ದರ್ಬಾರ್ ಹಾಲ್ |
ಶ್ರೀ ರಂಗ ಪಟ್ಟಣದ ರಂಗನಾಥನ ದೇವಾಲಯದ ಪೂರ್ವ ದಿಕ್ಕಿಗೆ ಸಾಗಿ ಅಲ್ಲಿರುವ ವೃತ್ತದಲ್ಲಿ ಎಡಕ್ಕೆ ತಿರುಗಿದರೆ ಸ್ನಾನ ಘಟ್ಟಕ್ಕೆ ದಾರಿ ಸಾಗುತ್ತದೆ , ಆ ದಾರಿಯಲ್ಲಿ ಬಲಗಡೆ ಸುತ್ತಲೂ ಜಾಲರಿ ಹಾಕಿದ ಒಂದು ಪಾಳು ಗೋಡೆಗಳ ದರ್ಶನ ನಿಮಗೆ ಆಗುತ್ತದೆ . ಆ ಸ್ಮಾರಕವೇ "ಲಾಲ್ ಮಹಲ್ " ಅಥವಾ "ಟಿಪ್ಪು ಸುಲ್ತಾನ" ಖಾಸಾ ಅರಮನೆ .
ಲಾಲ್ ಮೆಹಲ್ ಒಳಗಿನ ಮೆಟ್ಟಿಲುಗಳು |
ಈ ಅರಮನೆ ಬಗ್ಗೆ ಹೆಚ್ಚಿನ ಮಾಹಿತಿ ಶ್ರೀ ರಂಗ ಪಟ್ಟಣ ಅಥವಾ ರಾಜ್ಯದ/ದೇಶದ ಅಧಿಕೃತ ದಾಖಲೆಗಳಲ್ಲಿ ಇಲ್ಲವಾದರೂ ಕೆಲವು ವಿದೇಶಿ ಪ್ರಕಟಣೆ ಗಳ ಪುಸ್ತಕ /ಅಂತರಜಾಲದಲ್ಲಿ ಜಾಲಾಡಿದಾಗ ಅಲ್ಪ ಸ್ವಲ್ಪ ಮಾಹಿತಿ ದೊರಕುತ್ತದೆ. ಬನ್ನಿ" ಲಾಲ್ ಮಹಲ್ " ಬಗ್ಗೆ ತಿಳಿಯೋಣ"ಲಾಲ ಮಹಲ್ " ಅಂದರೆ ಕೆಂಪು ಅರಮನೆ ಎಂದು ಅರ್ಥ. ಈ ಅರಮನೆಯ ಗೋಡೆಗಳೆಲ್ಲಾ ಕೆಂಪು ಬಣ್ಣದಿಂದ ಕೂಡಿದ್ದು ಈ ಹೆಸರು ಬರಲು ಕಾರಣವೆಂದು ತಿಳಿಯುತ್ತದೆ. ಕೆಳಗಡೆ ವಿಶಾಲವಾದ "ದರ್ಭಾರ್ ಹಾಲ್" ಹೊಂದಿದ್ದು ಎರಡು ಅಂತಸ್ತಿನ ಈ ಅರಮನೆ ಅತ್ಯಂತ ಬಿಗಿ ಬಂದೋಬಸ್ತ್ ಹೊಂದಿತ್ತು. ಟಿಪ್ಪು ಸುಲ್ತಾನ ನ ಖಾಸಗಿ ಜೀವನ ಈ ಅರಮನೆಯಲ್ಲಿ ಕಳೆದಿತ್ತು. ಉತ್ತಮವಾದ ಪುಸ್ತಕಸಂಗ್ರಹ , ಜನಾನ[ ಟಿಪ್ಪೂ ಪತ್ನಿಯರ ವಾಸ ], ಅವನ ಅಮೂಲ್ಯ ಸಂಪತ್ತಿನ ಸಂಗ್ರಹ , ಚಿನ್ನದಸಿಂಹಾಸನ ಎಲ್ಲವೂ ಬ್ರಿಟೀಷರಿಗೆ ದೊರೆತದ್ದು ಇಲ್ಲಿಯೇ. ಅರಮನೆಯ ಕೆಂಪು ಗೋಡೆಗಳ ಮೇಲೆ ಚಿನ್ನ ಲೇಪಿತ ಅಕ್ಷರಗಳಲ್ಲಿ 'ಖುರಾನಿನ ಹಿತೋಕ್ತಿ" ಗಳನ್ನೂ ಬರೆಸಿದ್ದನೆಂದು ಕೆಲವೆಡೆ ಹೇಳಲಾಗಿದೆ . ಅರಮನೆಯ ಹೊರಗೆ ಹಾಗು ಒಳಗೆ ಹುಲಿಗಳನ್ನು ಸರಪಳಿಗಳಿಂದ ಕಟ್ಟಿ ಕಾವಲಿಗೆ ನಿಲ್ಲಿಸಲಾಗಿತ್ತೆಂದು ಕೆಲವೆಡೆ ಹೇಳಲಾಗಿದೆ .