ಸಕ್ಕರೆ ಜಿಲ್ಲೆ ಮಂಡ್ಯದಲ್ಲಿನ ಐತಿಹಾಸಿಕ ಶ್ರೀ ರಂಗಪಟ್ಟಣ ದಲ್ಲಿರುವ ಸ್ಮಾರಕ ಲೋಕದೊಳಗೆ ಒಂದು ಸುತ್ತು.ನಿಜದ ಇತಿಹಾಸ ಕಾವೇರಿ ಹಾಗೂ ಶ್ರೀ ರಂಗನಾಥನಿಗೆ ಮಾತ್ರ ಗೊತ್ತು!!
ಶನಿವಾರ, ಡಿಸೆಂಬರ್ 4, 2010
ಹಸಿರಿನಲ್ಲಿ ಕಳೆದು ಹೋದಶ್ರೀರಂಗ ಪಟ್ಟಣದ ಐತಿಹಾಸಿಕ ಸಕ್ಕರೆ ಕಾರ್ಖಾನೆ!!ವಿಶ್ವ ಮಾನ್ಯತೆಪಡೆದು ಮೆರೆದಿತ್ತು !!!!
ಗೆಳೆಯ ಸತ್ಯ ರವರೊಂದಿಗೆ ಶ್ರೀರಂಗ ಪಟ್ಟಣಕ್ಕೆ ಮೈಸೂರಿನಿಂದ ಹೊರಟವನಿಗೆ ರಂಗನ ತಿಟ್ಟಿನ ಸಮೀಪ ಸಿಕ್ಕಿದ ಈ ಪಾಳುಬಿದ್ದ ಗೋಡೆಗಳು ಕಣ್ಣಿಗೆ ಬಿದ್ದವು !ಸ್ಥಳಿಯರನ್ನು ವಿಚಾರಿಸಿದಾಗ ಇದು ಪಾಳು ಬಿದ್ದ ಸಕ್ಕರೆ ಕಾರ್ಖಾನೆಯೆಂದು ತಿಳಿಯಿತು!ನಂತರ ಬಿ.ಎಲ್.ರೈಸ್ ರವರ ಮೈಸೂರ್ ಗೆಜೆತೀರ್ ಹುಡುಕಿದಾಗ ಆಶ್ಚರ್ಯಕರ ವಿಚಾರ ತೆರೆದುಕೊಂಡಿತು!1847 ರಲ್ಲಿ ಸರ್ ಮಾರ್ಕ್ ಕಬ್ಬನ್ [ಬೆಂಗಳೂರಿನ ಕಬ್ಬನ್ ಪಾರ್ಕ್ ಇವರ ಹೆಸರಿನಲ್ಲಿದೆ ]ಮೈಸೂರಿನ ಅಂದಿನ ಕಮಿಷನರ್ ರವರು ಪಾಲಹಳ್ಳಿ ಅಷ್ಟಗ್ರಾಮ ಸಕ್ಕರೆ ಕಾರ್ಖಾನೆ [the ashtagram sugar works}ಸ್ಥಾಪಿಸಿದರೆಂದು ಈ ಭಾಗದ ರೈತರು ಬೆಳೆದ ಕಬ್ಬಿನಿಂದ ಸಕ್ಕರೆ ತಯಾರಿಕೆ ನಡೆದಿತೆಂದು ,ಇಲ್ಲಿನ ಯಂತ್ರ ಗಳನ್ನೂ ಗ್ರೋವ್ಸ್ ಅಂಡ್ ಕಂಪನಿ ಪೂರೈಸಿತೆಂದು,ತಿಳಿದು ಬಂತು!ಹಾಗೆ ಮುಂದುವರೆದು ಈ ಕಾರ್ಖಾನೆಯಲ್ಲಿ 10 ಜನ ಯುರೋಪಿನವರು ಹಾಗು 300 ಮಂದಿ ಸ್ಥಳಿಯರು ಕೆಲಸ ಮಾಡಿರುವುದು ಕಂಡುಬರುತ್ತದೆ!ಇಲ್ಲಿ ತಯಾರಾದ ಹರಳಿನ ಸಕ್ಕರೆ ಉತ್ತಮ ಗುಣಮಟ್ಟದಿಂದ ಪ್ರಸಿದ್ದಿ ಪಡೆದು ಆ ದಿನಗಳಲ್ಲೇ ಲಂಡನ್ನಿನ ಪ್ರದರ್ಶನದಲ್ಲಿ 1851,ಮತ್ತು 1861 ರಲ್ಲಿ ಪ್ರಶಸ್ತಿ ಪಡೆದು ನಂತರ ಪ್ಯಾರಿಸ್ಸ್ಸಿನ ಯುನಿವರ್ಸಲ್ ಪ್ರದರ್ಶನದಲ್ಲಿಯೂ ಸಹ 1867ರಲ್ಲಿ ಅತ್ಯುತ್ತಮ ಸಕ್ಕರೆಯೆಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡು ಮೆರೆದಿದೆ!ನಂತರ ಹಾಗೆ ಇತಿಹಾಸಕಾರರು ಕಾರಣ ಕಂಡುಹಿಡಿಯಲಾಗದ ಪ್ರಯುಕ್ತ ಕಾರ್ಖಾನೆ ಯಾಕೆ ಮುಚ್ಚಿತು ಎಂಬುದೂ ತಿಳಿದು ಬರುವುದಿಲ್ಲ ! ಅಂದು ವಿಶ್ವ ಮಾನ್ಯತೆ ಪಡೆದು ಮೆರೆದು ಇಂದು ಗತ ನೆನಪಿಗೆ ಸಾಕ್ಷಿಯಾಗಿ ಯಾರು ನಂಬದ ವಿಚಾರಗಳ ಕುರುಹುಗಳಾಗಿ ಅನಾಥವಾಗಿ ಯಾರಿಗೂ ಬೇಡವಾಗಿ ದಿನ ದಿನವು ಕರಗುತ್ತಾ! ಮರುಗುತ್ತಾ! ನಿಂತಿವೆ .ಚಿತ್ರಗಳನ್ನು ನೋಡಿ ಇತಿಹಾಸಕ್ಕೆ ಹಾಗೂ ಈ ಕಾರ್ಖಾನೆಗೆ ಒಂದು ಥ್ಯಾಂಕ್ಸ್ ಹೇಳೋಣ ಅಲ್ವ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
3 ಕಾಮೆಂಟ್‌ಗಳು:
ಬಾಲು ಸರ್ ರವರೆ ನಿಮ್ಮ ಪ್ರಯತ್ನ ಅತ್ಯುತ್ತಮ ವಾಗಿದೆ.ಖಂಡಿತ ಮುಂದುವರೆಸಿ.ಮಾನವೀಯ ಮೌಲ್ಯ ಗಳಂತೆ ಐತಿಹಾಸಿಕ ಪುರಾವೆಗಳು ಅನಾಥವಾಗಿರುವುದು ವಿಷಾದನೀಯ.ಅಭಿನಂದನೆಗಳು
Realy Great !!
ಇದೊಂದು ಅದ್ಭುತ ಶೋಧನೆ....
ಕಾಮೆಂಟ್ ಪೋಸ್ಟ್ ಮಾಡಿ