ಸಕ್ಕರೆ ಜಿಲ್ಲೆ ಮಂಡ್ಯದಲ್ಲಿನ ಐತಿಹಾಸಿಕ ಶ್ರೀ ರಂಗಪಟ್ಟಣ ದಲ್ಲಿರುವ ಸ್ಮಾರಕ ಲೋಕದೊಳಗೆ ಒಂದು ಸುತ್ತು.ನಿಜದ ಇತಿಹಾಸ ಕಾವೇರಿ ಹಾಗೂ ಶ್ರೀ ರಂಗನಾಥನಿಗೆ ಮಾತ್ರ ಗೊತ್ತು!!
ಗುರುವಾರ, ಡಿಸೆಂಬರ್ 1, 2011
ಗುರುವಾರ, ನವೆಂಬರ್ 17, 2011
ಟಿಪ್ಪು ಮಡಿದದ್ದು ಎಲ್ಲಿ ??? ದೇಹಸಿಕ್ಕಿದ್ದು ಎಲ್ಲಿ ??? ಈ ಎರಡು ಸ್ಮಾರಕಗಳ ಗತ ಇತಿಹಾಸದಲ್ಲಿ !!!

ಕಳೆದ ಹಲವಾರು ಸಂಚಿಕೆಗಳಿಂದ ನೀವು ಶ್ರೀರಂಗಪಟ್ಟಣದ ಹಲವಾರು ಸ್ಮಾರಕಗಳ ಪರಿಚಯ ಮಾಡಿಕೊಂಡಿದ್ದೀರಿ , ಬನ್ನಿ ಈ ಸಂಚಿಕೆಯಲ್ಲಿ ಎರಡು ಶತಮಾನಗಳ ಹಿಂದಿನ ಘಟನೆಯ ಎರಡು ಪ್ರಮುಖ ಸ್ಮಾರಕಗಳ ಪರಿಚಯ ಮಾಡಿಕೊಳ್ಳೋಣ . ಶ್ರೀ ಗಂಗಾಧರೇಶ್ವರ ಸ್ವಾಮೀ ದೇವಾಲಯದ ಉತ್ತರಕ್ಕೆ ಸಮೀಪದಲ್ಲಿ ನಿಮಗೆ "ವಾಟರ್ ಗೇಟ್" ಎಂದು ಇಂಗ್ಲೀಷಿನಲ್ಲಿ ನಾಮ ಫಲಕ ಹೊತ್ತ ಒಂದು ಕಮಾನು ಸುರಂಗ ಕಾಣಿಸುತ್ತದೆ.ಅದರ ಸಮೀಪ ಹೋದರೆನಿಮಗೆ ಒಂದು ಕಾಲು ಹಾದಿ ನಿಮ್ಮನ್ನು ಕಾವೇರಿ ನದಿಯೆಡೆಗೆ ಕರೆದೊಯ್ಯುತ್ತದೆ . ಬಹಳ ಹಿಂದೆ ಅರಮನೆಯ ಪ್ರಮುಖರು ಕಾವೇರಿ ನದಿಗೆ ತೆರಳಲು ಈ ಸುರಂಗ ಬಾಗಿಲನ್ನು ಉಪಯೋಗಿಸುತ್ತಿದ್ದರೆಂದು ಹೇಳಲಾಗುತ್ತದೆ.
1799 ರ ಮೇ ೪ ರಂದು ನಡೆದ ಅಂತಿಮ ಯುದ್ದದಲ್ಲಿ ಬ್ರಿಟೀಷರೊಡನೆ ಕಾದಾಡಲು ಹೋದ ಟಿಪ್ಪೂ ಸುಲ್ತಾನನು ಈ ಪ್ರದೇಶದ ವಾಟರ್ ಗೇಟ್ ಹೊಕ್ಕನೆಂದೂ ಕಾದಾಟದ ಒಂದು ಘಟ್ಟದಲ್ಲಿ ಕೆಲವು ಕುತಂತ್ರಿಗಳ ಸಂಚಿನಿಂದ ಇಲ್ಲಿನ ಬಾಗಿಲನ್ನು ಮುಚ್ಚಲಾಯಿತೆಂದು ಇದರಿಂದಾಗಿ ಟಿಪ್ಪೂ ಸುಲ್ತಾನ್ ವೈರಿಗಳ ಹೊಡೆತಕ್ಕೆ ಸಿಕ್ಕಿ ವೀರ ಮರಣ ಹೊಂದಿದನೆಂದೂ ತಿಳಿಸಲಾಗುತ್ತಿದೆ.
ಅದಕ್ಕೆ ಪೂರಕವಾಗಿ ಹಲವಾರು ದಾಖಲೆಗಳು ಹೇಳಿದರೂ ಮತ್ತಷ್ಟು ದಾಖಲೆಗಳು ಟಿಪ್ಪು ಸುಲ್ತಾನ್ ಇಲ್ಲಿ ಮರಣ ಹೊಂದಲಿಲ್ಲವೆಂದೂ ಈ ಸ್ಮಾರಕ ದ ಪೂರ್ವಕ್ಕೆ ೧೦೦ ಯಾರ್ಡ್ ನಲ್ಲಿ ಸ್ತಾಪಿಸಲಾಗಿರುವ ಸ್ಮಾರಕವೇ ನಿಜವಾದ ನಿಖರವಾದ ಸ್ಮಾರಕವೆಂದು ಹೇಳುತ್ತಿವೆ.
ಆದರೆ ಅತೀ ಹೆಚ್ಚಿನ ದಾಖಲೆಗಳು ಪ್ರತಿ ಪಾದಿಸುತ್ತಿರುವುದು, ಗೆಜೆಟ್ ಗಳಲ್ಲಿನ ಮಾಹಿತಿಗಳು ಹಾಗು ಅಂತರ್ಜಾಲದಲ್ಲಿ ಸಿಗುತ್ತಿರುವ ಮಾಹಿತಿಗಳು ಟಿಪ್ಪೂ ಸುಲ್ತಾನ್ ಮರಣ ಹೊಂದಿದ ಸ್ಥಳವೆಂದು "ವಾಟರ್ ಗೇಟ್" ನತ್ತ ಬೆರಳು ತೋರುತ್ತಿವೆ. ಇದರಲ್ಲಿ ಸತ್ಯವೇನೆಂಬ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ , ಸಂಶೋದನೆ ಅಗತ್ಯ ವಿದೆ. ಆದರೂ ಈ ಎರಡು ಸ್ಮಾರಕಗಳ ಸಮೀಪ ಎಲ್ಲೋ ಒಂದು ಕಡೆ ಟಿಪ್ಪೂ ವೀರಮರಣ ಹೊಂದಿದನೆಂದು ಬಾವಿಸಬಹುದು.ಮೈಸೂರಿನ ಇತಿಹಾಸದ ಒಬ್ಬ ಪ್ರಮುಖ ಪಾತ್ರದಾರಿ , ಶ್ರೀ ರಂಗಪಟ್ಟಣದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸಿದ ಟಿಪ್ಪೂ ಸುಲ್ತಾನ ಇಲ್ಲಿ ತನ್ನ ಅಂತಿಮ ಪಯಣ ಮುಗಿಸಿದ್ದ!!!!, ಆದಕಾರಣ ಈ ಸ್ಮಾರಕಗಳು ಐತಿಹಾಸಿಕ ದೃಷ್ಟಿಯಿಂದ ಪ್ರಮುಖವಾಗಿವೆ. ಟಿಪೂ ಸುಲ್ತಾನನ ದೇಹ ಸಿಕ್ಕಿದ ಜಾಗವೆಂದು ಗುರುತಿಸಲಾಗಿರುವ ಪ್ರದೇಶದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದ್ದು ಅದರ ಚಿತ್ರಗಳು ಇಲ್ಲಿವೆ
ಈ ಸಂಚಿಕೆಯಲ್ಲಿ ಎರಡು ಸ್ಮಾರಕಗಳನ್ನು ಪರಿಚಯ ಮಾಡಿದ್ದು ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ ಅಲ್ಲಿಯವರೆಗೆ ಶುಭ ಸಮಯ.

1799 ರ ಮೇ ೪ ರಂದು ನಡೆದ ಅಂತಿಮ ಯುದ್ದದಲ್ಲಿ ಬ್ರಿಟೀಷರೊಡನೆ ಕಾದಾಡಲು ಹೋದ ಟಿಪ್ಪೂ ಸುಲ್ತಾನನು ಈ ಪ್ರದೇಶದ ವಾಟರ್ ಗೇಟ್ ಹೊಕ್ಕನೆಂದೂ ಕಾದಾಟದ ಒಂದು ಘಟ್ಟದಲ್ಲಿ ಕೆಲವು ಕುತಂತ್ರಿಗಳ ಸಂಚಿನಿಂದ ಇಲ್ಲಿನ ಬಾಗಿಲನ್ನು ಮುಚ್ಚಲಾಯಿತೆಂದು ಇದರಿಂದಾಗಿ ಟಿಪ್ಪೂ ಸುಲ್ತಾನ್ ವೈರಿಗಳ ಹೊಡೆತಕ್ಕೆ ಸಿಕ್ಕಿ ವೀರ ಮರಣ ಹೊಂದಿದನೆಂದೂ ತಿಳಿಸಲಾಗುತ್ತಿದೆ.

ಲೇಬಲ್ಗಳು:
ಇತಿಹಾಸ,
ಟಿಪ್ಪೂ ಸುಲ್ತಾನ್,
ವಾಟರ ಗೇಟ್
ಮಂಗಳವಾರ, ನವೆಂಬರ್ 1, 2011
ಶ್ರೀ ರಂಗ ಪಟ್ಟಣದಲ್ಲಿ ಶ್ರೀಗಂಧದ ಶೇಖರಣೆಗೆ ಒಂದು ದಾಸ್ತಾನು ಕೋಠಿ ಇತ್ತು!!! ಅದೇ ಸ್ವಾಮೀ ಸಂದಿಲ್ ಕೋಟಿ!!!!!
![]() |
ಗತ ಕಾಲದ ವೈಭವ ಕಳೆದುಕೊಂಡ ಶ್ರೀ ಗಂಧ ದಾಸ್ತಾನು ಕೋಠಿ |
ಬಹಳ ದಿನಗಳ ನಂತರ ಮತ್ತೆ ನನ್ನನ್ನು ಇಲ್ಲಿಗೆ ಕರೆತಂದ ವಿಚಾರ ಇದು . ಹಿಂದಿನ ಸಂಚಿಕೆಯಲ್ಲಿ ನಿಮಗೆ ಗಂಗಾಧರೇಶ್ವರ ಸ್ವಾಮೀ ದೇವಾಲಯ ಪರಿಚಯ ಮಾಡಿಕೊಟ್ಟಿದ್ದೆ.

![]() |
ಅಂದಿನ ವೈಭವದ ಸಂದಲ್ ಕೋಟಿ[ ಚಿತ್ರ ಕೃಪೆ ಅಂತರ್ಜಾಲ] |
ಅಂದು ಈ ಕೋಠಿಯ ವೈಭವ ತೋರುವ ಅಪರೂಪದ ಹಳೆಯ ಚಿತ್ರ ಇಲ್ಲಿದೆ ನೋಡಿ ಅದರ ರಕ್ಷಣೆಗೆ ನಿಂತ ಸಿಬ್ಬಂಧಿಗಳನ್ನೂ ನೀವು ಚಿತ್ರದಲ್ಲಿ ಕಾಣಬಹುದು. ಈ ಚಿತ್ರ ಸುಮಾರು ಒಂದು ನೂರ ಇಪ್ಪತ್ತು ವರ್ಷಗಳ ಹಿಂದೆ ತೆಗೆಯಲಾಗಿದ್ದು ಇತಿಹಾಸದ ವೈಭವದ ದಿನಗಳನ್ನು ಜ್ಞಾಪಿಸುತ್ತದೆ. ಸ್ವಲ್ಪ ಗಮನಿಸಿ ಕೋಠಿಯ ಪ್ರವೇಶ ದ್ವಾರದಲ್ಲಿ ಶ್ರೀ ಗಂಧದ ಮರದ ತುಂಡುಗಳಿಂದ ಕಲಾತ್ಮಕವಾಗಿ ಸಿಂಗರಿಸಿರುವುದನ್ನು ನಾವು ಕಾಣಬಹುದು .ಇಷ್ಟೆಲ್ಲಾ ಮೆರೆದಾಡಿದ ಈ ಭವ್ಯ ಪ್ರದೇಶದಲ್ಲಿ ಮೈಸೂರಿನ ಅಂತಿಮ ಯುದ್ದದ ನಂತರ ಇದರ ವಹಿವಾಟು ಸ್ಥಗಿತಗೊಂಡು ಆನಂತರದ ದಿನಗಳಲ್ಲಿ ಸ್ವಲ್ಪ ಕಾಲ ಪುರಸಭೆ ಕಚೇರಿಯಾಗಿ ನಂತರ ಈಗ "ಕುಸ್ತಿ" ಅಖಾಡವಾಗಿ ನಿಂತಿದೆ.
![]() |
ಹಾಲಿ ಕುಸ್ತಿ ಅಖಾಡ ಹೀಗಿದೆ |
ಸೋಮವಾರ, ಆಗಸ್ಟ್ 8, 2011
ಈ ದ್ವೀಪದಲ್ಲಿ ಹರಿಯಜೋತೆಗೆ ಹರನೂ ಇದ್ದಾನೆ !!!!! ಐತಿಹಾಸಿಕ ಗಂಗಾಧರೇಶ್ವರ ದೇವಾಲಯ ನೋಡೋಣ ಬನ್ನಿ !!!
ಶ್ರೀ ಗಂಗಾಧರೇಶ್ವರ ದೇವಾಲಯ. |
ಭಾನುವಾರ, ಜುಲೈ 3, 2011
"ಟಿಪ್ಪು ಸುಲ್ತಾನ " ವಾಸಿಸಿದ ಖಾಸಾ ಅರಮನೆ ಈ ಲಾಲ್ ಮೆಹಲ್ !!!!!
ದರ್ಬಾರ್ ಹಾಲ್ |
ಶ್ರೀ ರಂಗ ಪಟ್ಟಣದ ರಂಗನಾಥನ ದೇವಾಲಯದ ಪೂರ್ವ ದಿಕ್ಕಿಗೆ ಸಾಗಿ ಅಲ್ಲಿರುವ ವೃತ್ತದಲ್ಲಿ ಎಡಕ್ಕೆ ತಿರುಗಿದರೆ ಸ್ನಾನ ಘಟ್ಟಕ್ಕೆ ದಾರಿ ಸಾಗುತ್ತದೆ , ಆ ದಾರಿಯಲ್ಲಿ ಬಲಗಡೆ ಸುತ್ತಲೂ ಜಾಲರಿ ಹಾಕಿದ ಒಂದು ಪಾಳು ಗೋಡೆಗಳ ದರ್ಶನ ನಿಮಗೆ ಆಗುತ್ತದೆ . ಆ ಸ್ಮಾರಕವೇ "ಲಾಲ್ ಮಹಲ್ " ಅಥವಾ "ಟಿಪ್ಪು ಸುಲ್ತಾನ" ಖಾಸಾ ಅರಮನೆ .
ಲಾಲ್ ಮೆಹಲ್ ಒಳಗಿನ ಮೆಟ್ಟಿಲುಗಳು |
ಈ ಅರಮನೆ ಬಗ್ಗೆ ಹೆಚ್ಚಿನ ಮಾಹಿತಿ ಶ್ರೀ ರಂಗ ಪಟ್ಟಣ ಅಥವಾ ರಾಜ್ಯದ/ದೇಶದ ಅಧಿಕೃತ ದಾಖಲೆಗಳಲ್ಲಿ ಇಲ್ಲವಾದರೂ ಕೆಲವು ವಿದೇಶಿ ಪ್ರಕಟಣೆ ಗಳ ಪುಸ್ತಕ /ಅಂತರಜಾಲದಲ್ಲಿ ಜಾಲಾಡಿದಾಗ ಅಲ್ಪ ಸ್ವಲ್ಪ ಮಾಹಿತಿ ದೊರಕುತ್ತದೆ. ಬನ್ನಿ" ಲಾಲ್ ಮಹಲ್ " ಬಗ್ಗೆ ತಿಳಿಯೋಣ"ಲಾಲ ಮಹಲ್ " ಅಂದರೆ ಕೆಂಪು ಅರಮನೆ ಎಂದು ಅರ್ಥ. ಈ ಅರಮನೆಯ ಗೋಡೆಗಳೆಲ್ಲಾ ಕೆಂಪು ಬಣ್ಣದಿಂದ ಕೂಡಿದ್ದು ಈ ಹೆಸರು ಬರಲು ಕಾರಣವೆಂದು ತಿಳಿಯುತ್ತದೆ. ಕೆಳಗಡೆ ವಿಶಾಲವಾದ "ದರ್ಭಾರ್ ಹಾಲ್" ಹೊಂದಿದ್ದು ಎರಡು ಅಂತಸ್ತಿನ ಈ ಅರಮನೆ ಅತ್ಯಂತ ಬಿಗಿ ಬಂದೋಬಸ್ತ್ ಹೊಂದಿತ್ತು. ಟಿಪ್ಪು ಸುಲ್ತಾನ ನ ಖಾಸಗಿ ಜೀವನ ಈ ಅರಮನೆಯಲ್ಲಿ ಕಳೆದಿತ್ತು. ಉತ್ತಮವಾದ ಪುಸ್ತಕಸಂಗ್ರಹ , ಜನಾನ[ ಟಿಪ್ಪೂ ಪತ್ನಿಯರ ವಾಸ ], ಅವನ ಅಮೂಲ್ಯ ಸಂಪತ್ತಿನ ಸಂಗ್ರಹ , ಚಿನ್ನದಸಿಂಹಾಸನ ಎಲ್ಲವೂ ಬ್ರಿಟೀಷರಿಗೆ ದೊರೆತದ್ದು ಇಲ್ಲಿಯೇ. ಅರಮನೆಯ ಕೆಂಪು ಗೋಡೆಗಳ ಮೇಲೆ ಚಿನ್ನ ಲೇಪಿತ ಅಕ್ಷರಗಳಲ್ಲಿ 'ಖುರಾನಿನ ಹಿತೋಕ್ತಿ" ಗಳನ್ನೂ ಬರೆಸಿದ್ದನೆಂದು ಕೆಲವೆಡೆ ಹೇಳಲಾಗಿದೆ . ಅರಮನೆಯ ಹೊರಗೆ ಹಾಗು ಒಳಗೆ ಹುಲಿಗಳನ್ನು ಸರಪಳಿಗಳಿಂದ ಕಟ್ಟಿ ಕಾವಲಿಗೆ ನಿಲ್ಲಿಸಲಾಗಿತ್ತೆಂದು ಕೆಲವೆಡೆ ಹೇಳಲಾಗಿದೆ .
ಗುರುವಾರ, ಜೂನ್ 23, 2011
ಜಿ.ಬಿ. ಗೇಟು ಏನು ನಿನ್ನ ಗುಟ್ಟು!!! ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ !!!
![]() |
ಜಿ.ಬಿ.ಗೇಟು !!!! |
![]() |
ಜಿ.ಬಿ.ಗೇಟು ಒಳಗಡೆ ಕಾಣುವ ಹನುಮ ಸನ್ನಿಧಿ!!!! |
![]() |
ಜಿ ಬಿ.ಗೇಟಿನ ಒಳಗಡೆ ಹನುಮ ದೇಗುಲದಲ್ಲಿನ ಹಜಾರ!!!!! |
![]() |
ಈ ಗೇಟಿನಿಂದ ಹೊರ ಬಂದ ಸೈನ್ಯ ಬಾಂಬೆ ಸೈನ್ಯನ್ನು ಎದುರಿಸಿತಂತೆ!!!!! |
ಇದೆ ಬಾಗಿಲಿನ ಮೂಲಕ ಟಿಪ್ಪುವಿನ ಸೈನ್ಯ ಬಾಂಬೆಯ ಸೈನ್ಯ ವನ್ನು ಎದುರಿಸಿತೆಂದು ಹೇಳುತ್ತಾರೆ.ಹಾಗೆ ಮುಂದುವರೆದು ನಡೆದ ನನಗೆ ಒಣಗಿದ ನದಿಯಲ್ಲಿ ಒಂದು ಶಿಲ್ಪಕಲಾ ಕೃತಿ ಕಂಡು ಬಂತು.
ಭಾನುವಾರ, ಫೆಬ್ರವರಿ 20, 2011
ಕರ್ನಲ್ ಬೈಲೀ ಡನ್ಜನ್ ಹಾಗು ಪ್ರವಾಸಿಗಳು ಅವರಿಗೆ ತಕ್ಕ ಗೈಡುಗಳು!!!
ಬನ್ನಿ ಇಲ್ಲೊಂದು ಜೈಲಿದೆ ಅಲ್ಲಿಗೆ ಭೇಟಿ ಕೊಡೋಣ.ರಂಗನಾಥ ಸ್ವಾಮೀ ದೇವಾಲಯದ ಸ್ವಲ್ಪ ಸಮೀಪ ಉತ್ತರಕ್ಕೆ ಈ ಜೈಲು ಅಥವಾ ಡನ್ಜನ್ ಕಾಣಲು ಸಿಗುತ್ತದೆ. ಹೊರಗಡೆ ಇಂದ ನೋಡಿದರೆ ಒಂದು ಕಾವಲು ಬುರುಜಿನಂತೆ ಕಾಣುವ ಇದನ್ನು "ಸುಲ್ತಾನ್ ಬತೇರಿ " ಎಂದು ಕರೆಯಲಾಗುತ್ತಿತ್ತೆಂದು ಕೆಲವು ಗೆಜೆಟ್ ದಾಖಲೆಗಳು ತಿಳಿಸುತ್ತವೆ.ಈ ಪ್ರದೇಶದಲ್ಲಿ ಅತಿಯಾದ ಬಿಗಿ ಕಾವಲು ಪಡೆಗೆ ಸೈನಿಕರನ್ನು ನಿಯೋಜಿಸಲಾಗುತ್ತಿತ್ತೆಂದು ತಿಳಿದುಬರುತ್ತದೆ. ಕಾವಲು ಬತೇರಿ ಕೆಳಗೆ ನೆಲಮಾಳಿಗೆ ಯಲ್ಲಿ ಜೈಲು ನಿರ್ಮಾಣವಾಗಿದ್ದು ಆಂಗ್ಲ ಅಧಿಕಾರಿಗಳನ್ನು ಇಲ್ಲಿ ಸೆರೆಯಲ್ಲಿ ಇಟ್ಟಿದ್ದರೆಂದು ತಿಳಿದುಬರುತ್ತದೆ.ಹಾಗೆ ಸೆರೆಯಲ್ಲಿಟ್ಟ ಅಧಿಕಾರಿಗಳಲ್ಲಿ "ಕರ್ನಲ್ ಬೈಲಿ" ಸಹ ಸೆರೆಯಲ್ಲಿದ್ದನೆಂದು ,ತಿಳಿಸಲಾಗಿದೆ .
ಸೋಮವಾರ, ಫೆಬ್ರವರಿ 7, 2011
ದ್ವೀಪದಲ್ಲಿ ಕಂಡಿತ್ತು ಹಳೆಯ ಮಸೀದಿ!!!! ಹತ್ತಿರದಲ್ಲೇ ಇತಿಹಾಸ ಸಾರಿದ ರೈಲು ನಿಲ್ದಾಣ ತೋರಿದ ಐತಿಹಾಸಿಕ ಕುರುಹು!!!
ಶ್ರೀ ರಂಗಪಟ್ಟಣ ದ ವಿಸ್ಮಯವೇ ಹಾಗೆ ಕಳೆದ ಬಾರಿ ನಿಮಗೆ ಮದ್ದಿನ ಮನೆ ಹಾಗೂ ಗ್ಯಾರಿಸನ್ ಆಸ್ಪತ್ರೆ ಬಗ್ಗೆ ತಿಳಿಸಿದ್ದೆ. ಬನ್ನಿ ಈಗ ಮತ್ತೊಂದು ವಿಸ್ಮಯ ದತ್ತ ಸಾಗೋಣ, ಗ್ಯಾರಿಸನ್ ಆಸ್ಪತ್ರೆ ಯಾ ಹಿಂಬಾಗ ಬಂದರೆ ಕಾಣುತಿತ್ತು ಈ ಮಸೀದಿ , ಬನ್ನಿ ಹಳೆಯ ನೆನಪಿಗೆ ಜಾರೋಣ
ಭಾನುವಾರ, ಜನವರಿ 30, 2011
ಮದ್ದಿನ ಮನೆ ಹಾಗೂ ಗ್ಯಾರಿಸನ್ ಆಸ್ಪತ್ರೆ!!! ಮರೆಯಾಗುತ್ತಿರುವ ನೆನಪುಗಳು !!!
ಶ್ರೀ ರಂಗಪಟ್ಟಣದ ಸ್ಮಾರಕ ಪರ್ಯಟನೆ ಯಾತ್ರೆಯಲ್ಲಿ ಕಳೆದಬಾರಿ ಡೆಲ್ಲಿ ಗೇಟ್ ಬಗ್ಗೆ ಮಾಹಿತಿ ನೀಡಿದ್ದೆ, ಬನ್ನಿ ಇನ್ನೊಂದು ವಿಸ್ಮಯ ಸ್ಮಾರಕ ಪರಿಚಯ ಮಾಡಿಕೊಳ್ಳೋಣ.ಶ್ರೀರಂಗಪಟ್ಟಣ ದಲ್ಲಿ ನಿಮಗೆ ಕೆಲವುಕಡೆ " ಪಿರಮಿಡ್ " ಆಕಾರದ ಕೆಲವು ಕಟ್ಟಡಕಾಣಲು ಸಿಗುತ್ತವೆ , ಶ್ರೀ ರಂಗಪಟ್ಟಣ ಕ್ಕೂ ಈಜಿಪ್ಟ್ ಗೂ ಏನಾದರೂ ಸಂಭಂದವಿದೆಯಾ ಅಂತಾ ಅನುಮಾನ ಬರುತ್ತೆ . ಆದ್ರೆ ಕ್ಷಮಿಸಿ ಇವುಗಳನ್ನು ಈಜಿಪ್ಟ್ ನವರು ನಿರ್ಮಿಸಿದ್ದಲ್ಲಾ
, ಇದನ್ನು ಶ್ರೀ ರಂಗಪಟ್ಟಣ ಕೋಟೆ ಸಂರಕ್ಷಣೆಗೆ ಅಗತ್ಯವಿರುವ ಮದ್ದು ಗುಂಡು ಸಂರಕ್ಷಿಸಲುಹಾಗೂ ಯುದ್ದದ ಸಮಯದಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಕ್ಷಿಪ್ರವಾಗಿ ಕೋಟೆಯ ಎಲ್ಲಾ ಭಾಗಕ್ಕೂ ಮದ್ದು ಗುಂಡುಗಳು ಸರಬರಾಜು ಆಗುವಂತೆ ವೈಜ್ಞಾನಿಕವಾಗಿ ಯೋಚಿಸಿ ನಿರ್ಮಿಸಿದಂತ ಮದ್ದಿನ ಮನೆಗಳು.
ಒಳಗಡೆ ಕಾಲಿಟ್ಟರೆ ನೆಲಮಾಳಿಗೆ ಸಿಗುತ್ತದೆ ಅಲ್ಲಿ ಒಂದು ವಿಶಾಲವಾದ ಪ್ರದೇಶದಲ್ಲಿ ಮದ್ದು ಗುಂಡುಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡುತಿದ್ದುದು ಕಂಡು ಬರುತ್ತದೆ. ಈ ಮನೆಯ ಒಳ ಹೊಕ್ಕರೆ ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗೆ , ಮಳೆಗಾಲದಲ್ಲಿ ಶೀತವಿಳಿಯದೆ ಮದ್ದು ಗುಂಡುಗಳು ಪ್ರಕೃತಿ ವಿಕೋಪಕ್ಕೆ ಸಿಲುಕದಂತೆ ಎಚ್ಚರಿಕೆಯಿಂದ ಈ ಮನೆಯ ನಿರ್ಮಾಣ ಮಾಡಿದ್ದಾರೆ. ಬನ್ನಿ ಹತ್ತಿರದಲ್ಲೇ ಇರುವ ಮತ್ತೊಂದು ವಿಸ್ಮಯ ನೋಡೋಣ 
ಚಿತ್ರದಲ್ಲಿ ಕಾಣುತ್ತಿರುವುದು ಗ್ಯಾರಿಸನ್ ಆಸ್ಪತ್ರೆ ಯುದ್ದದ ಸಮಯದಲ್ಲಿ ಗಾಯಗೊಂಡ ಬ್ರಿಟೀಶ್ ಪರ ಅಧಿಕಾರಿಗಳಿಗೆ, ಸೈನಿಕರಿಗೆ ಇಲ್ಲಿ ಚಿಕಿತ್ಸೆ ನೀದಲಾಗುತ್ತಿತ್ತೆಂದು ಹೇಳುತ್ತಾರೆ.1799 ರಲ್ಲಿ ಇದನ್ನು ಲಾರ್ಡ್ ವೆಲ್ಲೆಸ್ಲಿ [ ಡ್ಯೂಕ್ ಆಫ್ ವೆಲ್ಲಿಂಗ್ಟನ್ ] ನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ.ಹಾಗೂ ಈ ಆಸ್ಪತ್ರೆ ಸುಮಾರು ವರ್ಷ ತನ್ನ ಸೇವೆ ಸಲ್ಲಿಸಿದ್ದಾಗಿ . ತಿಳಿದು ಬರುತ್ತದೆ. ಐತಿಹಾಸಿಕ ಮಹತ್ವಉಳ್ಳ ಇಂತಹ ಸ್ಮಾರಕಗಳು ಕಣ್ಮರೆಯಾಗುತ್ತಿರುವುದು ಇತಿಹಾಸದ ಅವನತಿಯೇ ಸರಿ.
ಭಾನುವಾರ, ಜನವರಿ 9, 2011
ಡೆಲ್ಲಿ ಬ್ರಿಡ್ಜ್ ಗೇಟಿನ ಒಳಗೆ ಹೊಕ್ಕಾಗ ಅವಿತು ಕುಳಿತಿದ್ದ ಹನುಮ ,ಗಣೇಶ!!!
ಕಳೆದ ಸಂಚಿಕೆಯಲ್ಲಿ ಶ್ರೀ ರಂಗ ಪಟ್ಟಣದ ಅಂತಿಮ ಯುದ್ದದ ನೆನಪಿಗಾಗಿ ನಿರ್ಮಿಸಿರುವ ಶತಮಾನ ದಾಟಿದ ಯುದ್ದ ಸ್ಮಾರಕದ ಬಗ್ಗೆಪರಿಚಯ ಮಾಡಿಕೊಟ್ಟಿದ್ದೆ. ಬನ್ನಿಸನಿಹದಲ್ಲೇ ಇರುವ ಡೆಲ್ಲಿ ಗೇಟಿನ ಒಳಗಡೆ ಹೋಗಿಬರೋಣ.ನಾನು ಹಲವಾರು ಬಾರಿ ಓಡಾಡಿದ್ದರೂ ಕೂಡ ಹಲವು ತಿಂಗಳು ಈ ಜಾಗದ ಪೂರ್ಣ ವಿವರ ತಿಳಿದಿರಲಿಲ್ಲ ,ನಂತರ ಒಬ್ಬ ಸ್ನೇಹಿತರು ನನ್ನನ್ನು ಈ ಜಾಗಕ್ಕೆ ಕರೆದುಕೊಂಡು ಹೋಗಿ ಇದನ್ನು ತೋರಿಸಿದರು.ನಂತರ ನಾನು ಯುದ್ದ ಸ್ಮಾರಕ ನೋಡಲು ಬಂದರೆ ಈ ಜಾಗಕ್ಕೆ ತಪ್ಪದೆ ಭೇಟಿ ಕೊಡುತ್ತೇನೆ.ಯುದ್ದ ಸ್ಮಾರಕ ನೋಡಲು ತೆರಳುವ ಹಾದಿಯಲ್ಲಿ ನಿಮಗೆ ಬಲಭಾಗಕ್ಕೆ ಒಂದು ಕಮಾನು ಗೇಟು
ಕಾಣಿಸುತ್ತದೆ ,
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)