಿಯ ನೀರು ಕಂದಕದಲ್ಲಿ ಕಾಣುತ್ತದೆ . ಬಂದ ಹಾದಿಯಲ್ಲೇ ಮುಂದುವರೆದರೆ ಗಿಡ ಗಂಟಿ, ಬಳ್ಳಿಗಳಿಂದ ಮುಚ್ಚಿದ ಒಂದು ಗೋಡೆ ಕಾಣ ಸಿಗುತ್ತದೆ .ಅರೆ ಎತ್ತರದ ಗೋಡೆಯ ಮೇಲೆ ಎರಡುಕಲ್ಲಿನ ಚೌಕಟ್ಟಿನಲ್ಲಿ ಹನುಮಂತ ಹಾಗು ಗಣೇಶನ ವಿಗ್ರಹಗಳ ಮೂರ್ತಿ ಕಾಣಸಿಗುತ್ತವೆ.ಇದನ್ನು ಗೆಜೆಟ್ಟಿನಲ್ಲಿ ಹಿಂದೂ ವಾಲ್ ಅಥವಾ ವಿಜಯನಗರ ವಾಲ್ ಅಂತಾ ಉಲ್ಲೇಖಿಸಲಾಗಿದೆ.ಹೌದು ಶ್ರೀ ರಂಗ ಪಟ್ಟಣದ ಕೋಟೆಯನ್ನು ಮೊದಲು ವಿಜಯ ನಗರದ ಅರಸರ ಪ್ರತಿನಿಧಿ ನಾಗಮಂಗಲದ ತಿಮ್ಮಣ್ಣ ದಂಡನಾಯಕ ಕಟ್ಟಿಸಿದ ಎಂಬ ಮಾಹಿತಿ ನಿಮಗೆಲ್ಲಾ ತಿಳಿದೇ ಇದೆ .ಅದರ ಒಂದು ಭಾಗವಾಗಿ ಇದನ್ನು ಉಲ್ಲೇಖಿಸಿರಬಹುದು.ಮುಂದೆ ಸಾಗಲು ಹಾದಿಇಲ್ಲದ ಕಾರಣ ವಾಪಸ್ಸು ಬರಬೇಕು ಎನ್ನಿಸುತ್ತದೆ ,ಆದರೆ ಹಿಂದೆ ಇಲ್ಲಿ ಡೆಲ್ಲಿ ಬ್ರಿಡ್ಜ್ ಗೆ ಹೋಗಲು ಕಿರು ಸೇತುವೆಗಳನ್ನು ಕಂದಕದಲ್ಲಿ ನಿರ್ಮಿಸಿದ್ದಿರಬಹುದು.ಈಗ ಹಾಗೆ ಹೋಗಲು ಅವಕಾಶವಿಲ್ಲದ ಕಾರಣ ಮತ್ತೆ ಹಿಂತಿರುಗಿ ಕೋಟೆಯ ಮೇಲೆ ಹತ್ತಿ ನೋಡಿದರೆ ಡೆಲ್ಲಿ ಬ್ರಿಡ್ಜ್ ಇದ್ದ ಜಾಗದ ದರ್ಶನವಾಗುತ್ತದೆ.ಶ್ರೀ ರಂಗ ಪಟ್ಟಣದಿಂದ ಡೆಲ್ಲಿಗೆ ಹೇಗೆ ಹೋಗುತ್ತಿದ್ದರೋ ತಿಳಿಯದು ಆದರೆ ಈ ದಾರಿಯಿಂದ ಬ್ರಿಡ್ಜ್ ದಾಟಿದರೆ ಹಿರೋಡೆ [ಪಾಂಡವಪುರ ], ಮೇಲುಕೋಟೆ ,ನಾಗಮಂಗಲ,ಮಾಯಸಂದ್ರ ,ನಿಟ್ಟೂರು,ಶಿರಾ,ಪಾವಗಡ,ಗುತ್ತಿ,[ಅಂದ್ರ]ತಲುಪಬಹುದು ಆಗಿನ ಕಾಲದಲ್ಲಿ ಇವೆಲ್ಲಾ ಶ್ರೀ ರಂಗ ಪಟ್ಟಣದ ಟಿಪ್ಪೂ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದವು,ಬಹುಷಃ ಈ ಕಮಾನು ಗೇಟು ಉತ್ತರ ದಿಕ್ಕಿಗೆ ಮುಖ ಮಾಡಿದ ಕಾರಣ ಈ ಹೆಸರು ಬಂತೆಂದು ಕಾಣುತ್ತದೆ. ನಂತರ ಈ ಬ್ರಿಡ್ಜ್ ಅನ್ನು ಶ್ರೀ ರಂಗ ಪಟ್ಟಣಕ್ಕೆ ಒದಗುವ ವೈರಿಗಳ ದಾಳಿಯನ್ನು ತಡೆಗಟ್ಟಲು ಟಿಪ್ಪೂ ಕಾಲದಲ್ಲಿ ಈ ಬ್ರಿಡ್ಜ್ ಕೆಡವಿಸಿಹಾಕಲಾಯಿತೆಂದು ತಿಳಿದುಬರುತ್ತದೆ ಈ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ.ಆದರೂ ಈ ಕಮಾನು ಗೇಟಿನ ಮೂಲಕ ಹಲವು ಐತಿಹಾಸಿಕ ಘಟನೆಗಳು ಶ್ರೀ ರಂಗ ಪಟ್ಟಣಕ್ಕೆ ಹರಿದು ಬಂದಿರುವುದಂತೂ ಸತ್ಯ .
11 ಕಾಮೆಂಟ್ಗಳು:
sundara chitragalu.maahitipoorna baraha.
@ ಡಾ. ಡಿ.ಟಿ.ಕೆ.ಮೂರ್ತಿ ಸರ್ ನಿಮ್ಮ ಅಭಿಮಾನದ ಮಾತುಗಳಿಗೆ ಶರಣು.
namage gottillada eshto vicharagalannu saralavaagi chitragala sameta tilisiruvudakke dhanyavaadagalu sir....
namage gottillada eshto vicharagalannu saralavaagi chitragala sameta tilisiruvudakke dhanyavaadagalu sir....
sir uttamavaada mahiti nididdiri.mattu sundaravada chitragalu.dhanyavaadagalu.
sir uttamavaada mahiti nididdiri.mattu sundaravada chitragalu.dhanyavaadagalu.
@ ಉಷಾ ಮೇಡಂ ಇತಿಹಾಸವೇ ಹಾಗೆ ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು ಬಚ್ಚಿಟ್ಟುಕೊಂಡಿದೆ . ಅದರ ಒಳಗೆ ಹೊಕ್ಕಾಗ ಇಂತಹ ಮಾಹಿತಿಗಳು ತಿಳಿದುಬರುತ್ತದೆ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
@ ಕಲಾವತಿ ಮೇಡಂ ,[ಕಲರವ ], ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯ. ನಿಮಗೆ ವಂದನೆಗಳು.
nimmolagobba..,
ಮಾಹಿತಿ ನೀಡುತ್ತಿರಿ ಹೀಗೆಯೇ..
ಅಪರೂಪದ ಮಾಹಿತಿಗಳು
ಡೆಲ್ಲಿ ಗೇಟನ್ನು ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ನಿರ್ಮಿಸಲಾಯಿತು ಚಿಕ್ಕದೇವರಾಜ ಒಡೆಯರು ಮರಾಟರನ್ನು ಸೋಲಿಸಿದ ನಂತರ ಔರಂಗಜೇಬನು ಇವರನ್ನು ಸ್ನೇಹಪೂರ್ವಕವಾಗಿ ಬರ ಮಾಡಿಕೊಂಡನಂತೆ ನಂತರ ಚಿಕ್ಕದೇವರಾಜ ಒಡೆಯರು ಅವರ ಸ್ನೇಹದ ಗುರುತಿಗೆ ಡೆಲ್ಲಿ ಗೇಟನ್ನು ನಿರ್ಮಿಸಿದನು
ಕಾಮೆಂಟ್ ಪೋಸ್ಟ್ ಮಾಡಿ